ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ಜೀವ ಕೊಟ್ಟ ರಸ್ತೆ ಗುಂಡಿ! – ಅಂತ್ಯಕ್ರಿಯೆಗೆ ಹೊರಟಾಗ ಆಗಿದ್ದೇನು?

ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ಜೀವ ಕೊಟ್ಟ ರಸ್ತೆ ಗುಂಡಿ! – ಅಂತ್ಯಕ್ರಿಯೆಗೆ ಹೊರಟಾಗ ಆಗಿದ್ದೇನು?

ಎಲ್ಲಿ ನೋಡಿದ್ರು ರಸ್ತೆ ಗುಂಡಿಗಳು.. ರಸ್ತೆ ಗುಂಡಿಯಿಂದಾಗಿ ಈಗಾಗಲೇ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ರು. ಆದ್ರೆ ಇಲ್ಲೊಂದು ಕಡೆ, ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ ರಸ್ತೆಗುಂಡಿಯಿಂದಾಗಿ ಮತ್ತೆ ಉಸಿರಾಡಿದ್ದಾರೆ.

ಇದನ್ನೂ ಓದಿ: ಹೋಟೆಲ್‌ನಲ್ಲಿ ತಿಂಡಿ ತಿಂದ ಗ್ರಾಹಕನಿಗೆ ಶಾಕ್! – ಬಿಲ್‌ನಲ್ಲಿ 30 ರೂ. ಗ್ಯಾಸ್‌ ಸಪ್ಲೈ ಚಾರ್ಜ್‌!‌

ಈ ಘಟನೆ ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ನಡೆದಿದೆ. ಫೆಬ್ರವರಿ 22ರಂದು ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ವಿನೀತಾ ಶುಕ್ಲಾ ಎಂಬುವವರು ಹಠಾತ್ತನೆ ಮೂರ್ಛೆ ಹೋಗಿದ್ದರು. ಅವರ ಮೆದುಳು ನಿಷ್​ಕ್ರಿಯಗೊಂಡಿದೆ ಬದುಕುಳಿಯುವ ಯಾವುದೇ ಭರವಸೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ ಬಳಿಕ ಫೆಬ್ರವರಿ 24ರಂದು ಆಕೆಯ ಅಂತ್ಯಕ್ರಿಯೆಗಾಗಿ ಅವರನ್ನು ಮನೆಗೆ ಕರೆತರಲಾಗುತ್ತಿತ್ತು. ಅವರು ಉಸಿರಾಡುತ್ತಿರಲಿಲ್ಲ, ಹೃದಯಬಡಿತವೂ ಕಡಿಮೆಯಾಗುತ್ತಿತ್ತು. ವಿನೀತಾ ಕುಟುಂಬವು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿತ್ತು ಎಂದು ಅವರ ಪತಿ ಹೇಳಿದ್ದಾರೆ.

ಆಘಾತ ಮತ್ತು ಹತಾಶೆಯ ನಡುವೆ, ವಿನೀತಾಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಡಿಕ್ಕಿ ಹೊಡೆದಾಗ ಭರವಸೆಯ ಅಲೆಯೊಂದು ಹೊರಹೊಮ್ಮಿತ್ತು. ಏಕೆಂದರೆ ಗುಂಡಿಯಿಂದ ಉಂಟಾದ ದೊಡ್ಡ ಆಘಾತದ ನಂತರ ಅವರು ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿದೆ.

ವೈದ್ಯರು ಆರಂಭದಲ್ಲಿ ರೋಗಿಯನ್ನು ದಾಖಲಿಸಲು ಹಿಂಜರಿದರು, ಆದರೆ ಕುಟುಂಬದವರು ಒತ್ತಾಯಿಸಿದ ನಂತರ ಅಂತಿಮವಾಗಿ ಅವರನ್ನು ಪರೀಕ್ಷಿಸಿದ್ದರು. ಆಂಬ್ಯುಲೆನ್ಸ್ ಹಫೀಜ್‌ಗಂಜ್ ತಲುಪುತ್ತಿದ್ದಂತೆ, ಅದು ದೊಡ್ಡ ಗುಂಡಿಗೆ ಡಿಕ್ಕಿ ಹೊಡೆದು ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿತ್ತು. ಮೊದಲು ಹೃದಯ ಬಡಿತ ಕಡಿಮೆಯಾಗುತ್ತಿತ್ತು. ಆದರೆ ಈ ಘಟನೆ ನಂತರ ಅವರು ಸಾಮಾನ್ಯವಾಗಿ ಉಸಿರಾಡಲು ಪ್ರಾರಂಭಿಸಿದರು ಎಂದು ವಿವರಿಸಿದ್ದಾರೆ.

ಅವರು ತಮ್ಮ ಕುಟುಂಬಕ್ಕೆ ಅಂತ್ಯಕ್ರಿಯೆಯ ಎಲ್ಲಾ ಸಿದ್ಧತೆಗಳನ್ನು ನಿಲ್ಲಿಸುವಂತೆ ಕೇಳಿಕೊಂಡರು, ವಿನೀತಾಳನ್ನು ಪಿಲಿಭಿಟ್‌ನ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದರು ಮತ್ತು ಒಂದು ದಿನದ ನಂತರ ಅವರು ಮನೆಗೆ ಮರಳಿದ್ದಾರೆ. ಸುಮಾರು 13 ದಿನಗಳ ಚಿಕಿತ್ಸೆಯ ನಂತರ, ವಿನಿತಾ ಸಂಪೂರ್ಣವಾಗಿ ಚೇತರಿಸಿಕೊಂಡರು ಮತ್ತು ಈಗ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ. ಕುಟುಂಬವು ಈ ಘಟನೆಯನ್ನು ಒಂದು ಪವಾಡವೆಂದು ಪರಿಗಣಿಸಿದರೂ, ವೈದ್ಯಕೀಯ ತಂಡದ ಪ್ರಯತ್ನಗಳು ಮತ್ತು ರೋಗನಿರ್ಣಯವು ನಗರದಾದ್ಯಂತ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

Shwetha M

Leave a Reply

Your email address will not be published. Required fields are marked *