ಒಂದು ಪಾತ್ರ.. ಒಂದೇ ಕಾಸ್ಟ್ಯೂಮ್!! – ದೀಪಾ ಡ್ರೆಸ್ ಬದಲಾಗಲ್ವಾ?
ಬ್ರಹ್ಮಗಂಟು ಸೀರಿಯಲ್ ಎಡವಟ್ಟು!

ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಬ್ರಹ್ಮಗಂಟು ಸೀರಿಯಲ್ ವೀಕ್ಷಕರ ಮನಗೆದ್ದಿದೆ.. ನೋಡೋದಕ್ಕೆ ಕಪ್ಪಾಗಿ.. ಹಳ್ಳಿಯ ಹುಡುಗಿಯ ಹಾಗೆ ಕಂಡ್ರು ತನ್ನವರ ಖುಷಿಗಾಗಿ ಕಷ್ಟ ಪಡುವ ದೀಪಾ ಪಾತ್ರ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ದೀಪಾ ಈಗ ಶ್ರೀಮಂತ ಮನೆಯ ಸೊಸೆಯಾಗಿದ್ರು ಕೂಡ ಆಕೆಗೆ ಕಷ್ಟ ತಪ್ಪಿಲ್ಲ. ಎಲ್ಲರ ವಿರೋಧ ಕಟ್ಟಿಕೊಂಡು ಆ ಮನೆಯಲ್ಲಿ ಇದ್ದಾಳೆ. ಮನೆಯವರ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಿದ್ದಾಳೆ. ದೀಪಾ ಪಾತ್ರ ಚೆನ್ನಾಗೇ ಮೂಡಿ ಬಂದಿದೆ. ಅದ್ರಲ್ಲಿ ಎರಡು ಮಾತಿಲ್ಲ ಬಿಡಿ.. ಆದ್ರೀಗ ಸೀರಿಯಲ್ ವಿರುದ್ಧ ವೀಕ್ಷರು ಗರಂ ಆಗಿದ್ದಾರೆ. ಇಷ್ಟು ದೊಡ್ಡ ಮನೆಗೆ ಸೊಸೆಯಾಗಿ ಬಂದ್ರು ಆಕೆಗೆ ಒಂದು ಬಟ್ಟೆ ಕೊಡ್ಸಕ್ಕಾಗಿಲ್ವಾ ಅಂತಾ ಕೇಳ್ತಿದ್ದಾರೆ.
ಇದನ್ನೂ ಓದಿ: 23 ವರ್ಷ.. 10 ವಿಕೆಟ್.. ಬಾಂಗ್ಲಾ ಕೇಕೆ – ಪಾಕಿಸ್ತಾನದ ಕ್ರಿಕೆಟ್ ಕೂಡ ಅಧೋಗತಿ
ಹೊರನೋಟಕ್ಕೆ ಅಂದವಾಗಿಲ್ಲ ಅಂದ್ರು ಚಿನ್ನದಂತಹ ಮನಸ್ಸು.. ಯಾರು ಎಷ್ಟೇ ಕೆಟ್ಟದ್ದು ಮಾಡಿದ್ರು, ಸದಾ ಎಲ್ಲರಿಗೂ ಒಳ್ಳೆಯದ್ದೇ ಬಯಸ್ತಾಳೆ ದೀಪಾ.. ಅವಳ ರೂಪದ ಕಾರಣಕ್ಕೆ ಆಕೆ ಸಮಾಜದಿಂದ. ಕುಟುಂಬದಿಂದ ಹಿಂಸೆ, ನೋವು ಅನುಭವಿಸುತ್ತಲೇ ಇರುತ್ತಾಳೆ. ಇದೀಗ ರೂಪಾ ಬದಲು ದೀಪಾ ದೊಡ್ಮನೆಗೆ ಸೊಸೆಯಾಗಿ ಬಂದಿದ್ದಾಳೆ.. ಗಂಡನ ಮನೆಯಲ್ಲೂ ಎಲ್ಲರೂ ಇವಳನ್ನೇ ಬೈಯ್ತಾರೆ. ಗಂಡನಿಗೆ.. ಆತನ ಮನೆಯವರಿಗೆ ಇವಳು ಕಾಲಕಸಕ್ಕಿಂತ ಕಡೆ. ಸದ್ಯ ಚಿರಾಗ್ ಅತ್ತಿಗೆ ಸೌಂದರ್ಯ ಮನೆ ಕೆಲಸದವಳಂತಿದ್ದ ದೀಪಾಗೆ ಸೊಸೆಯಂತೆ ಇರುವ ಅವಕಾಶ ಕೊಟ್ಟಿದ್ದಾಳೆ. ಸೌಂದರ್ಯ ಕೊಟ್ಟಿರುವ ಅವಕಾಶವನ್ನು ಹೇಗೆ ನಿಭಾಯಿಸಬೇಕು ಎಂಬುದು ಅರ್ಥವಾಗದೇ ಎಲ್ಲಿ ಸೋತು ಹೋಗುತ್ತೇನೋ ಎಂಬುದು ದೀಪಾಳ ಆತಂಕ. ಆ ಮನೆಯ ಸೊಸೆಯಾಗಿ ಇರಲಾಗದೇ, ಮನೆ ಬಿಟ್ಟು ಹೋಗಬೇಕಾಗಿ ಬರುತ್ತದೋ ಎಂದು ಆತಂಕಗೊಂಡಿದ್ದಾಳೆ. ದೀಪಾಳ ಆತಂಕ ಕಂಡು ಅರ್ಚನಾ ಧೈರ್ಯ ಹೇಳಿದ್ದಾಳೆ. ನಿಧಾನವಾಗಿ ಎಲ್ಲವೂ ಸರಿ ಹೋಗುತ್ತದೆ. ಹೆದರದೇ, ಎಲ್ಲಾ ಕೆಲಸದಲ್ಲೂ ಭಾಗಿಯಾಗು. ಎಲ್ಲರಿಗೂ ನೀನು ಈ ಮನೆಗೆ ಅಗತ್ಯವಾಗಿರುವ ಹಾಗೂ ತಕ್ಕುನಾದ ಸೊಸೆ ಎಂದು ತೋರಿಸು ಎಂದು ಬುದ್ಧಿ ಹೇಳುತ್ತಾಳೆ. ದೀಪಾಳಿಗೆ ಅರ್ಚನಾ ಮಾತುಗಳನ್ನು ಕೇಳಿ ಸ್ವಲ್ಪ ಖುಷಿಯಾಗುತ್ತದೆ. ಮುಂದೆ ದೀಪಾ ಎಲ್ಲರ ಮನಸ್ಸು ಗೆದ್ದು ಮನೆ ಸೊಸೆಯಾಗ್ತಾಳಾ ಇಲ್ವಾ ಅನ್ನೋದು ಸೀರಿಯಲ್ ಕಥೆ. ಸೀರಿಯಲ್ ಕೂಡ ಚೆನ್ನಾಗಿ ಮೂಡಿ ಬರ್ತಾ ಇದೆ.. ಆದ್ರೆ ವೀಕ್ಷಕರಿಗೆ ಮಾತ್ರ ಬೇರೆಯದ್ದೇ ಚಿಂತೆ..
ಸೀರಿಯಲ್ ಶುರುವಾದಾಗಿಂದ ಈವರೆಗೂ ಈ ದೀಪಾಳನ್ನ ಒಂದೇ ತರದ ಬಟ್ಟೆಯಲ್ಲಿ ತೋರಿಸಲಾಗ್ತಿದೆ. ಸೇಮ್ ಕಾಸ್ಟ್ಯೂಮ್ ನೋಡಿ ನೋಡಿ ವೀಕ್ಷಕರಿಗೆ ತಲೆ ಕೆಟ್ಟು ಹೋಗಿದೆ. ಅದೇ ಡ್ರೆಸ್.. ಅದೇ ಹೇರ್‌ಸ್ಟೈಲ್. ಒಂಚೂರೂ ವ್ಯತ್ಯಾಸ ಇಲ್ಲ. ಸೀರಿಯಲ್ ಶುರುವಾದಾಗಿಂದ ಇಲ್ಲೀವರೆಗೆ ಮದುವೆ, ಪ್ರೆಸ್‌ಮೀಟ್ ಸಂದರ್ಭ ಬಿಟ್ಟರೆ ಒಂದು ಸೀನ್‌ನಲ್ಲೂ ಈ ಪಾತ್ರದ ಡ್ರೆಸ್ ಬದಲಾಗಿಲ್ಲ. ಅದರ ಜೊತೆಗೆ ಈ ಪಾತ್ರ ಮೊದಲಿನಿಂದ ಇಲ್ಲೀವರೆಗೆ ಬದಲಾವಣೆಯೇ ಇಲ್ಲದೆ ಮುಂದುವರೀತಿದೆ. ಈ ಪಾತ್ರಗಳ ಆಟಿಟ್ಯೂಡ್‌ನಲ್ಲಿ ಸಣ್ಣ ಚೇಂಜ್ ಕೂಡ ಇಲ್ಲ. ಇದೆಲ್ಲಾ ವೀಕ್ಷಕರಿಗೆ ಸಿಟ್ಟು ಬರುವಂತೆ ಮಾಡಿದೆ.
ಇನ್ನು ಈ ಕಾಲದಲ್ಲಿ ಇಂತಹ ಕಾಸ್ಟ್ಯೂಮ್ ಯಾರು ಹಾಕ್ತಾರೆ.. ಪಾತ್ರಕ್ಕೆ ಕಾಸ್ಟ್ಯೂಮ್ ಸೆಲೆಕ್ಟ್ ಮಾಡೋರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗ್ಬೇಕಲ್ವಾ? ದೀಪಾ ಅಕ್ಕ ಸಖತ್ ಮಾರ್ಡನ್.. ಅವಳು ಅಷ್ಟೊಂದು ಫಾರ್ವರ್ಡ್ ಆಗಿರೋವಾಗ ಇವ್ಳು ಒಂದು ಚೂಡಿದಾರ್ ಆದ್ರೂ ಹಾಕ್ಬೇಕಲ್ವಾ ಅಂತಾ ಕಾಮೆಂಟ್ ಮಾಡ್ತಿದ್ದಾರೆ.. ಇನ್ನು ಕೆಲವರು ಮದುವೆಗಿಂತ ಮುಂಚೆ ಈ ಡ್ರೆಸ್ ಓಕೆ, ಮದುವೆ ಆದ್ಮೇಲಾದ್ರೂ ಒಂದು ಸೀರೆ ಕೊಡಿಸ್ಬೇಕಲ್ವಾ ಅಂತಾ ಕಮೆಂಟ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ವೀಕ್ಷಕರು ಈ ಸೀರಿಯಲ್ ಅನ್ನ ಸೀರಿಯಸ್ ಆಗಿ ನೋಡ್ತಿದ್ದಾರೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್. ಸದ್ಯಕ್ಕೆ ಈಕೆಯ ಬಟ್ಟೆಗೊಂದು ಗತಿ ಕಾಣಿಸಬೇಕಿದೆ ಅಂತಿದ್ದಾರೆ ವೀಕ್ಷಕರು.