ಶಾಲೆಯಲ್ಲಿ ಗುಂಡಿನ ದಾಳಿ – ಮೂವರು ಸಾವು, 11 ಮಂದಿಗೆ ಗಾಯ

ಶಾಲೆಯಲ್ಲಿ ಗುಂಡಿನ ದಾಳಿ – ಮೂವರು ಸಾವು, 11 ಮಂದಿಗೆ ಗಾಯ

ಬ್ರೆಸಿಲಿಯಾ: ಬ್ರೆಜಿಲ್ ನಲ್ಲಿ ಬುಲೆಟ್ ಪ್ರೂಫ್ ಧರಿಸಿದ್ದ ದಾಳಿಕೋರನೊಬ್ಬ ಎರಡು ಶಾಲೆಗಳಿಗೆ ನುಗ್ಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಳೆ  ಗುಂಡಿನ ದಾಳಿ ನಡೆಸಿರುವ ಘಟನೆ ಸೌತ್ ಈಸ್ಟರ್ನ್ ಬ್ರೆಜಿಲ್ ನಲ್ಲಿ ನಡೆದಿದೆ. ದಾಳಿಯಿಂದ ಮೂವರು ಧಾರುಣವಾಗಿ ಸಾವನ್ನಪ್ಪಿದ್ದಾರೆ. 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬ್ರೆಜಿಲ್‍ನ ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಅರಾಕ್ರೂಜ್ ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೂಟೌಟ್‌ ನಡೆದಿದೆ. ಈ ಹಿಂದೆ ಅದೇ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯಲ್ಲಿ ಇಬ್ಬರು ಶಿಕ್ಷಕರು ಮತ್ತು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಅಲ್ಲದೇ  11 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಮೈಲಿಗಲ್ಲು: ಎಂಟು ಉಪಗ್ರಹ ಹೊತ್ತ ರಾಕೆಟ್ ಯಶಸ್ವೀ ಉಡಾವಣೆ

ಶಾಲೆಯಲ್ಲಿ ಬ್ರೇಕ್ ಟೈಮ್ ನೋಡಿಕೊಂಡು ಆರೋಪಿ ದಾಳಿ ನಡೆಸಿದ್ದಾನೆ. ಗಾಯಗೊಂಡ 11 ಮಂದಿಯ ಪೈಕಿ ಸಿಬ್ಬಂದಿ ಹಾಗೂ ಇಬ್ಬರು ಮಕ್ಕಳು ಸೇರಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಳಿ ನಡೆದ ನಾಲ್ಕು ಘಂಟೆ ಬಳಿಕ 16 ವರ್ಷದ ಶೂಟರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಬಾಲಕ ಶೂಟೌಟ್ ನಡೆಸಿದ ಶಾಲೆಯಲ್ಲಿ ಈ ಹಿಂದೆ ವಿದ್ಯಾರ್ಥಿಯಾಗಿದ್ದ. ಈತನ ತಂದೆ ಸೈನ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿರಿಸಿದ್ದ ಸೇನೆಯ ಗನ್ ಅನ್ನು ಕೃತ್ಯಕ್ಕೆ ಬಳಸಿದ್ದಾನೆ ಎನ್ನಲಾಗಿದೆ.

suddiyaana