3 ಮ್ಯಾಚ್.. 139 ರನ್ಸ್ – ದುಬಾರಿಯಾದ್ರೂ ಗೆಲ್ಲಿಸಿದ ಭುವಿ
SWING KING ಅನುಭವವೇ ಪ್ಲಸ್

ನ್ಯೂಜಿಲೆಂಡ್ ವಿರುದ್ಧದ ಟಿ-20ಐ ಸಿರೀಸ್ಗೂ ಮುನ್ನ ಅತೀ ಹೆಚ್ಚು ಸದ್ದು ಮಾಡಿದ್ದ ಹೆಸ್ರು ಭುವನೇಶ್ವರ್ ಕುಮಾರ್. 4 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಿದ್ದ ಭುವಿ ಬೌಲಿಂಗ್ ಬಗ್ಗೆ ತುಂಬಾನೇ ಎಕ್ಸ್ಪೆಕ್ಟೇಷನ್ಸ್ ಇತ್ತು. ಆದ್ರೆ ಕಳೆದ ಮೂರು ಪಂದ್ಯಗಳಲ್ಲಿ ಭುವಿ ಬೌಲಿಂಗ್ ದುಬಾರಿಯಾಗಿದೆ. ಹೀಗಿದ್ರೂ ಬೇರೆ ಬೌಲರ್ಗಳ ಮೇಲೆ ಅವ್ರ ಪ್ರಸೆನ್ಸ್ ಇಂಪ್ಯಾಕ್ಟ್ ಮಾಡಿದೆ.
ಇದನ್ನೂ ಓದಿ : ಇಂಗ್ಲೆಂಡ್ ತಂಡಕ್ಕೆ ODI ಗ್ರಹಣ – 3 ವರ್ಷ.. 34 ಸೋಲು.. ಏನಾಗಿದೆ?
2025 ಮತ್ತು 2026ರ ಐಪಿಎಲ್ನಲ್ಲಿ ಆರ್ಸಿಬಿ ಪರ ಧೂಳೆಬ್ಬಿಸಿ ತಮ್ಮ ಬೌಲಿಂಗ್ ಸಾಮರ್ಥ್ಯದಿಂದಲೇ ಟಿ-20ಐ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದ ಬೌಲರ್ ಭುವನೇಶ್ವರ್ ಕುಮಾರ್. ಆದ್ರೆ ಕಿವೀಸ್ನ ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಅವರ ಸ್ವಿಂಗ್ ವರ್ಕ್ ಆಗುತ್ತಿಲ್ಲ. ಈ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮೂರೂ ಪಂದ್ಯಗಳಲ್ಲೂ ರನ್ಸ್ ಕೊಡೋದ್ರಲ್ಲಿ ದುಬಾರಿಯಾಗಿದ್ದಾರೆ.
ಮೂರು ಪಂದ್ಯ.. ರನ್ಸ್ ಕಂಟ್ರೋಲ್ ಮಾಡೋದೇ ಸವಾಲು..!
ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ಗೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು T20I ಪಂದ್ಯಗಳಲ್ಲಿ ದುಬಾರಿಯಾಗಿದ್ದಾರೆ. ಮೂರೂ ಇನ್ನಿಂಗ್ಸ್ಗಳಲ್ಲೂ ಫಸ್ಟ್ ಓವರ್ ಬೌಲಿಂಗ್ ಮಾಡಿ ರನ್ಸ್ ಕೊಡದೆ ಚೆನ್ನಾಗಿ ಸ್ಟಾರ್ಟ್ ಮಾಡಿದ್ರು. ಆದ್ರೆ ಆ ನಂತ್ರ ಮೂರು ಓವರ್ಗಳು ಸಿಕ್ಕಾಪಟ್ಟೆ ಎಕ್ಸ್ಪೆನ್ಸಿವ್ ಆಗಿವೆ. ಮೂರು ಪಂದ್ಯಗಳಲ್ಲಿ ಒಟ್ಟು 12 ಓವರ್ಗಳನ್ನು ಬೌಲ್ ಮಾಡಿ 139 ರನ್ ನೀಡಿ ಕೇವಲ 1 ವಿಕೆಟ್ ಪಡೆದಿದ್ದಾರೆ. ಌಂಡ್ ಈ ಸರಣಿಯ ಎಕಾನಮಿ ರೇಟ್ 11.58.
ಭುವಿ ಬೌಲಿಂಗ್ ದುಬಾರಿ!
ಕ್ರೈಸ್ಟ್ ಚರ್ಚ್ ನ ಮೊದಲ ಮ್ಯಾಚಲ್ಲಿ ನ್ಯೂಜಿಲೆಂಡ್ ತಂಡ 225/4 ಕಲೆ
ಮೊದಲ ಪಂದ್ಯದಲ್ಲಿ 49 ರನ್ಸ್.. ಯಾವುವೇ ವಿಕೆಟ್ ಇಲ್ಲ.. ಎಕಾನಮಿ 12.25
2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ 180/5 ರನ್ಸ್.. 50 ರನ್ ಗಳನ್ನ ಬಿಟ್ಟುಕೊಟ್ಟ ಭುವಿ
ಡ್ಯಾರಿಲ್ ಮಿಚೆಲ್ (6 ರನ್) ಔಟ್ ಮಾಡಿ ಸರಣಿಯ ಮೊದಲ ವಿಕೆಟ್
ವೆಲ್ಲಿಂಗ್ಟನ್ ನ ಮೂರನೇ ಪಂದ್ಯದಲ್ಲಿ 198/3 ರನ್ಸ್ ಕಲೆ ಹಾಕಿದ್ದ ಕಿವೀಸ್
40 ರನ್ಸ್ ಬಿಟ್ಟುಕೊಟ್ಟು ಯಾವುದೇ ವಿಕೆಟ್ ಪಡೆಯದ ಭುವನೇಶ್ವರ್
ಮೂರು ಪಂದ್ಯಗಳಿಂದ 12 ಓವರ್ ಗಳಲ್ಲಿ 139ರನ್ಸ್.. 1 ವಿಕೆಟ್ ಬೇಟೆ
ಸರಣಿಯಲ್ಲಿ ಭಾರತದ ಪರ ಅತೀ ಹೆಚ್ಚು ರನ್ಸ್ ಬಿಟ್ಟು ಕೊಟ್ಟ ಬೌಲರ್
ಮೂರು ಪಂದ್ಯಗಳಲ್ಲೂ ಎಕಾನಮಿ ರೇಟ್ 10ಕ್ಕಿಂತ ಜಾಸ್ತಿ ಇರುವ ಆತಂಕ
ಸೋ ಭುವಿ ಎಕ್ಸ್ಪೆನ್ಸಿವ್ ಆಗ್ತಿರೋದ್ರಿಂದ ನಾಲ್ಕನೇ ಪಂದ್ಯದಿಂದ ಅವ್ರನ್ನ ಹೊರಗಿಡಿ ಅನ್ನೋ ಮಾತುಗಳೂ ಶುರುವಾಗಿವೆ. ಈಗಾಗಲೇ ಸರಣಿಯನ್ನು 3-0 ಇಂದ ಗೆದ್ದುಕೊಂಡಿರುವುದರಿಂದ, ಅಕ್ಟೋಬರ್ 30ರಂದು ಆಕ್ಲೆಂಡ್ನಲ್ಲಿ ನಡೆಯಲಿರುವ 4ನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬದಲಿಗೆ ಯುವ ವೇಗಿ ಮಯಾಂಕ್ ಯಾದವ್ ಅವರಿಗೆ ಚಾನ್ಸ್ ಕೊಡಿ ಅನ್ನೋ ಕೂಗು ಕೇಳಿ ಬರ್ತಿದೆ. ಆದ್ರೆ ಭುವಿ ಕಾಸ್ಟ್ಲಿ ಆಗಿದ್ರೂ ಅವ್ರ ಪ್ರಸೆನ್ಸ್ನಲ್ಲಿ ಬೇರೆ ಬೌಲರ್ಗಳು ಇಂಪ್ಯಾಕ್ಟ್ ಮಾಡ್ತಿದ್ದಾರೆ ಅನ್ನೋದನ್ನ ಒಪ್ಪಿಕೊಳ್ಬೇಕಾಗುತ್ತೆ. ಈ ಬಗ್ಗೆ ಸ್ವತಃ ಭುವನೇಶ್ವರ್ ಅವ್ರೇ ಹೇಳಿದ್ದಾರೆ.
4 ವರ್ಷಗಳ ಬಳಿಕ ಕಂ ಬ್ಯಾಕ್ ಬಗ್ಗೆ ಭುವಿ ಅಚ್ಚರಿಯ ಮಾತುಗಳು!
ನ್ಯೂಜಿಲೆಂಡ್ ವಿರುದ್ಧದ ಸಿರೀಸ್ ಮೂಲಕ ಮೆನ್ ಇನ್ ಬ್ಲ್ಯೂ ಜೆರ್ಸಿ ತೊಟ್ಟಿರೋ ಭುವಿ ದೇಶಕ್ಕಾಗಿ ಆಡುವುದಕ್ಕಿಂತ ದೊಡ್ಡ ಖುಷಿ ಮತ್ತು ಹೆಮ್ಮೆ ಮತ್ತೊಂದಿಲ್ಲ. ಆದ್ರೆ ನಾನು ಯಾವುದೇ ನಿರೀಕ್ಷೆಗಳಿಲ್ಲದೆ ಕಣಕ್ಕಿಳಿದಿದ್ದೆ. ಹಾಗೇ ಅರ್ಷದೀಪ್ ಸಿಂಗ್ ಮತ್ತು ಮಯಾಂಕ್ ಯಾದವ್ ಸೇರಿದಂತೆ ತಂಡದಲ್ಲಿರುವ ಇಂದಿನ ಯುವ ವೇಗಿಗಳಿಗೆ ತಮ್ಮ ಅನುಭವದ ಮೂಲಕ ಮಾರ್ಗದರ್ಶನ ನೀಡುತ್ತಿರುವುದಾಗಿ ಭುವಿ ಹೇಳಿದ್ದಾರೆ. ಒಟ್ನಲ್ಲಿ ಭುವಿ ಬೌಲಿಂಗ್ ಕಾಸ್ಟ್ಲಿ ಅನ್ಸಿದ್ರೂ ರಿಸಲ್ಟ್ ಭಾರತದ ಪರವೇ ಬಂದಿವೆ. ಆದ್ರೆ ಭುವಿಯಲ್ಲಿರೋ ರಿಯಲ್ ಬೌಲಿಂಗ್ ಸ್ಕಿಲ್ ಹೊರಬರ್ಬೇಕಿದೆ.

ನೋಡಿರಿ

