ಮದುವೆಯಾದ 6 ತಿಂಗಳಿಗೆ ಪತಿಗೆ ವಿಚ್ಛೇದನ! – ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಡಿವೋರ್ಸ್  ಪಾರ್ಟಿ ಮಾಡಿದ ಪತ್ನಿ!

ಮದುವೆಯಾದ 6 ತಿಂಗಳಿಗೆ ಪತಿಗೆ ವಿಚ್ಛೇದನ! – ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಡಿವೋರ್ಸ್  ಪಾರ್ಟಿ ಮಾಡಿದ ಪತ್ನಿ!

ಪತಿ-ಪತ್ನಿಯರ ನಡುವೆ ಪ್ರೀತಿ, ನಂಬಿಕೆ, ವಿಶ್ವಾಸ ಇರಬೇಕು. ಇಲ್ಲವಾದರೆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಕಾಮನ್‌ ಆಗಿದೆ. ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡಿ ಕೆಲವರು ವಿಚ್ಛೇದನ ಪಡೆಯುತ್ತಲೇ ಇರುತ್ತಾರೆ. ಸಂಬಂಧವನ್ನು ಮುರಿದುಕೊಂಡಾಗ ಅದು ತುಂಬಾ ನೋವುಂಟು ಮಾಡುತ್ತದೆ. ಕೆಲವರು ಈ ನೋವಿನಿಂದ ಬರಲು ತುಂಬಾ ಒದ್ದಾಡುತ್ತಾರೆ. ಆ ಘಟನೆಯಿಂದ ಹೊರ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಪತಿಗೆ ವಿಚ್ಛೇದನ ನೀಡಿ ಬಿಂದಾಸ್‌ ಆಗಿ ಪಾರ್ಟಿ ಮಾಡಿದ್ದಾಳೆ.

ವಿಚ್ಚೇದನ ಪಡೆದ ಬಳಿಕ ಅನೇಕರು ಅದರಿಂದ ಹೊರಬರಲಾಗದೆ ಒದ್ದಾಡುತ್ತಾರೆ. ಕೆಲವರಂತೂ ತಪ್ಪು ದಾರಿ ತುಳಿಯುತ್ತಾರೆ. ಕೆಲ ಪುರುಷರಂತೂ ಮದ್ಯ ವ್ಯಸನಿಗಳಾಗಿ ಬಿರುತ್ತಾರೆ. ಇನ್ನೂ ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ನಂತರ ಸಂತೋಷವಾಗಿರುವ ಕೆಲವು ಜನರಿದ್ದಾರೆ. ಬ್ರೆಜಿಲ್‌ನಲ್ಲೂ ಮಹಿಳೆಯೊಬ್ಬಳು ವಿಚ್ಛೇದನದ ನಂತರ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಪಾರ್ಟಿ ಮಾಡಿದ್ದಾಳೆ.

ಇದನ್ನೂ ಓದಿ: ಈಕೆಗೆ ಬೆಕ್ಕಂದ್ರೆ ಪಂಚಪ್ರಾಣ! – ಬೆಕ್ಕಿನಂತೆ ಕಾಣಲು 20 ಶಸ್ತ್ರಚಿಕಿತ್ಸೆಗೆ ಒಳಗಾದ ಯುವತಿ!

ಹೌದು. ಅಚ್ಚರಿಯಾದ್ರೂ ಸತ್ಯ. ಬ್ರೆಜಿಲ್‌ ಮೂಲದ ಮಹಿಳೆಯ ಹೆಸರು ಲಾರಿಸ್ಸಾ ಸಂಪನಿ. ಈಕೆ ವೃತ್ತಿಯಲ್ಲಿ ಮಾಡೆಲ್. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುವ ಲಾರಿಸ್ಸಾ ಇತ್ತೀಚೆಗೆ ಇನ್​ಸ್ಟಾಗ್ರಾಮ್​​ನಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡು ವಿಚ್ಛೇದನ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಲಾರಿಸ್ಸಾ ಮದುವೆಯಾಗಿ ಕೇವಲ 6 ತಿಂಗಳಾಗಿದೆ. ಈಗ ಪತಿಗೆ ವಿಚ್ಛೇದನ ನೀಡಿದ್ದಾಳೆ. ಅಚ್ಚರಿಯ ವಿಷಯವೆಂದರೆ ಲಾರಿಸ್ಸಾ ತನ್ನ ವಿಚ್ಛೇದನದಿಂದ ತುಂಬಾ ಸಂತೋಷವಾಗಿದ್ದಾಳೆ. ವಿಚ್ಛೇದನ ಪಾರ್ಟಿ ಮಾಡಿ ತನ್ನ ಸ್ನೇಹಿತರನ್ನು ಆಹ್ವಾನಿಸಿದ್ದಳು. ಈ ವಿಚ್ಛೇದನದ ಪಾರ್ಟಿಯಲ್ಲಿ ಆಕೆ ಸ್ನೇಹಿತರೊಂದಿಗೆ ಮೋಜು ಮಾಡಿದ್ದಾಳೆ. ಬರ್ತ್ ಡೇ ಪಾರ್ಟಿಯಲ್ಲಿ ಕೇಕ್ ಕಟ್ ಮಾಡಿದಂತೆಯೇ ಲಾರಿಸ್ಸಾ ತನ್ನ ಡಿವೋರ್ಸ್ ಕೇಕ್ ಕೂಡ ಕಟ್ ಮಾಡಿ ಅದರ ಮೇಲೆ ‘ ಡಿವೋರ್ಸ್’ ಎಂದು ಬರೆದಿದ್ದಾಳೆ. ಲಾರಿಸಾ ಈ ಪಾರ್ಟಿಗಾಗಿ ಸುಮಾರು ರೂ.4 ಲಕ್ಷಗಳನ್ನು ಖರ್ಚು ಮಾಡಿದ್ದಾಳೆ ಎನ್ನಲಾಗಿದೆ.

24 ವರ್ಷದ ಲಾರಿಸ್ಸಾ ತನ್ನ ವಿಚ್ಛೇದನದ ಕಾರಣವನ್ನು ಕೂಡ  ಬಹಿರಂಗಪಡಿಸಿದ್ದಾಳೆ. ತನಗೆ ಹುಡುಗರ ಜತೆಗೆ ಹುಡುಗಿಯರೂ ಇಷ್ಟ. ಆದರೆ ತನ್ನನ್ನು ಬಿಟ್ಟು ಬೇರೆ ಯಾರೊಂದಿಗೂ ಸಂಬಂಧ ಹೊಂದಲು ಗಂಡ ಒಪ್ಪುವುದಿಲ್ಲ. ಈ ಕಾರಣಕ್ಕಾಗಿ ಲಾರಿಸಾ ತನ್ನ ಪತಿಗೆ ವಿಚ್ಛೇದನ ನೀಡಿದ್ದೇನೆ. ಈಗ ತಾನು ಸ್ವತಂತ್ರವಾಗಿ ಬದುಕುತ್ತಿದ್ದೇನೆ ಅಂತಾ ಹೇಳಿಕೊಂಡಿದ್ದಾಳೆ. ಈ ಮೂಲಕ ತನ್ನ ಪತಿಗೆ ತಾನು ಸ್ಟ್ರಾಂಗ್‌. ಅವನಿಲ್ಲದೇ ತಾನು ಜೀವನ ನಡೆಸಲು ಸಾಧ್ಯ ಅಂತಾ ತೋರಿಸಿಕೊಂಡಿದ್ದಾಳೆ. ಸದ್ಯ ಆಕೆ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ಫೋಟೋ, ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

Shwetha M