ಬೌಲಿಂಗ್ ನಲ್ಲಿ ಕುಲದೀಪ್, ಜಸ್ಪ್ರೀತ್, ಜಡೇಜಾ, ಸಿರಾಜ್ ಮ್ಯಾಜಿಕ್ – ಆಸ್ಟ್ರೇಲಿಯಾ ಮೇಲೆ ಮಾರಕ ದಾಳಿ ಮಾಡ್ತಾರಾ ಈ ಬೌಲರ್ಸ್?

ಬೌಲಿಂಗ್ ನಲ್ಲಿ ಕುಲದೀಪ್, ಜಸ್ಪ್ರೀತ್, ಜಡೇಜಾ, ಸಿರಾಜ್ ಮ್ಯಾಜಿಕ್ – ಆಸ್ಟ್ರೇಲಿಯಾ ಮೇಲೆ ಮಾರಕ ದಾಳಿ ಮಾಡ್ತಾರಾ ಈ ಬೌಲರ್ಸ್?

ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲೂ ಮಿಂಚುತ್ತಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ನೆಚ್ಚಿನ ಎರಡು ತಂಡಗಳು ಎನಿಸಿಕೊಂಡಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಟೂರ್ನಿಯಲ್ಲಿ ಟೀಮ್ ಇಂಡಿಯಾ ಆರಂಭದಿಂದಲೂ ಎಲ್ಲಾ ವಿಭಾಗಗಳಲ್ಲಿಯೂ ಮೇಲುಗೈ ಸಾಧಿಸಿ ಸಂಪೂರ್ಣ ತಂಡವಾಗಿ ಆಟ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಇನ್ನು ಈ ಸಲದ ವಿಶ್ವಕಪ್ ನಲ್ಲಿ ಬೌಲರ್ ಗಳೂ ಕೂಡ ಭಾರತದ ಪರ ಸಖತ್ ಮ್ಯಾಜಿಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾವೇ ಬಲಿಷ್ಠ ಟೀಮ್..! – ಮತ್ತೊಂದು ಬಲಾಢ್ಯಟೀಮ್ ಭಾರತ ಜೊತೆ ಆಸೀಸ್ ಫೈನಲ್ ಹಣಾಹಣಿ

ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಕೂಡ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ವರ್ಷ ಜಸ್ಪ್ರೀತ್ ಬುಮ್ರಾ ಬೆನ್ನುನೋವಿಗೆ ಒಳಗಾಗಿದ್ದರು. ಅವರು ಒಂದು ವರ್ಷ ಆಟದಿಂದ ಹೊರಗುಳಿದಿದ್ದರು. ಏಷ್ಯಾಕಪ್‌ಗೆ ಮುನ್ನ ಗಾಯದಿಂದ ಚೇತರಿಸಿಕೊಂಡಿದ್ದರು. ಐರ್ಲೆಂಡ್ ಮತ್ತು ಏಷ್ಯಾಕಪ್ ಮೂಲಕ ಕಂಬ್ಯಾಕ್‌ ಮಾಡಿದ ಅವರು ಪ್ರಸ್ತುತ ವಿಶ್ವಕಪ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಬಿಸಿಸಿಐ ಮೂಲದ ಮಾಹಿತಿ ಪ್ರಕಾರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಆಡುತ್ತಿಲ್ಲ. ಅವರ ಬದಲಾಗಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಲಿದ್ದಾರೆ. ಈ ಹೇಳಿಕೆಗೆ ಪೂರಕ ಎಂಬಂತೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಕ್ರಿಕೆಟ್ ತಂಡ ಅಭ್ಯಾಸದ ವೇಳೆ ಅಶ್ವಿನ್ ಭಾಗವಹಿಸಿದ್ದರು. ಆದರೆ ಸಿರಾಜ್ ಅನುಪಸ್ಥಿತಿ ಕಾಣುತ್ತಿತ್ತು. ಒಂದು ವೇಳೆ ಸಿರಾಜ್ ಬದಲು ಅಶ್ವಿನ್ ಟೀಂ ಇಂಡಿಯಾದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದರೆ ಮೂವರು ಸ್ಪಿನ್ನರ್ ಗಳು ತಂಡದಲ್ಲಿ ಸ್ಥಾನ ಪಡೆದಂತಾಗುತ್ತದೆ. ಇನ್ನು ಎಡಗೈ ಚೈನಾಮನ್ ಬೌಲರ್ ಎನಿಸಿಕೊಂಡಿರುವ ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.  ಅತ್ಯುತ್ತಮ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ವಿಶ್ವಕಪ್‌ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ.

Shantha Kumari