ಡ್ಯಾನ್ಸ್ ಮಾಡುತ್ತಾ ಮೈಮರೆತ ವರ- ಕಾದು ಕಾದು ಬೇರೊಬ್ಬನನ್ನು ಮದುವೆಯಾದ ವಧು

ಡ್ಯಾನ್ಸ್ ಮಾಡುತ್ತಾ ಮೈಮರೆತ ವರ- ಕಾದು ಕಾದು ಬೇರೊಬ್ಬನನ್ನು ಮದುವೆಯಾದ ವಧು

ಮದುವೆ ಅಂದಾಗ ಅಲ್ಲಿ ಹಾಡು, ಕುಣಿತ, ಗುಂಡು- ತುಂಡು ಇದ್ದೇ ಇರುತ್ತದೆ. ಮದುವೆಗೆ ಬಂದ ಸಂಬಂಧಿಕರು, ಸ್ನೇಹಿತರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ವರನೊಬ್ಬ ಹುಚ್ಚೆದ್ದು ಕುಣಿದಿದ್ದು ಆತನನ್ನೇ ಸಂಕಷ್ಟಕ್ಕೆ ದೂಡಿದೆ.

ಹೌದು, ಕಲ್ಯಾಣ ಮಂಟಪದಲ್ಲಿ ಗಂಟೆಗಟ್ಟಲೇ ಡ್ಯಾನ್ಸ್ ಮಾಡುತ್ತಿದ್ದ ವರನ ವರ್ತನೆಯಿಂದ ಬೇಸತ್ತ ವಧು, ತನ್ನ ವಿವಾಹವನ್ನೇ ರದ್ದು ಮಾಡಿ ಬೇರೊಬ್ಬನೊಂದಿಗೆ ಸಪ್ತಪದಿ ತುಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಕಾರಿಗೆ ಅಡ್ಡ ಬಂದ ಎಮ್ಮೆ – ರೈತನಿಗೆ ದಂಡ ವಿಧಿಸಿ ವಿವಾದಕ್ಕೀಡಾದ ಡಿಸಿ

ಮದುವೆ ಮಂಟಪಕ್ಕೆ ವರ ಸರಿಯಾದ ಸಮಯಕ್ಕೆ ಬರಬೇಕಿತ್ತು. ಆದರೆ ಶುಭ ಗಳಿಗೆ ಕಳೆದರೂ ವರ ಮಂಟಪಕ್ಕೆ ಬಂದಿರಲಿಲ್ಲ.  ವಧು ಹಾಗೂ ಆಕೆಯ ಕುಟುಂಬಸ್ಥರು ಎಷ್ಟು ಕಾದರೂ ವರ ಮತ್ತು ಆತನ ಕುಟುಂಬಸ್ಥರ ಸುಳಿವೇ ಇರಲಿಲ್ಲ. ಇತ್ತ ಮದುವೆ ಮಂಟಪಕ್ಕೆ ಬಂದ ಮೇಲೂ ಕಂಠಪೂರ್ತಿ ಕುಡಿದು ಡ್ಯಾನ್ಸ್ ನಲ್ಲಿ ಮಗ್ನರಾಗಿದ್ದರು. ಸ್ನೇಹಿತರು ಡ್ಯಾನ್ಸ್ ಮಾಡುವುದನ್ನು ನೋಡಿದ ವರ, ತಾನೂ ಕಾರಿನಿಂದ ಇಳಿದು ಪಾನಮತ್ತ ಸ್ನೇಹಿತರೊಂದಿಗೆ ಕುಣಿದಿದ್ದಾನೆ.

ಕೆಲವು ಗಂಟೆ ಕಾದ ನಂತರ ವಧುವಿನ ತಂದೆ ನೃತ್ಯವನ್ನು ನಿಲ್ಲಿಸಿ ಮದುವೆಗೆ ಬರುವಂತೆ ವರನನ್ನು ವಿನಂತಿಸಿದಾಗ, ಆತನ ಸ್ನೇಹಿತರು ವಧುವಿನ ತಂದೆ ಮತ್ತು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಜೋರಾಗಿ ನಡೆಯಿತು. ಇದರಿಂದ ಬೇಸತ್ತ ವಧು, ಅಲ್ಲಿಯೇ ಆ ಮದುವೆ ರದ್ದು ಮಾಡಿದ್ದಾಳೆ.

ಈ ಅವಮಾನದಿಂದ ತಪ್ಪಿಸಿಕೊಳ್ಳಲು ವಧುವಿನ ಕುಟುಂಬಸ್ಥರು, ಬೇರೆ ಹುಡುಗನೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ಬಳಿಕ ಆಕೆಯ ಸ್ನೇಹಿತನೊಂದಿಗೆ ಮದುವೆ ಮಾಡಿದ್ದಾರೆ. ಮರುದಿನ ವರನ ಮನೆಯವರು ಕೂಡ ಮದುವೆ ನಿಶ್ಚಯಿಸಿ, ಬೇರೊಂದು ಹುಡುಗಿ ಜೊತೆ ಮದುವೆ ಮಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಆ ದಿನ ವರನ ಕಡೆಯವರು ಯಾರೊಬ್ಬರು ಒಂದು ಹನಿ ಮದ್ಯ ಸೇವಿಸಿರಲಿಲ್ಲ.

suddiyaana