ಜೋಕಾಲಿಯಲ್ಲಿ ಮಕ್ಕಳನ್ನು ಆಟವಾಡಲು ಬಿಡುವ ಮುನ್ನ ಎಚ್ಚರ! – ಹಗ್ಗ ಕೊರಳಿಗೆ ಸುತ್ತಿಕೊಂಡು ಬಾಲಕ ಸಾವು

ಜೋಕಾಲಿಯಲ್ಲಿ ಮಕ್ಕಳನ್ನು ಆಟವಾಡಲು ಬಿಡುವ ಮುನ್ನ ಎಚ್ಚರ! – ಹಗ್ಗ ಕೊರಳಿಗೆ ಸುತ್ತಿಕೊಂಡು ಬಾಲಕ ಸಾವು

ಪೋಷಕರು ಮಕ್ಕಳ ಮೇಲೆ ಸದಾ ಕಣ್ಣಿಟ್ಟಿರಬೇಕು. ಆಟ ಆಡುತ್ತಾ ಮಕ್ಕಳು ತಮ್ಮ ಜೀವಕ್ಕೆ ಕುತ್ತು ತರೋ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಹೆತ್ತವರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಮಕ್ಕಳನ್ನು ನೋಡಿಕೊಳ್ಳಬೇಕಾಗುತ್ತದೆ. ಇದೀಗ ಇಲ್ಲೊಬ್ಬ ಪುಟ್ಟ ಬಾಲಕ ಜೋಕಾಲಿಯಲ್ಲಿ ಆಡವಾಡಲು ಹೋಗಿ ಧಾರುಣ ಅಂತ್ಯ ಕಂಡಿದ್ದಾನೆ.

ಪುಟಾಣಿ ಮಕ್ಕಳಿಗೆ ಜೋಕಾಲಿ ಅಂದ್ರೆ ತುಂಬಾ ಅಚ್ಚುಮೆಚ್ಚು. ಹೀಗಾಗಿ ಜೋಕಾಲಿ ಕಂಡ ತಕ್ಷಣ ಹೋಗಿ ಅದರಲ್ಲಿ ಆಟವಾಡುತ್ತಾರೆ. ಈ ವೇಳೆ ಮಕ್ಕಳೊಂದಿಗೆ ಪೋಷಕರು ಒಟ್ಟಿಗೆ ಇರಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಕೂಡ ಮಕ್ಕಳ ಜೀವಕ್ಕೆ ಕಂಟಕ ಎದುರಾಗುತ್ತದೆ. ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಆಟವಾಡುವಾಗ ಜೋಕಾಲಿಯ ಹಗ್ಗ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಮಗನನ್ನು ಕೊಂದು ಅಡುಗೆ ಮಾಡಿದ್ಲು..! – ಕರುಳ ಕುಡಿ ಎಂದು ನೋಡದೆ ತಿಂದೇ ಬಿಟ್ಲು ಪಾಪಿ ತಾಯಿ!

ಮೃತಪಟ್ಟ ಬಾಲಕನನ್ನು ಆದಿಲ್ ಎಂದು ಗುರುತಿಸಲಾಗಿದೆ. ಆ ಜೋಕಾಲಿಯನ್ನು ಬಾಲಕನ ತಂಗಿಗಾಗಿ ಕಟ್ಟಲಾಗಿತ್ತು. ನಿತ್ಯ ಅದರಲ್ಲಿ ಬಾಲಕ ಕೂಡ ಆಟವಾಡುತ್ತಿದ್ದ. ಆದಿಲ್ ತನ್ನ ಮನೆಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಉಯ್ಯಾಲೆಯ ಹಗ್ಗ ಸುರುಳಿ ಸುತ್ತಿಕೊಳ್ಳುತ್ತಾ ಬಾಲಕನ ಕುತ್ತಿಗೆಯನ್ನೂ ಕೂಡ ಸುತ್ತುವರೆದಿತ್ತು. ಆತ ವಾಂತಿ ಮಾಡಿಕೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆದಿಲ್​ನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

Shwetha M