ಹುಡುಗಿ ಚೆನ್ನಾಗಿದ್ದಾಳೆ ಎಂದು ಬಡತನವನ್ನೂ ಲೆಕ್ಕಿಸದೆ ಮದುವೆ ಮಾಡಿಕೊಂಡ್ರು – ಮಾರನೇ ದಿನವೇ ಚಿನ್ನಾಭರಣದ ಜೊತೆ ವಧು ಪರಾರಿ

ಹುಡುಗಿ ಚೆನ್ನಾಗಿದ್ದಾಳೆ ಎಂದು ಬಡತನವನ್ನೂ ಲೆಕ್ಕಿಸದೆ ಮದುವೆ ಮಾಡಿಕೊಂಡ್ರು – ಮಾರನೇ ದಿನವೇ ಚಿನ್ನಾಭರಣದ ಜೊತೆ ವಧು ಪರಾರಿ

ಮದುವೆ ಒಂದು ಅದ್ಭುತವಾದ ಬಂಧ. ಈ ಸಂಬಂಧವು ಎರಡು ಜೀವಗಳನ್ನು ಒಟ್ಟಿಗೆ ಬೆಸೆಯುತ್ತದೆ. ಇದು ಜೀವನದ ಅತ್ಯಂತ ಮಹತ್ವದ ನಿರ್ಧಾರ ಕೂಡ ಹೌದು. ಹುಟ್ಟು, ಸಾವು, ಮದುವೆ, ಮೂರು ದೇವರ ಇಚ್ಛೆ ಎಂಬ ಮಾತಿದೆ. ಆದ್ದರಿಂದ ಮದುವೆಯು ಬಹುಮಟ್ಟಿಗೆ ಪೂರ್ವನಿರ್ಧರಿತವಾದ ಸಂಬಂಧವಾಗಿದೆ ಎಂದು ಭಾವಿಸಲಾಗಿದೆ. ಆದರೆ ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಆತುರಪಡಬಾರದು ಎಂದು ಎಲ್ಲರೂ ಹೇಳುತ್ತಾರೆ. ಇಲ್ಲದಿದ್ದರೆ ದೊಡ್ಡ ಎಡವಟ್ಟೇ ನಡೆದು ಬಿಡುತ್ತದೆ.

ಇದನ್ನೂ ಓದಿ : ಬದುಕಿನ ಪಯಣ ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ – ‘ಎಂದೆಂದಿಗೂ ಮೇಲಕ್ಕೆ ಹಾರು ನನ್ನ ಪುಟ್ಟ ತಂಗಿ’ ಎಂದು ಸಹೋದರನ ಕಂಬನಿ

ಮದುವೆಯಾಯ್ತು ಮನೆಗೆ ಸೊಸೆ ಬಂದಳು ಎಂದು ಖುಷಿಯಲ್ಲಿದ್ದ ಇದೊಂದು ಕುಟುಂಬ ಒಂದೇ ರಾತ್ರಿಗೆ ಆ ಖುಷಿಯೆಲ್ಲಾ ಮಾಯವಾಗಿದೆ. ಮದುವೆಯಾದ ಮರುದಿನವೇ 1.5 ಲಕ್ಷ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಅತ್ತೆ ಮನೆಯಿಂದ ವಧು ಪರಾರಿಯಾಗಿದ್ದಾಳೆ. ಚಂಢೀಗಡ ರಾಜ್ಯದ ಗುರುಗ್ರಾಮದ ಬಿಲಾಸ್ಪುರ ಪ್ರದೇಶದಲ್ಲಿ ಘಟನೆ ನಡೆದಿದೆ. ಈ ಸಂಬಂಧ ವರನ ತಂದೆ ಅಶೋಕ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಕಿರಿಯ ಮಗನಿಗೆ ಮದುವೆಯಾಗಬೇಕು. ಹೀಗಾಗಿ ಹುಡುಗಿ ಹುಡುಕುವಂತೆ ಸಂಬಂಧಿಕರ ಬಳಿ ಹೇಳಿದ್ದೆ. ಅಂತೆಯೇ ಸಂಬಂಧಿಕ ಮನಿಶ್ ಎಂಬಾತ ಮಂಜುವನ್ನು ಪರಿಚಯ ಮಾಡಿಕೊಟ್ಟಿದ್ದು, ಆತ ಒಬ್ಬಳು ಹುಡುಗಿಯನ್ನು ತೋರಿಸಿದ್ದಾನೆ. ನಿಮ್ಮ ಮಗನಿಗೆ ಈಕೆ ಸರಿಯಾದ ಜೋಡಿಯಾಗುತ್ತಾಳೆ ಎಂದು ತಿಳಿಸಿದ್ದಾನೆ ಎಂದು ಹೇಳಿದರು. ಯುವತಿ ಕುಟುಂಬ ಬಡತನದಿಂದ ಕೂಡಿದ್ದು, ಅವರ ಬಳಿ ಹಣವಿಲ್ಲ ಎಂದು ಮಂಜು ಮತ್ತು ಆತನ ಸಹಚರರು ತಿಳಿಸಿದ್ದಾರೆ. ಇದಕ್ಕೆ ಅಶೋಕ್ ಕುಮಾರ್ ತನ್ನ ಕುಟುಂಬಕ್ಕೆ ವರದಕ್ಷಿಣೆ ಬೇಡ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಯುವತಿ ನನ್ನ ಮನೆಯವರಿಗೆ ಇಷ್ಟವಾದ ನಂತರ ನಾನು ಆಕೆಯ ಕುಟುಂಬಕ್ಕೆ 1 ಲಕ್ಷ ಮತ್ತು ಕೆಲವು ಬಟ್ಟೆಗಳನ್ನು ನೀಡಿದ್ದೇನೆ. ಮದುವೆಯ ನಂತರ ಮನೆಯಲ್ಲಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ಇತ್ತು. ಎಂದಿನಂತೆ ಮರುದಿನ ಬೆಳಗ್ಗೆ ಮಗ ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಸೊಸೆ ನಾಪತ್ತೆಯಾಗಿದ್ದಾಳೆ ಎಂದು ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದರು. ಸೊಸೆ ಕಾಣೆಯಾದ ಬಳಿಕ ಮನೆ ಪರಿಶೀಲನೆ ನಡೆಸಿದೆವು. ಈ ವೇಳೆ 1.5 ಲಕ್ಷ ನಗದು ಹಾಗೂ ಚಿನ್ನಾಭರಣಗಳು ಕೂಡ ಕಾಣೆಯಾಗಿದ್ದು, ಸೊಸೆ ಅದರೊಂದಿಗೆ ಓಡಿ ಹೋಗಿರುವುದು ಬಯಲಾಯಿತು. ಇತ್ತ ಸಂಬಂಧ ಮಾಡಿದ್ದ ಮಂಜುಗೆ ಈ ವಿಚಾರ ತಿಳಿಸಲಾಯಿತು. ಆದರೆ ಆತ ಕೊಲೆ ಬೆದರಿಕೆ ಹಾಕಿದ ಎಂದು ಪೊಲೀಸರಿಗೆ ಅಶೋಕ್ ಕುಮಾರ್ ತಿಳಿಸಿದ್ದಾರೆ. ಘಟನೆ ಬಳಿಕ ಪ್ರೀತಿ, ಮಂಜು ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಬಿಲಾಸ್‍ಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Shantha Kumari