SRH ವಿರುದ್ಧ ಬಾಯ್ಕಾಟ್ ಟ್ರೆಂಡ್ – ಪಾಕ್ ಬೌಲರ್ ಮೇಲೆ ಕಾವ್ಯಾ ಬಿಡ್
ಅಬ್ರಾರ್ ಖರೀದಿಸಿ ತಪ್ಪು ಮಾಡಿದ್ರಾ?

2026ರ ಐಪಿಎಲ್ನಲ್ಲಿ ಫಸ್ಟ್ ಮ್ಯಾಚಲ್ಲೇ ಆರ್ಸಿಬಿ ವರ್ಸಸ್ ಎಸ್ಆರ್ಹೆಚ್ ಮ್ಯಾಚ್ ಇದೆ ಅಂತಾ ಎಲ್ರೂ ಕಾಯ್ತಿದ್ರೆ ಅತ್ತ ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಬ್ಯಾನ್ ಬಿಸಿ ತಟ್ಟಿದೆ. ಬಾಯ್ಕಾಟ್ ಎಸ್ಆರ್ಹೆಚ್ ಅಂತಾ ಟ್ರೆಂಡ್ ಸ್ಟಾರ್ಟ್ ಆಗಿದೆ. ಅದಕ್ಕೆ ಕಾರಣ ಪಾಕಿಸ್ತಾನಿ ಪ್ಲೇಯರ್ ಮೇಲೆ ಕಾವ್ಯಾ ಮಾರನ್ ಬಿಡ್ ಮಾಡಿರೋದು. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಈಗ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ವಿರುದ್ಧದ ಪೋಸ್ಟ್ಗಳೇ ಸದ್ದು ಮಾಡ್ತಿವೆ. ಅದಕ್ಕೆ ಕಾರಣ ಪಾಕಿಸ್ತಾನದ ಸ್ಪಿನ್ ಬೌಲರ್ ಅಬ್ರಾರ್ ಅಹ್ಮರ್ ಮೇಲೆ ಬಿಡ್ ಮಾಡಿ ಖರೀದಿ ಮಾಡಿದ್ದಾರೆ ಅನ್ನೋದು. ಈ ಬಿಡ್ಡಿಂಗ್ ನಡೆದಿರೋದು ಇಂಗ್ಲೆಂಡ್‌ನ ಪ್ರತಿಷ್ಠಿತ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ. ಆಟಗಾರರ ಹರಾಜಿನಲ್ಲಿ ಚೆನ್ನೈ ಮೂಲದ ಸನ್ ಗ್ರೂಪ್ ಒಡೆತನದ ‘ಸನ್‌ರೈಸರ್ಸ್ ಲೀಡ್ಸ್’ ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿ ಮಾಡಿದ್ದಾರೆ. ಈ ಆಕ್ಷನ್ನಲ್ಲಿ ಕಾವ್ಯಾ ಮಾರನ್ ಕೂಡ ಇದ್ರು. ಇದೇ ಈಗ ಭಾರತೀಯರ ಆಕ್ರೋಶಕ್ಕೆ ಕಾರಣ ಆಗಿದೆ.
ಇದನ್ನೂ ಓದಿ : SRHಗೆ ಪಾಕ್ ಆಟಗಾರ ಎಂಟ್ರಿ- ಸನ್‌ರೈಸರ್ಸ್ ತಂಡ ಬಾಯ್ಕಟ್‌ಗೆ ಫ್ಯಾನ್ಸ್ ಆಗ್ರಹ
ಬಿಡ್ಡಿಂಗ್ ಪ್ಯಾಡಲ್ ಎತ್ತಿ ಅಬ್ರಾರ್ ಖರೀದಿಸಿದ ಕಾವ್ಯ!
ಅಬ್ರಾರ್ ಅಹ್ಮದ್.. ಪಾಕಿಸ್ತಾನದ ಸ್ಪಿನ್ ಬೌಲರ್. ಅಬ್ರಾರ್ ಅಂದ್ರೆ ಕೆಲವ್ರಿಗೆ ಗೊತ್ತಾಗಲ್ಲ. ಬಟ್ ಆತನ ಸಿಗ್ನೇಚರ್ ಸೆಂಡ್ ಆಫ್ ನೋಡ್ದಾಗ ಎಲ್ರಿಗೂ ಗೊತ್ತಾಗುತ್ತೆ. ಬ್ಯಾಟರ್ಗಳನ್ನ ಔಟ್ ಮಾಡಿ ಕುತ್ತಿಗೆ ಮತ್ತು ಕಣ್ಸನ್ನೆಯಲ್ಲೇ ಅವ್ರನ್ನ ಪೆವಿಲಿಯನ್ಗೆ ನಡಿ ಎನ್ನುವಂತೆ ಸಹ್ನೆ ಮಾಡ್ತಾರೆ. ನಮ್ಮ ಭಾರತೀಯ ಬ್ಯಾಟರ್ಗಳಿಗೂ ಇದೇ ಥರ ಪೋಸ್ ಕೊಟ್ಟು ಟ್ರೋಪ್ ಆಗಿದ್ದ. ಸೋ ಈಗ ಅದೇ ಅಬ್ರಾರ್ರನ್ನ ಗುರುವಾರ ನಡೆದ ದಿ ಹಂಡ್ರೆಡ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಲೀಡ್ಸ್ ಸಿಇಒ ಕಾವ್ಯಾ ಮಾರನ್ 1,90,000 ಬ್ರಿಟಿಷ್ ಪೌಂಡ್‌ಗಳಿಗೆ ಅಂದ್ರೆ ಇಂಡಿಯನ್ ಕರೆನ್ಸಿ ಪ್ರಕಾರ ಹೇಳ್ಬೇಕು ಅಂದ್ರೆ 2.34 ಕೋಟಿ ರೂಪಾಯಿ ನೀಡಿ ಈ ಮಿಸ್ಟರಿ ಸ್ಪಿನ್ನರ್ನ ಖರೀದಿ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಹರಾಜಿನಲ್ಲಿ ಕಾವ್ಯಾ ಮಾರನ್ ಕೂಡ ಭಾಗಿಯಾಗಿದ್ರು. ಅವರೇ ಖುದ್ದಾಗಿ ಭಾಗವಹಿಸಿ ಬಿಡ್ಡಿಂಗ್ ಪ್ಯಾಡಲ್ ಎತ್ತಿದ್ದು ವಿಶೇಷವಾಗಿತ್ತು. ಸೋ ಕಾವ್ಯಾ ಅವ್ರ ಇದೇ ನಡೆ ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕ್ ಪ್ಲೇಯರ್ಸ್ ಮೇಲೆ ಬಿಡ್ ಮಾಡದ ಭಾರತೀಯ ಮಾಲೀಕರು!
ಌಕ್ಚುಲಿ ಈ ಹರಾಜಿನಲ್ಲಿ ಹ್ಯಾರಿಸ್ ರೌಫ್ ಮತ್ತು ಶದಾಬ್ ಖಾನ್‌ರಂತಹ ಇನ್ನೂ ಕೆಲ ಪಾಕಿಸ್ತಾನಿ ಆಟಗಾರರು ಇದ್ರೂ ಕೂಡ ಯಾವುದೇ ಭಾರತೀಯ ಮೂಲದ ಮಾಲೀಕರು ಅವರನ್ನು ಖರೀದಿ ಮಾಡೋಕೆ ಮುಂದಾಗಲಿಲ್ಲ. ಆದ್ರೆ ಕಾವ್ಯ ಮಾರನ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದರು. ಈ ಸೀಸನ್ನಲ್ಲಿ ಪಾಕಿಸ್ತಾನಿ ಆಟಗಾರನನ್ನು ಖರೀದಿ ಮಾಡಿದ ಏಕೈಕ ಭಾರತೀಯ ಫ್ರಾಂಚೈಸಿ ಮಾಲೀಕರು ಇವ್ರು. ಹೀಗಾಗಿ ಅಬ್ರಾರ್ ಅಹ್ಮದ್ ಖರೀದಿ ಸುದ್ದಿ ಹೊರಬೀಳ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಾವ್ಯಾ ಮಾರನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶೇಮ್ ಆನ್ ಯು ಕಾವ್ಯಾ ಅಂತಾ ಟ್ವೀಟ್ಗಳನ್ನ ಮಾಡಿದ್ದಾರೆ. ಪೆಹಲ್ಗಾಮ್ ಅಟ್ಯಾಕ್ ಫೋಟೋಗಳನ್ನ ಶೇರ್ ಮಾಡಿ ತರಾಟೆಗೆ ತೆಗೆದುಕೊಳ್ತಿದ್ದಾರೆ. ಹಾಗೇ ಸನ್ ಗ್ರೂಪ್ ಒಡೆತನದ ಎಲ್ಲಾ ಬ್ರಾಂಡ್ಗಳನ್ನೂ ಬಾಯ್ಕಾಟ್ ಮಾಡಿ ಅಂತಾ ಟ್ವಿಟ್ಗಳನ್ನ ಮಾಡ್ತಿದ್ದಾರೆ. ಅದೆಷ್ಟರ ಮಟ್ಟಿಗೆ ಟೀಕೆಗಳು ಬರ್ತಿವೆ ಅಂದ್ರೆ ಅಬ್ರಾರ್ ಅಹ್ಮದ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಸನ್‌ರೈಸರ್ಸ್ ಲೀಡ್ಸ್‌ನ ಅಧಿಕೃತ X ಖಾತೆಯೇ ಸಸ್ಪೆಂಡ್ ಆಗಿದೆ. ಅಂದ್ರೆ ಭಾರೀ ಟ್ರೋಲಿಂಗ್ ಮತ್ತು ಟೀಸ್ನಿಂದಾಗಿ ಜೊತೆಗೆ ರಿಪೋರ್ಟ್ ಕೂಡ ಮಾಡಿರೋ ಚಾನ್ಸಸ್ ಇದೆ. ಹೀಗಾಗಿ ಭಾರತದಲ್ಲಿ ಆ ಖಾತೆಯನ್ನೇ ತೋರಿಸ್ತಿಲ್ಲ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ ಎನ್ನುವ ಮೆಸೇಜ್ ತೋರಿಸುತ್ತಿದೆ. ಇನ್ನು ಅಬ್ರಾರ್ ಖರೀದಿ ಬೆನ್ನಲ್ಲೇ ನೆಗೆಟಿವಿಟಿ ಜಾಸ್ತಿಯಾಯ್ತೋ ನ್‌ರೈಸರ್ಸ್ ಲೀಡ್ಸ್ ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ರಿಯಾಕ್ಟ್ ಮಾಡಿದ್ದಾರೆ. ಪಾಕಿಸ್ತಾನದ ಆಟಗಾರರನ್ನು ಖರೀದಿ ಮಾಡಬೇಕಾ ಅಥವಾ ಬೇಡ್ವಾ ಅನ್ನೋ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ. ಆದ್ರೆ ತಂಡಕ್ಕೆ ಸ್ಪಿನ್ನರ್ ಅಗತ್ಯವಿತ್ತು. ಸೋ ಆಕ್ಷನ್ನಲ್ಲಿ ಅಬ್ರಾರ್ ಅಹ್ಮದ್ ಅವೇಲೇಬಲ್ ಇದ್ರು. ಹೀಗಾಗಿ ಇರೋರಲ್ಲೇ ದಿ ಬೆಸ್ಟ್ ಎನ್ನುವಂತೆ ಕಾಣ್ತಿದ್ರು. ಆದಿಲ್ ರಶೀದ್ ಅವ್ರನ್ನ ಬಿಟ್ಟುಕೊಟ್ ಟಮೇಲೆ ಅಬ್ರಾರ್ ತಂಡಕ್ಕೆ ಜಾಯ್ನ್ ಆದ್ರು. ಅಬ್ರಾರ್ ಖರೀದಿ ಮಾಡಿರೋದು ನಿಜಕ್ಕೂ ನನಗೆ ತುಂಬಾ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದು ಇಂಟ್ಟೆಸ್ಟಿಂಗ್ ಅಂದ್ರೆ ಈ ಟೂರ್ನಿ ತುಂಬಾನೇ ಸ್ಪೆಷಲ್ ಆಗಿದೆ.
ಹಂಡ್ರೆಡ್ ಟೂರ್ನಮೆಂಟ್ ಸ್ಪೆಷಾಲಿಟಿ!
ಜುಲೈ 21 ರಿಂದ ಆಗಸ್ಟ್ 16 ರವರೆಗೆ ದಿ ಹಂಟ್ರೆಡ್ ಕ್ರಿಕೆಟ್ ಟೂರ್ನಿ
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಕ್ರಿಕೆಟ್
100 ಎಸೆತಗಳ ಕ್ರಿಕೆಟ್ ಟೂರ್ನಮೆಂಟ್ ಇದಾಗಿದ್ದು ಸ್ವಲ್ಪ ಡಿಫ್ರೆಂಟ್
6 ಎಸೆತದ ಬದಲಾಗಿ ಪ್ರತಿ 10 ಎಸೆತಗಳ ನಂತರ ಬೌಲಿಂಗ್ ಎಂಡ್
ಒಬ್ಬ ಬೌಲರ್ ಸತತವಾಗಿ 5 ಅಥವಾ 10 ಎಸೆತಗಳನ್ನು ಬೌಲ್ ಮಾಡಬಹುದು
ಮ್ಯಾಕ್ಸಿಮಮ್ ಅಂದ್ರೆ 20 ಎಸೆತಗಳನ್ನು ಮಾತ್ರ ಎಸೆಯಲು ಅವಕಾಶವಿದೆ
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹೊಂದಿರುವ ಸನ್ ಗ್ರೂಪ್
ಸನ್‌ರೈಸರ್ಸ್ ಲೀಡ್ಸ್ ಎಂದು ಮರುನಾಮಕರಣ ಮಾಡಿದ್ದ ಸನ್ ಗ್ರೂಪ್
100 ಮಿಲಿಯನ್ ಪೌಂಡ್ ಅಂದ್ರೆ 1,000 ಕೋಟಿ ರೂಪಾಯಿ ನೀಡಿ ಖರೀದಿ
ಹಂಡ್ರೆಡ್ ಟೂರ್ನಮೆಂಟ್ ಹರಾಜಿನಲ್ಲಿ ಪಾಕಿಸ್ತಾನದ ಮತ್ತೊರ್ವ ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ತಂಡ 1,40,000 ಪೌಂಡ್‌ಗಳಿಗೆ ಅಂದ್ರೆ ಸುಮಾರು 1.72 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಬಟ್ ಇದು ಕಾಂಟ್ರವರ್ಸಿಯಾಗಿಲ್ಲ. ಯಾಕಂದ್ರೆ ಈ ಫ್ರಾಂಚೈಸಿಗೆ ಯಾವುದೇ ಐಪಿಎಲ್ ನಂಟಿಲ್ಲ. ಇನ್ನು, ಪಾಕ್‌ನ ಪ್ರಮುಖ ವೇಗಿ ಹ್ಯಾರಿಸ್ ರೌಫ್ ಹಾಗೂ ಆಫ್-ಸ್ಪಿನ್ ಆಲ್‌ರೌಂಡರ್ ಸೈಮ್ ಅಯೂಬ್ ಕೂಡ ಆಕ್ಷನ್ನಲ್ಲಿದ್ರೂ ಅವ್ರನ್ನ ಯಾರೂ ಖರೀದಿ ಮಾಡ್ಲಿಲ್ಲ. ಸೋ ಅನ್ಸೋಲ್ಡ್ ಆಗಿ ಉಳಿದ್ರು. ಬಟ್ ಅಬ್ರಾರ್ ಅಹ್ಮದ್ರನ್ನ ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ ಬಿಡ್ ಮಾಡಿದ್ದು ಭಾರತೀಯರ ಸಿಟ್ಟಿಗೆ ಕಾರಣ ಆಗಿದೆ. ಅಲ್ದೇ 2009 ರಿಂದ ಐಪಿಎಲ್‌ನಿಂದ ಪಾಕಿಸ್ತಾನಿ ಕ್ರಿಕೆಟಿಗರನ್ನು ನಿಷೇಧಿಸಿದ ನಂತರ ಫಾರ್ ದಿ ಫಸ್ಟ್ ಟೈಂ ಭಾರತದೊಂದಿಗೆ ಲಿಂಕ್ ಇರುವ ಫ್ರಾಂಚೈಸಿಯೊಂದು ಪಾಕಿಸ್ತಾನದ ಕ್ರಿಕೆಟಿಗನನ್ನು ಖರೀದಿ ಮಾಡಿದೆ. ಎಲ್ಲ ತಂಡಗಳು IPL-ಬೆಂಬಲಿತವಾಗಿರುವ SA20 ಲೀಗ್ನಲ್ಲೂ ಯಾವುದೇ ಪಾಕಿಸ್ತಾನಿ ಆಟಗಾರನನ್ನು ಖರೀದಿಸಿಯೇ ಇರಲಿಲ್ಲ. ಆದ್ರೀಗ ಕಾವ್ಯಾಮಾರನ್ ಒಡೆತನದ ಫ್ರಾಂಚೈಸಿ ಖರೀದಿ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಅಬ್ರಾರ್ ಅಹ್ಮದ್ನನ್ನು ತಂಡದಿಂದ ಕೈಬಿಡಬೇಕು ಅಂತಾ ಪ್ರೆಶರ್ ಹಾಕ್ತಿದ್ದಾರೆ. ಹಾಗೇ ಐಪಿಎಲ್ನಲ್ಲಿ ಎಸ್ಆರ್ಹೆಚ್ಗೆ ಸಪೋರ್ಟ್ ಮಾಡಲ್ಲ ಅಂತಾ ಕಿಡಿ ಕಾರ್ತಿದ್ದಾರೆ.

ನೋಡಿರಿ

