BPL ಕಾರ್ಡ್‌ದಾರರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಸರ್ಕಾರ – ಹೆಚ್ಚು ಆದಾಯವಿದ್ದರೆ ಕಾರ್ಡ್ ಕ್ಯಾನ್ಸಲ್ ಗ್ಯಾರಂಟಿ

ಬಿಪಿಎಲ್ ಕಾರ್ಡ್ದಾರರು ಈ ಸುದ್ದಿ ತಿಳಿದುಕೊಳ್ಳಲೇ ಬೇಕು. ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಶಾಕ್ ಕೊಟ್ಟಿದೆ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತಿದೆ. ಆದಾಯ ಮಿತಿ ಬದಲಾವಣೆ ಮಾಡಿ ನೋಟಿಸ್ ಜಾರಿ ಮಾಡುತ್ತಿದೆ.
ಇದನ್ನೂ ಓದಿ:ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಪ್ರಮಾಣ ಸ್ವೀಕಾರ
ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ (BPL Card)ಗಳ ಪರಿಷ್ಕರಣೆಗೆ ಮುಂದಾಗಿದೆ. ಆಹಾರ ಇಲಾಖೆಯು 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿದೆ. ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಳನ್ನು ಮೀರಿದ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕ್ರಮವನ್ನು ಸರ್ಕಾರ ಜಾರಿಗೊಳಿಸಿದ್ದು, ಇದರಿಂದ ಸುಮಾರು ಲಕ್ಷಾಂತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆಯಿದೆ. ಈ ನಿರ್ಧಾರವು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅರ್ಹರಲ್ಲದವರಿಗೆ ನೋಟಿಸ್ ಜಾರಿಗೆ ಮಾಡಲಾಗುತ್ತಿದೆ.
ಸರ್ಕಾರ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದರ ಉದ್ದೇಶವು ನಿಜವಾದ ಬಡವರಿಗೆ ಮಾತ್ರ ಪಡಿತರ ಸೌಲಭ್ಯಗಳು ದೊರೆಯುವಂತೆ ಮಾಡುವುದು ಎಂದು ಹೇಳಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಇರುವ ಕೆಲವರಿಗೆ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಈಗಾಗಲೇ ಆಹಾರ ಇಲಾಖೆಯ ಅಧಿಕಾರಿಗಳು ರಾಜ್ಯಾದ್ಯಂತ ಅನರ್ಹ ಕಾರ್ಡ್‌ಗಳನ್ನು ಗುರುತಿಸಿ, ಅವರಿಗೆ ನೋಟಿಸ್‌ಗಳನ್ನು ಜಾರಿಗೊಳಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 5,125ಕ್ಕೂ ಹೆಚ್ಚು ನಕಲಿ ಅಥವಾ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸಲಾಗಿದೆ. ಇದೇ ರೀತಿ, ರಾಜ್ಯಾದ್ಯಂತ 13.87 ಲಕ್ಷ ಅನರ್ಹ ಕಾರ್ಡ್‌ಗಳು ಪತ್ತೆಯಾಗಿವೆ, ಇವುಗಳಲ್ಲಿ 3.63 ಲಕ್ಷ ಕಾರ್ಡ್‌ಗಳನ್ನು ಈಗಾಗಲೇ ರದ್ದುಪಡಿಸಲಾಗಿದ್ದು, ಇನ್ನು 3.97 ಲಕ್ಷ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಯಲ್ಲಿದೆ.
ಈ ಕ್ರಮವು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಮತ್ತು ಮೃತ ಫಲಾನುಭವಿಗಳ ಕಾರ್ಡ್‌ಗಳನ್ನು ಗುರಿಯಾಗಿ ಮಾಡಿಕೊಂಡಿದೆ. ಸರ್ಕಾರದ ನಿಯಮದ ಪ್ರಕಾರ, ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಳನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್‌ಗೆ ಅರ್ಹರಲ್ಲ. ಇದಲ್ಲದೆ, ಸರ್ಕಾರಿ ನೌಕರರು, ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಹನಗಳು (ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಕಾರು) ಹೊಂದಿರುವವರು, ಆದಾಯ ತೆರಿಗೆ ಕಟ್ಟುವವರು, ಮತ್ತು ಆರು ತಿಂಗಳಿಂದ ಪಡಿತರ ಪಡೆಯದ ಕಾರ್ಡ್‌ಗಳು ಸಹ ರದ್ದುಗೊಳ್ಳುತ್ತವೆ. ಆಹಾರ ಇಲಾಖೆಯು ಇಂಗ್ ಐಟಿ ಇಲಾಖೆಯಿಂದ ಆದಾಯ ತೆರಿಗೆ ಪಾವತಿಗಾರರ ಪಟ್ಟಿಯನ್ನು ಪಡೆದು, ಸುಮಾರು 50,462 ಕಾರ್ಡ್‌ಗಳನ್ನು ರದ್ದುಪಡಿಸಿದೆ. ಹಾಗೂ, ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಎಚ್‌ಆರ್‌ಎಂಎಸ್) ಮೂಲಕ 5,000ಕ್ಕೂ ಹೆಚ್ಚು ಸರ್ಕಾರಿ ನೌಕರರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಈ ಕಾರ್ಡ್‌ಗಳ ಹೊಂದಿರುವವರು 8-10 ವರ್ಷಗಳಿಂದ ನಿರಂತರವಾಗಿ ಪಡಿತರ ಪಡೆಯುತ್ತಿದ್ದರು ಎಂದು ಇಲಾಖೆಯು ಬಹಿರಂಗಪಡಿಸಿದೆ.
ನೋಟೀಸ್ ಜಾರಿಯು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಅನರ್ಹರಿಗೆ ತಮ್ಮ ಕಾರ್ಡ್‌ಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುವ ಅವಕಾಶ ನೀಡಲಾಗಿದೆ. ಇದರಲ್ಲಿ ನರೇಗಾ (ರಾಷ್ಟ್ರೀಯ ಗ್ರಾಮೀಣ ರೋಜ್ಗಾರ ಯೋಜನೆ) ಏಜೆಂಟ್‌ಗಳು, ಎಲ್‌ಐಸಿ (ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಸಣ್ಣ ಏಜೆಂಟ್‌ಗಳು ಸಹ ಸೇರಿವೆ. ಈ ಏಜೆಂಟ್‌ಗಳು ಆದಾಯ ಮಿತಿಯನ್ನು ಮೀರಿದ್ದರೆ ಅವರ ಕಾರ್ಡ್‌ಗಳು ರದ್ದಾಗುತ್ತವೆ.

ನೋಡಿರಿ

