ಮೊಸಳೆ ಬಾಯಿಗೆ ಆಹಾರವಾಗುತ್ತಿದ್ದ ಮರಿಯನ್ನ ರಕ್ಷಿಸಿದ ತಾಯಿ ಆನೆ – ಅಬ್ಬಬ್ಬಾ.. ರೋಚಕ ದೃಶ್ಯ ಸೆರೆ!

ಮೊಸಳೆ ಬಾಯಿಗೆ ಆಹಾರವಾಗುತ್ತಿದ್ದ ಮರಿಯನ್ನ ರಕ್ಷಿಸಿದ ತಾಯಿ ಆನೆ – ಅಬ್ಬಬ್ಬಾ.. ರೋಚಕ ದೃಶ್ಯ ಸೆರೆ!

ತಾಯಿಯ ಪ್ರೀತಿಗಿಂತ ಮಿಗಿಲಾದುದು ಈ ಭೂಮಿ ಮೇಲೆ ಯಾವುದು ಇಲ್ಲ. ಮನುಷ್ಯರು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಲ್ಲೂ ಮಾತೃ ಪ್ರೇಮ, ಅಮ್ಮನ ಮಮತೆಯನ್ನು ಕಾಣಬಹುದು. ತಾಯಿ ಮಮತೆಗೆ ಸಾಕ್ಷಿಯಾದ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಅಂತಹದೇ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ. ತಾಯಿ ಆನೆಯೊಂದು ತನ್ನ ಮರಿಯನ್ನ ಮೊಸಳೆಯಿಂದ ರಕ್ಷಿಸಿದೆ.

ಇದನ್ನೂ ಓದಿ: ಡೆಲ್ಲಿ ಬಿಟ್ಟು ಹಾರಲ್ಲ ರಿಷಭ್ ಪಂತ್ – ಗಂಗೂಲಿ ಸೂತ್ರ ಏನು?

ಸಣ್ಣ ಕೊಳದಲ್ಲಿ ಮರಿ ಆನೆಯೊಂದು ಆಟವಾಡುತ್ತಿತ್ತು. ಮರಿ ಆನೆಗೆ ನೀರು ಕಂಡರೆ ಸಾಕು ಆಟವಾಡಲು ಇಳಿದು ಬಿಡುತ್ತದೆ. ಇತ್ತ ತಾಯಿ ಆನೆ ಆತಂಕದಲ್ಲೇ ಮರಿ ಆನೆ ಪಕ್ಕವೇ ನಿಂತುಕೊಂಡು ದಿಟ್ಟಿಸಿ ನೋಡುತ್ತಿತ್ತು. ಕೆಲ ಹೊತ್ತಲ್ಲೇ ಕೊಳದಲ್ಲಿದ್ದ ದೈತ್ಯ ಮೊಸಳೆ ಮರಿ ಆನೆಯತ್ತ ಧಾವಿಸಿದೆ. ಇನ್ನೇನು ಮರಿ ಆನೆ ಮೇಲೆ ದಾಳಿ ಮಾಡಬೇಕು ಅನ್ನುವಷ್ಟರಲ್ಲೇ ತಾಯಿ ಆನೆ ಏಕಾಏಕಿ ಮರಿ ಆನೆಯತ್ತ ಧಾವಿಸಿ ಹೋರಾಡಿದೆ. ಮೊಸಳೆ ಬಾಯಿ ತೆರೆದುಕೊಂಡು ಮರಿ ಆನೆಯ ಕಚ್ಚಿ ಎಳೆದೊಯ್ಯುವ ಪ್ರಯತ್ನದಲ್ಲಿರುವಾಗಲೇ ತಾಯಿ ಆನೆ ಪ್ರತಿ ದಾಳಿ ನಡೆಸಿದೆ. ಘೀಳಿಡುತ್ತಾ ಮರಿ ಆನೆಯನ್ನು ತನ್ನ ಕಾಲುಗಳ ಒಳಗೆ ಸೇರಿಸಿ ಮೊಸಳೆಯನ್ನು ಓಡಿಸಿದೆ. ಮೊಸಳೆ ಸತತವಾಗಿ ಮರಿ ಆನೆಯನ್ನು ತಿಂದು ತೇಗಲು ಪ್ರಯತ್ನಿಸಿದೆ. ಆದರೆ ತಾಯಿ ಆನೆಯ ಹೋರಾಟದಿಂದ ಮೊಸಳೆ ತನ್ನ ಜೀವ ಉಳಿಸಿಕೊಳ್ಳಲು ಕೊಳದಿಂದ ದೂರಕ್ಕೆ ಓಡಿದೆ.   ಬಳಿಕ ಮರಿ ಆನೆಯನ್ನು ಕರೆದುಕೊಂಡು ಕೊಳದಿಂದ ಮೇಲಕ್ಕೆ ಬಂದಿದೆ. ಮೊಸಳೆ ಮತ್ತೊಂದು ಕಡೆ ತೆರಳಿದರೆ, ಆನೆ ಹಾಗೂ ಮರಿ ಆನೆ ವಿರುದ್ಧ ದಿಕ್ಕಿನಲ್ಲಿ  ಸಾಗಿದೆ.

ಈ ದೃಶ್ಯವನ್ನ ಜುಬಿನಾ ಅಶ್ರಾ ಅನ್ನುವವರು  ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋ ಹಂಚಿಕೊಂಡು ಆನೆ ಉಳಿಸಿ ಪರಿಸರ ಉಳಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಮಾನವ ಸಂಘರ್ಷದಲ್ಲಿ ಆನೆಗಳು ದಾರುಣ ಅಂತ್ಯಕಾಣುತ್ತಿದೆ. ಅಭಿವೃದ್ಧಿ ಕಾರಣಗಳಿಂದ ಕಾಡು ಪ್ರಾಣಿಗಳು ಸಂಘರ್ಷ ಅನುಭವಿಸುವಂತಾಗಿದೆ.  ಇದು ಸಸ್ಯ ಹಾಗೂ ಪ್ರಾಣಿ ಸಂಕುಲಕ್ಕೆ ಧಕ್ಕೆ ಬಂದಿದೆ. ಇದನ್ನು ಉಳಿಸಲು ಅಭಿಯಾನ, ಜಾಗೃತಿ ಹಾಗೂ ಕಟ್ಟು ನಿಟ್ಟಿನ ಕ್ರಮಗಳ ಅವಶ್ಯಕತೆಯನ್ನು ತಜ್ಞರು ಸಾರಿ ಸಾರಿ ಹೇಳುತ್ತಿದ್ದಾರೆ.

Shwetha M