ಮದುವೆ ಮನೆಯಲ್ಲಿ ರಸಗುಲ್ಲಾ ತಿಂದಿದ್ದಕ್ಕೆ ಬಾಲಕನನ್ನು ತಂದೂರಿ ಬಟ್ಟಿಗೆ ಎಸೆದ ಕ್ರೂರಿ!

ಮದುವೆ ಮನೆಯಲ್ಲಿ ರಸಗುಲ್ಲಾ ತಿಂದಿದ್ದಕ್ಕೆ ಬಾಲಕನನ್ನು ತಂದೂರಿ ಬಟ್ಟಿಗೆ ಎಸೆದ ಕ್ರೂರಿ!

ಮದುವೆ ಮನೆಯಲ್ಲಿ ಸ್ವೀಟ್ಸ್‌, ಐಸ್‌ಕ್ರೀಂ ಇದ್ರೆ ಮಕ್ಕಳು ಅದನ್ನೇ ಹೆಚ್ಚಾಗಿ ತಿನ್ನುವುದು ಸಾಮಾನ್ಯ. ಇದೀಗ ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ಬಾಲಕ ರಸಗುಲ್ಲಾ ತೆಗೆದುಕೊಂಡ ಅನ್ನೋ ಕಾರಣಕ್ಕೆ ಅಡಗೆಯವನು ಆತನನ್ನು ತಂದೂರಿ ಬಟ್ಟಿಗೆ ಎಸೆದಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಕೇಡಿ JD ಸೊಕ್ಕಡಗಿಸಿದ ಗೌತಮ್‌.. ಜೈದೇವ್ ಸಿಟ್ಟಿಗೆ ಶಕುಂತಲಾ ಬೀದಿ ಪಾಲು! – ಭೂಮಿಕಾ ಮನೆಗೆ ಕುತಂತ್ರಿ ಎಂಟ್ರಿ!

ಈ ಅಮಾನವೀಯ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ. ಇದೀಗ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಅಡುಗೆಯವನು ನಾಪತ್ತೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಗೊಂಡಾ ಜಿಲ್ಲೆಯ ನಿವಾಸಿ ಸಂತೋಷ್ ಅವರ ಮಗ ಚಮನ್ (11) ತಾಯಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಬಳಿಕ ಆತ ಬಸ್ತಿ ಜಿಲ್ಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದನು. ಅಲ್ಲಿಯೇ ಆತ ಎರಡನೇ ತರಗತಿ ಓದುತ್ತಿದ್ದನು. ಚಮನ್ ಬುಧವಾರ ತನ್ನ ಅಜ್ಜಿಯೊಂದಿಗೆ ಸಂಬಂಧಿಕರ ಮನೆಗೆ ಮದುವೆಗೆಂದು ಹೋಗಿದ್ದನು. ಈ ಸಂದರ್ಭದಲ್ಲಿ ಆತ ಆಹಾರ ತಯಾರಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಇರಿಸಲಾಗಿದ್ದ ರಸಗುಲ್ಲಾಗಳನ್ನು ತೆಗೆದು ತಿನ್ನಲು ಪ್ರಾರಂಭಿಸಿದ್ದಾನೆ. ಮಗು ಪದೇ ಪದೇ ರಸಗುಲ್ಲಾಗಳನ್ನು ಸೇವಿಸಿದಾಗ ಸ್ಥಳದಲ್ಲಿದ್ದ ಅಡುಗೆಯಾವನು ಸಿಟ್ಟುಗೊಂಡು ಮಗುವಿಗೆ ಬೆದರಿಸಿದ್ದಾನೆ. ಈ ವೇಳೆ ಮಗು ತಂದೂರಿ ಬಟ್ಟಿಗೆ ಬಿದ್ದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕನ ಅಳುವ ಶಬ್ದ ಕೇಳಿ ಜನರು ಸ್ಥಳಕ್ಕೆ ಧಾವಿಸಿ ಆತನನ್ನು ತಂದೂರಿ ಬಟ್ಟಿಯಿಂದ ಹೊರಗೆ ತೆಗೆದರು. ಬಾಲಕನಿಗೆ ಮುಖದಿಂದ ಸೊಂಟದವರೆಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ಆತನನ್ನು ತಕ್ಷಣ ಲಕ್ನೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಮುಂದುವರಿಸಲಾಗಿದೆ. ಘಟನೆಯ ಬಳಿಕ ಆರೋಪಿ ಅಡುಗೆಯವನು ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದ್ದಾರೆ. ಅಡುಗೆ ಮಾಡುವವನ ವಿರುದ್ಧ ಮಗುವಿನ ಮಾವ ದೇವಿದಿನ್ ನಿಶಾದ್ ಪೊಲೀಸರಿಗೆ ದೂರು ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಸ್ವರ್ಣಿಮಾ ಸಿಂಗ್, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Shwetha M