ಬೌಲಿಂಗ್ ಸ್ಟಾರ್ಸ್.. ಮ್ಯಾಚ್ ವಿನ್ನರ್ಸ್ – ಬೂಮ್ ಬೂಮ್ ಬುಮ್ರಾನೇ ನಂಬರ್ 1
ಬಾಲ್ ನಲ್ಲೇ ಜಗಮೆಚ್ಚಿದ ಪ್ಲೇಯರ್ಸ್

ಕ್ರಿಕೆಟ್ ಅನ್ನೋದೇ ಒಂದು ಟೀಂ ಗೇಮ್. ಅಲ್ಲಿ ಓಪನರ್ ಬ್ಯಾಟ್ಸ್ಮನ್ನಿಂದ ಹಿಡಿದು ಲಾಸ್ಟ್ ಬಾಲ್ ಎಸೆಯೋ ಬೌಲರ್ವರೆಗೂ ಸ್ಟ್ರಾಂಗ್ ಆಗಿರ್ಬೇಕು. ಆದ್ರೂ ಕೂಡ ಅಭಿಮಾನಿಗಳಿಗೆ ಬ್ಯಾಟ್ಸ್ಮನ್ಸ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಭಾರತದಲ್ಲಿ ಕಿಂಗ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಇಂಗ್ಲೆಂಡ್‌ನ ಜೋ ರೂಟ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಹೀಗೇ ಹೇಳ್ತಾ ಹೋದ್ರೆ ಪಟ್ಟಿ ಬೆಳೀತಾ ಹೋಗುತ್ತೆ. ಅಷ್ಟೇ ಯಾಕೆ ಫ್ಯೂಚರ್ ಫ್ಯಾಬ್-4 ರೇಸ್‌ನಲ್ಲಿ ಭಾರತದ ಯಶಸ್ವಿ ಜೈಸ್ವಾಲ್, ಶ್ರೀಲಂಕಾದ ಕಮಿಂದು ಮೆಂಡಿಸ್, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಮತ್ತು ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಮುಂದಿದ್ದಾರೆ. ಹೀಗೆ ಬ್ಯಾಟ್ಸ್ಮನ್ಸ್ ಹೆಸರು ಸದಾ ಮುಂಚೂಣಿಯಲ್ಲೇ ಇರುತ್ತೆ. ಇತ್ತೀಚಿನ ದಿನಗಳಲ್ಲಿ ಒಂದ್ ರೇಂಜ್ಗೆ ಬೌಲರ್ಸ್ ಬಗ್ಗೆ ಆಸಕ್ತಿ ಹೆಚ್ಚಾಗ್ತಿದೆ. ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ವೇಗದ ಬೌಲರ್ಸ್ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ, ವಿಶ್ವಕ್ರಿಕೆಟ್ ಕಂಡ ಅತ್ಯಂತ ವೇಗದ ಬೌಲರ್‌ಗಳು ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: MI ಚಾಯ್ಸ್ ರೋಹಿತ್ Or ಪಾಂಡ್ಯ? – ಸೂರ್ಯ Vs ಹಾರ್ದಿಕ್ EGO ಫೈಟ್
ಜಗ ಮೆಚ್ಚಿದ ಬೌಲರ್ಸ್!
ಟೀಂ ಇಂಡಿಯಾ ಮಾತ್ರವಲ್ಲದೆ ವಿಶ್ವಕ್ರಿಕೆಟ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಬೌಲರ್ ಅಂದ್ರೆ ಅದು ಜಸ್ಪ್ರೀತ್ ಬುಮ್ರಾ. ಭಾರತ ತಂಡಕ್ಕಂತೂ ಬುಮ್ರಾ ಬ್ರಹ್ಮಾಸ್ತ್ರವಾಗಿದ್ದಾರೆ. ಭಾರತ ತಂಡದ ಮ್ಯಾಚ್ ವಿನ್ನರ್ ಅಂದ್ರೂ ತಪ್ಪಿಲ್ಲ. ಟಿ20 ವಿಶ್ವಕಪ್‌ನ ಫೈನಲ್‌ನಲ್ಲೂ ಈ ಮಾತನ್ನು ಸಾಬೀತುಪಡಿಸಿದ್ದಾರೆ. ಟೀಂ ಇಂಡಿಯಾ ಪರ ಇದುವರೆಗೆ 37 ಟೆಸ್ಟ್ ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಬುಮ್ರಾ 89 ಏಕದಿನ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. 70 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ. ಇನ್ನು ಈ ರೇಸ್ನಲ್ಲಿರೋ ಮತ್ತೊಂದು ಹೆಸರು ಕಗಿಸೊ ರಬಾಡ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ವೇಗ ಮತ್ತು ಲೈನ್-ಲೆಂಗ್‌ಗೆ ಹೆಸರುವಾಸಿಯಾಗಿದ್ದಾರೆ. 64 ಟೆಸ್ಟ್ ಪಂದ್ಯಗಳಲ್ಲಿ 299 ವಿಕೆಟ್ ಪಡೆದಿದ್ದಾರೆ. ಇದಲ್ಲದೇ 101 ಏಕದಿನ ಪಂದ್ಯಗಳಲ್ಲಿ 157 ವಿಕೆಟ್ ಪಡೆದಿದ್ದಾರೆ. ರಬಾಡ ಅಂಕಿಅಂಶಗಳನ್ನು ನೋಡಿದರೆ, ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ದಕ್ಷಿಣ ಆಫ್ರಿಕಾ ತಂಡ ಹಾಗೂ ಐಪಿಎಲ್ ತಂಡಗಳನ್ನು ಗೆಲುವಿನತ್ತ ಮುನ್ನಡೆಸಿರುವ ಹೆಗ್ಗಳಿಕೆಯೂ ಇದೆ. ಹಾಗೇ ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಭಯಾನಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಬೋಲ್ಟ್ 78 ಟೆಸ್ಟ್ ಪಂದ್ಯಗಳಲ್ಲಿ 317 ವಿಕೆಟ್ ಪಡೆದಿದ್ದಾರೆ. ಅವರು 114 ODIಗಳಲ್ಲಿ 211 ವಿಕೆಟ್‌ಗಳನ್ನು ಮತ್ತು 61 T20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 83 ವಿಕೆಟ್‌ಗಳನ್ನು ಹೊಂದಿದ್ದಾರೆ. ಇದೇ ಸಾಲಿನಲ್ಲಿ ನಿಲ್ಲೋ ಮತ್ತೊಬ್ಬ ಬೌಲರ್ ಜೋಶ್ ಹ್ಯಾಜಲ್‌ವುಡ್. ಆಸ್ಟ್ರೇಲಿಯಾದ ಬಿರುಗಾಳಿ ಬೌಲರ್ ಜೋಶ್ ಹ್ಯಾಜಲ್‌ವುಡ್ ಹೆಸರೂ ಈ ಪಟ್ಟಿಯಲ್ಲಿದೆ. 70 ಟೆಸ್ಟ್ ಪಂದ್ಯಗಳಲ್ಲಿ 273 ವಿಕೆಟ್ ಪಡೆದಿದ್ದಾರೆ. 89 ಏಕದಿನ ಪಂದ್ಯಗಳಲ್ಲಿ 138 ವಿಕೆಟ್ ಹಾಗೂ 52 ಟಿ20 ಪಂದ್ಯಗಳಲ್ಲಿ 67 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ಈ ನಾಲ್ವರು ಬೌಲರ್ಸ್ ಪಂದ್ಯದ ಗತಿಯನ್ನೇ ಬದಲಿಸೋ ಸಾಮರ್ಥ್ಯ ಹೊಂದಿದ್ದಾರೆ.
ಇನ್ನು ಈ ಆಟಗಾರರ ಹೊರತಾಗಿ ಭಾರತದ ಮೊಹಮ್ಮದ್ ಶಮಿ, ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಇಂಗ್ಲೆಂಡ್‌ನ ಮಾರ್ಕ್ ವುಡ್, ನ್ಯೂಜಿಲೆಂಡ್‌ನ ಟಿಮ್ ಸೌಥಿ, ಪಾಕಿಸ್ತಾನದ ಶಾಹೀನ್ ಅಫ್ರಿದಿ ಅವರಂತಹ ಬೌಲರ್‌ಗಳು ತಮ್ಮ ಪ್ರದರ್ಶನದಿಂದಲೇ ಹಲ್ಚಲ್ ಸೃಷ್ಟಿಸಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ನಲ್ಲಿ ಈಗ ಬ್ಯಾಟರ್ಸ್ಗಿಂತ ಬೌಲರ್ಸ್ ಪಂದ್ಯದ ದಿಕ್ಕು ಬದಲಿಸ್ತಿದ್ದಾರೆ. ಒನ್ ಮ್ಯಾನ್ ಶೋ ಎನ್ನುವಂಥ ಪ್ರದರ್ಶನ ನೀಡುತ್ತಿದ್ದಾರೆ.