ಬ್ಯಾಟಿಂಗ್ ಬೆಂಕಿ.. ಬೌಲಿಂಗ್ ಬಿರುಗಾಳಿ – IPLನಲ್ಲಿ ಧೂಳೆಬ್ಬಿಸಿದ ಯಂಗ್ ಸ್ಟರ್ಸ್  
ಟೀಂ ಇಂಡಿಯಾ ಸೇರಲು ಯಾರೆಲ್ಲಾ ರೆಡಿ?

ಬ್ಯಾಟಿಂಗ್ ಬೆಂಕಿ.. ಬೌಲಿಂಗ್ ಬಿರುಗಾಳಿ – IPLನಲ್ಲಿ ಧೂಳೆಬ್ಬಿಸಿದ ಯಂಗ್ ಸ್ಟರ್ಸ್  ಟೀಂ ಇಂಡಿಯಾ ಸೇರಲು ಯಾರೆಲ್ಲಾ ರೆಡಿ?

ಐಪಿಎಲ್ ಅನ್ನೋದು ಈಗ ಜಸ್ಟ್ ಟೂರ್ನಮೆಂಟ್ ಆಗಿ ಉಳಿದಿಲ್ಲ. ನೂರಾರು ಟ್ಯಾಲೆಂಟೆಡ್ ಪ್ಲೇಯರ್​​ಗಳಿಗೆ ಅವಕಾಶ ಕೊಟ್ಟಿದೆ. ಫೈನಾನ್ಶಿಯಲಿ ಸ್ಟ್ರಾಂಗ್ ಮಾಡಿದೆ. ವರ್ಲ್ಡ್ ಕ್ಲಾಸ್ ಕ್ರಿಕೆಟರ್​ಗಳನ್ನೆಲ್ಲಾ ಒಗ್ಗೂಡಿಸಿದೆ. ಬೆಸ್ಟ್ ಎನಿಸಿಕೊಂಡವ್ರು ಪರ್ಫೆಕ್ಟ್ ಪ್ಲೇಯರ್​ಗಳನ್ನಾಗಿ ರೂಪಿಸಿದೆ.  ಸಾಕಷ್ಟು ಆಟಗಾರರಿಗೆ ಟೀಂ ಇಂಡಿಯಾ ಬಾಗಿಲು ಕೂಡ ಓಪನ್ ಆಗಿದೆ. ಈ ಸೀಸನ್​ನಲ್ಲೂ ಕೂಡ ಭಾರತದ ಪರ ಆಡೋಕೆ ನಾವು ಸರ್ವಸಮರ್ಥರು ಅನ್ನೋ ಥರದಲ್ಲಿ ಕೆಲವ್ರು ಪರ್ಫಾಮ್ ಮಾಡ್ತಿದ್ದಾರೆ.

ಇದನ್ನೂ ಓದಿ :  SRHಗೆ ಅಭಿಷೇಕ್‌ ಶರ್ಮಾ ಸ್ಪೋಟಕ ಶತಕದ ಬಲ – ಡಿಸಿಗೆ ಮಣ್ಣು ಮುಕ್ಕಿಸಿದ ಅಕ್ಷರ್ ಪಟಾಲಂ

ಬ್ಯಾಟರ್​ಗಳ ಸುನಾಮಿ.. ಬೌಲರ್​ಗಳ ಬಿರುಗಾಳಿ.. ಫೀಲ್ಡಿಂಗ್​ನಲ್ಲಂತೂ ಎಕ್ಸ್​ಟ್ರಾರ್ಡಿನರಿ. ಡೇ ಬೈ ಡೇ ಮ್ಯಾಚ್​ಗಳು ರಂಗೇರ್ತಿವೆ. ಪರ್ಫಾಮೆನ್ಸ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಒಂದಷ್ಟು ತಂಡಗಳಲ್ಲಿ ಸ್ಟಾರ್ ಪ್ಲೇಯರ್ಸ್ ಅಬ್ಬರಿಸ್ತಿದ್ರೆ ಇನ್ನೊಂದಷ್ಟು ತಂಡಗಳಿಗೆ ಯಂಗ್​ಸ್ಟರ್​ಗಳೇ ಹೀರೋಗಳಾಗಿದ್ದಾರೆ. ಸಿಂಗಲ್ಲಾಗಿ ನಿಂತು ಮ್ಯಾಚ್ ವಿನ್ ಮಾಡಿಸ್ತಿದ್ದಾರೆ. ಇನ್ನೂ ಕೆಲವ್ರು ಭಾರತ ತಂಡದಲ್ಲಿ ಆಡ್ತಿದ್ರೂ ಸದ್ದೇ ಮಾಡದೇ ಗೇಟ್​ಪಾಸ್ ಸಿಗೋ ಹಂತದಲ್ಲಿದ್ದಾರೆ.

ಟ್ಯಾಲೆಂಟ್ ಹಂಟ್ ಪ್ಲೇಯರ್ಸ್!

ಟಿ-20ಐ ತಂಡಕ್ಕೆ ಅಗ್ರೆಸ್ಸಿವ್ ಬ್ಯಾಟರ್ ಆಗ್ತಾರೆ ರಜತ್ ಪಾಟಿದಾರ್

ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಬೆಸ್ಟ್ ಆಲ್ ರೌಂಡರ್ ಶಶಾಂಕ್ ಸಿಂಗ್

ಕೃನಾಲ್ ಪಾಂಡ್ಯ ಬೌಲಿಂಗ್ ಅದ್ಭುತ.. ಬ್ಯಾಟಿಂಗ್ ನಲ್ಲೂ ಸಹಾಯ

ಬೌಲಿಂಗ್ ನಲ್ಲಿ ಇಂಪ್ಯಾಕ್ಟ್ ಮಾಡ್ತಿರೋ ಪ್ರಸಿದ್ಧ್ ಕೃಷ್ಣಗಿದ್ಯಾ ಟಿ-20ಐ?

ಪಂಜಾಬ್ ನಲ್ಲಿ ಭಯವೇ ಗೊತ್ತಿಲ್ಲದಂತಿದ್ದಾರೆ ಪ್ರಿಯಾನ್ಶ್ & ಪ್ರಭ್ ಸಿಮ್ರಾನ್

ಟ್ಯಾಲೆಂಟೆಡ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆಗೂ ಇದೆ ಚಾನ್ಸ್

ಅಶ್ವನಿ ಕುಮಾರ್, ಸಾಕಿಬ್ ಹುಸೇನ್ ಕಡೆಯಿಂದಲೂ ಒಳ್ಳೆ ಪ್ರದರ್ಶನ

ಸಾಯಿ ಸುದರ್ಶನ್ ಜಾಗದಲ್ಲಿ ಪಡಿಕ್ಕಲ್ ಗೆ ಟೆಸ್ಟ್ ಅವಕಾಶ ನೀಡಬಹುದು

ಆಲ್ರೆಡಿ ಸಾಕಷ್ಟು ಆಟಗಾರರು ಆಲ್ರೆಡಿ ಐಪಿಎಲ್​ನಲ್ಲಿ ಹವಾ ಎಬ್ಬಿಸೋಕೆ ಸ್ಟಾರ್ಟ್ ಮಾಡಿದ್ದಾರೆ. ಹಾಗಂತ ಇಲ್ಲಿ ಒಂದೆರಡು ಪಂದ್ಯಗಳಲ್ಲಿ ಸದ್ದು ಮಾಡಿದವ್ರ ಬಗ್ಗೆ ಹೇಳ್ತಾ ಇಲ್ಲ. ಪಂದ್ಯದಿಂದ ಪಂದ್ಯಕ್ಕೆ ಇಂಪ್ರೂವ್ ಆಗ್ತಾ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡ್ತಿರೋರ ಬಗ್ಗೆ ಮಾತ್ರ ಮಾತಾಡ್ತಾ ಇರೋದು. ಸೋ ಇವ್ರಿಗೆಲ್ಲಾ ಟೀಂ ಇಂಡಿಯಾ ಪರ ಆಡೋಕೆ ಎಲ್ಲಾ ಅರ್ಹತೆಯೂ ಇದೆ. ಕೆಲವ್ರಿಗೆ ಏಜ್ ಆಗಿದೆ ಚಾನ್ಸ್ ಕೊಡೋದು ಬೇಡ ಅನ್ನಿಸ್ಬೋದು. ಬಟ್ ಕೆಲ ಸ್ಟಾರ್ ಆಟಗಾರರಿಗೆ ರೆಸ್ಟ್ ಕೊಟ್ಟಾಗ ಇವ್ರನ್ನ ಪಿಕ್ ಮಾಡ್ಬೋದು ಅನ್ನೋದಷ್ಟೇ ನಮ್ಮ ಸಜೇಷನ್. ಹಾಗೆ ನೋಡಿದ್ರೆ ವೈಭವ್ ಸೂರ್ಯವಂಶಿ, ಆಯುಷ್ ಮಾತ್ರೆ ಕೂಡ ಇದ್ದಾರೆ.

Shantha Kumari