‘ಮಾಲ್ಡೀವ್ಸ್ ಬಹಿಷ್ಕಾರ’ ಎಫೆಕ್ಟ್ – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

‘ಮಾಲ್ಡೀವ್ಸ್ ಬಹಿಷ್ಕಾರ’ ಎಫೆಕ್ಟ್  – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

ಭಾರತ ಕುರಿತು ಮಾಲ್ಡೀವ್ಸ್‌ ಸಚಿವರ ಅವಹೇಳನಕಾರಿ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಭಾರತೀಯರು ಸೋಶಿಯಲ್‌ ಮೀಡಿಯಾದಲ್ಲಿ ಮಾಲ್ಡೀವ್ಸ್‌ ವಿರುದ್ಧ ಆಕ್ರೋಶಹೊರಹಾಕಿದ್ದರು. ಇದೀಗ ಭಾರತೀಯ ಪ್ರವಾಸಿಗರ ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಅಭಿಯಾನದ ಬಿಸಿ ತಟ್ಟಿದೆ. ಕಳೆದ ವರ್ಷ ಮಾಲ್ಡೀವ್ಸ್‌ ಪ್ರವಾಸದಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ (India) ವಿವಾದದ ಬಳಿಕ ಈಗ 5ನೇ ಸ್ಥಾನಕ್ಕೆ ಕುಸಿದೆ.

ಇದನ್ನೂ ಓದಿ: ಇಡಿ ಭಯದಿಂದ ಜಾರ್ಖಂಡ್​ ಸಿಎಂ ಹೇಮಂತ್ ಸೊರೆನ್ ನಾಪತ್ತೆ! –  ಬಿಎಂಡಬ್ಲ್ಯೂ ಕಾರು ವಶಪಡಿಸಿಕೊಂಡ ಅಧಿಕಾರಿಗಳು

ಕಳೆದ ಮೂರು ವಾರಗಳಲ್ಲಿ ಮಾಲ್ಡೀವ್ಸ್ ಪ್ರವಾಸದಲ್ಲಿ ಗಮನಾರ್ಹ ಬದಲಾವಣೆ ಎದುರಿಸಿದೆ. ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ಭಾರತೀಯರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಜ.28 ರಲ್ಲಿ ಪಡೆದ ಅಂಕಿಅಂಶಗಳು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟನ್ನು ಇದು ಪ್ರತಿಬಿಂಬಿಸುವಂತಿವೆ.

ಕಳೆದ ವರ್ಷ ಡಿ.31 ರ ಹೊತ್ತಿಗೆ ಭಾರತವು ಪ್ರವಾಸಿಗರ ಸಂಖ್ಯೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿತ್ತು. 2,09,198 ಪ್ರವಾಸಿಗರ ಆಗಮನದೊಂದಿಗೆ ಆ ವರ್ಷದ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಮಾರುಕಟ್ಟೆಯ ಸುಮಾರು ಶೇ.11 ರಷ್ಟನ್ನು ಹೊಂದಿತ್ತು.

2023 ರಲ್ಲಿ ಯಾವ ದೇಶ ಯಾವ ಸ್ಥಾನದಲ್ಲಿತ್ತು?

  1. ರಷ್ಯಾ: 18,561 ಪ್ರವಾಸಿಗರ ಆಗಮನ (10.6% ಮಾರುಕಟ್ಟೆ ಪಾಲು, 2023 ರಲ್ಲಿ 2 ನೇ ಸ್ಥಾನ)
  2. ಇಟಲಿ: 18,111 ಆಗಮನ (10.4% ಮಾರುಕಟ್ಟೆ ಪಾಲು, 2023 ರಲ್ಲಿ 6 ನೇ ಸ್ಥಾನ)
  3. ಚೀನಾ: 16,529 ಆಗಮನ (9.5% ಮಾರುಕಟ್ಟೆ ಪಾಲು, 2023 ರಲ್ಲಿ 3 ನೇ ಸ್ಥಾನ)
  4. ಯುಕೆ: 14,588 ಆಗಮನ (8.4% ಮಾರುಕಟ್ಟೆ ಪಾಲು, 2023 ರಲ್ಲಿ 4 ನೇ ಸ್ಥಾನ)
  5. ಭಾರತ: 13,989 ಆಗಮನ (8.0% ಮಾರುಕಟ್ಟೆ ಪಾಲು, 2023 ರಲ್ಲಿ 1 ನೇ ಸ್ಥಾನ)
  6. ಜರ್ಮನಿ: 10,652 ಆಗಮನ (6.1% ಮಾರುಕಟ್ಟೆ ಪಾಲು)
  7. USA: 6,299 ಆಗಮನ (3.6% ಮಾರುಕಟ್ಟೆ ಪಾಲು, 2023 ರಲ್ಲಿ 7 ನೇ ಸ್ಥಾನ)
  8. ಫ್ರಾನ್ಸ್: 6,168 ಆಗಮನ (3.5% ಮಾರುಕಟ್ಟೆ ಪಾಲು, 2023 ರಲ್ಲಿ 8 ನೇ ಸ್ಥಾನ)
  9. ಪೋಲೆಂಡ್: 5,109 ಆಗಮನ (2.9% ಮಾರುಕಟ್ಟೆ ಪಾಲು, 2023 ರಲ್ಲಿ 14 ನೇ ಸ್ಥಾನ)
  10. ಸ್ವಿಟ್ಜರ್ಲೆಂಡ್: 3,330 ಆಗಮನ (1.9% ಮಾರುಕಟ್ಟೆ ಪಾಲು, 2023 ರಲ್ಲಿ 10 ನೇ ಸ್ಥಾನ)

Shwetha M