ಬ್ರಹ್ಮಗಂಟು ಸೀರಿಯಲ್ ನಟಿ ಸೂಸೈಡ್ – ಗಂಡ ಮನೆಯಲ್ಲೇ ಇದ್ದಾಗಲೇ ಘೋರ ದುರಂತ
ಮದುವೆ ನಂತ್ರ ನಟಿಯ ಜೀವನದಲ್ಲಿ ಆಗಿದ್ದೇನು?
ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಕಿರುತೆರೆ ಸ್ಟಾರ್ ನಟಿ ಹೈದರಾಬಾದ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. ಬ್ರಹ್ಮಗಂಟು, ನಿನ್ನಿಂದಲೇ ಹೀಗೆ ಹಲವು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಶೋಭಿತಾ ಶಿವಣ್ಣ. ಅದರಲ್ಲೂ ಬ್ರಹ್ಮಗಂಟು ಸೀರಿಯಲ್ನಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ನಟಿ ಶೋಭಿತಾ ಶಿವಣ್ಣ ಅವರಿಗೆ ಸಾಕಷ್ಟು ಫ್ಯಾನ್ಸ್ ಬಳಗ ಇತ್ತು. ಇನ್ನೂ ನಟಿ ಶೋಭಿತಾ ಶಿವಣ್ಣ ಅವರು ಮೇ 22 2023ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: ಭಾರತದ ಶ್ರೀಮಂತ ರಾಜ್ಯಗಳ್ಯಾವುವು? – ಇಂಡಿಯಾದ ‘ಮಹಾ’ ಶಕ್ತಿ ಕರುನಾಡು
ಮದುವೆಯ ನಂತರ ನಟಿ ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಮಧ್ಯರಾತ್ರಿ ಶೋಭಿತಾ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಶಾಕಿಂಗ್ ಸುದ್ದಿ ತಿಳಿದ ಶೋಭಿತಾ ಕುಟುಂಬಸ್ಥರು ಆಪ್ತ ಸ್ನೇಹಿತರು ಶಾಕ್ ಆಗಿದ್ದಾರೆ. ಮದುವೆ ಆದ ಮೇಲೆ ನಟನೆಯಿಂದ ಶೋಭಿತಾ ದೂರ ಉಳಿದಿದ್ರು.
ಶೋಭಿತಾ ಆತ್ಮಹತ್ಯೆ ಸುದ್ದಿ ಕೇಳಿ ಕಿರುತೆರೆ ಆಘಾತಕ್ಕೆ ಒಳಗಾಗಿದೆ. 2016 ರಲ್ಲಿ ಜೀ ಕನ್ನಡದಲ್ಲಿ ಬ್ರಹ್ಮಗಂಟು ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಶೋಭಿತಾ, ನಾಯಕಿ ಗೀತಾ ಮಲ ತಂಗಿ ಪಿಂಕಿ ಪಾತ್ರದಲ್ಲಿ ನಟಿಸಿದ್ದರು. ನೆಗೆಟಿವ್ ಶೇಡ್‌ನಲ್ಲಿ, ಅಕ್ಕನಿಗೆ ತೊಂದರೆ ಕೊಡು ಪಾತ್ರದಲ್ಲಿ ಶೋಭಿತಾ ಅದ್ಭುತವಾಗಿ ನಟಿಸಿದ್ದರು. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಕೂಡಾ ಶೋಭಿತಾ ನಟಿಸಿದ್ದರು. ಧಾರಾವಾಹಿ ಮಾತ್ರವಲ್ಲ ಶೋಭಿತಾ ಎರಡೊಂದ್ಲಾ ಮೂರು, ಒಂದ್ ಕಥೆ ಹೇಳಾ, ಫಸ್ಟ್ ಡೇ ಫಸ್ಟ್ ಶೋ ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು. ಕೆಲವು ವರ್ಷಗಳ ಹಿಂದೆ ಅವರು ಮದುವೆ ಆಗಿ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದರು.