ಮಗುವಿಗೆ ಬಾಟಲಿಯಲ್ಲಿ ಹಾಲು ಕುಡಿಸ್ತೀರಾ? – ನಿಮ್ಮ ಮಗುವಿನ ಆರೋಗ್ಯದ ಕಾಳಜಿ ಇಲ್ವಾ?

ಮಗುವಿಗೆ ಬಾಟಲಿಯಲ್ಲಿ ಹಾಲು ಕುಡಿಸ್ತೀರಾ? – ನಿಮ್ಮ ಮಗುವಿನ ಆರೋಗ್ಯದ ಕಾಳಜಿ ಇಲ್ವಾ?

ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಅಮೃತ ಎನ್ನುವುದು ನಮಗೆಲ್ಲಾ ಗೊತ್ತಿರೋ ವಿಚಾರಾನೇ.. ಹಾಗಾಗಿ ಮೊದಲ 6 ತಿಂಗಳವರೆಗೆ ತಾಯಿಯ ಎದೆಹಾಲು ಕುಡಿಸಲು ವೈದ್ಯರು ಸಲಹೆ ನೀಡ್ತಾರೆ. ಅನೇಕ ಬಾರಿ, ತಾಯಿಯಲ್ಲಿ ಹಾಲು ಉತ್ಪಾದನೆ ಕಡಿಮೆಯಾದ್ರೆ ಅಥವಾ ಇತರೆ ಕಾರಣಗಳಿಂದ ಮಗುವಿಗೆ ಪೂರಕ ಹಾಲನ್ನು ಕೊಡ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮಗುವಿಗೆ ಬಾಟಲಿಯಿಂದ ಹಾಲು ಕುಡಿಸೋದು ಸರ್ವೇಸಾಮಾನ್ಯ.  ಆದ್ರೆ ಈ ಬಾಟಲ್ ಹಾಲು ಮಗುವಿನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ನವಜಾತ ಶಿಶುಗಳ ಮರಣ ತಡೆಗಟ್ಟಲು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ – ಬೇಬಿ ಆಂಬ್ಯುಲೆನ್ಸ್‌ಗೆ ಚಾಲನೆ

ತಾಯಿ ಹಾಲಿನಲ್ಲಿ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶಗಳಿರುತ್ತವೆ. ಆದರೆ ಬಾಟಲಿ ಮೂಲಕ ಹಸುವಿನ ಹಾಲು ಕುಡಿಸಿದ್ರೆ, ಅದರಿಂದ ಮಗುವಿಗೆ ಬೇಕಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿರೋದಿಲ್ಲ.. ಇದ್ರಿಂದಾಗಿ ಮಗು ನೈಸರ್ಗಿಕ ಪೋಷಕಾಂಶಗಳಿಂದ ವಂಚಿತವಾಗುತ್ತದೆ.  ಇದಕ್ಕಿಂತ ಹೆಚ್ಚಾಗಿ ಇನ್ನೂ ಕೆಲ ಮುಖ್ಯ ಸಂಗತಿಗಳಿವೆ. ಹಾಲಿನ ಬಾಟಲಿಯಲ್ಲಿ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳುತ್ತವೆ. ಈ ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸದೆ ಮಕ್ಕಳಿಗೆ ಹಾಲು ನೀಡಿದರೆ, ನಂತರ ರೋಗದ ಅಪಾಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಕೊಳಕು ಬಾಟಲಿಯಿಂದ ಹಾಲನ್ನು ಕುಡಿಯುವುದರಿಂದ ಮಗುವಿಗೆ ಗಂಭೀರವಾದ ಹೊಟ್ಟೆಯ ಸೋಂಕು, ಅತಿಸಾರ, ಎದೆಯ ಸೋಂಕು ಅಥವಾ ಮೂತ್ರದ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ.

ಇದಲ್ಲದೆ ಬಾಟಲ್ ಫೀಡಿಂಗ್ ತಾಯಿ ಮತ್ತು ಮಗುವಿನ ನಡುವಿನ ಸಂಬಂಧದ ಆಪ್ತತೆಯನ್ನು ಕುಗ್ಗಿಸಬಹುದು.. ಹಾಗಿದ್ದರೂ ಬಾಟಲ್ನಲ್ಲಿ ಹಾಲು ಕುಡಿಸುವುದೇ ಅನಿವಾರ್ಯವಾಗಿದ್ದರೆ, ಬಾಟಲಿಯು ಉತ್ತಮ ಗುಣಮಟ್ಟದ್ದಾಗಿದೆಯೇ ಎನ್ನುವುದನ್ನು ಪರೀಕ್ಷಿಸಿ. ಅದರ ನಿಪ್ಪಲ್ ಸರಿಯಾಗಿದೆಯೇ ಎನ್ನುವುದನ್ನು ಗಮನಿಸಬೇಕು. ಮಗುವಿನ ಬಾಟಲಿಗಳನ್ನು ಕಾಲಕಾಲಕ್ಕೆ ಬೆಚ್ಚಗಿನ ನೀರಿನಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಕೆಲವೊಮ್ಮೆ ಮಗು ಸ್ವಲ್ಪ ಹಾಲು ಕುಡಿಯುತ್ತದೆ ಮತ್ತು ನಂತರ ಅದನ್ನು ಬಿಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಾಯಿ ಉಳಿದ ಹಾಲನ್ನು ಮಗುವಿಗೆ ನಂತರ ಕುಡಿಸುತ್ತಾಳೆ. ಹೀಗೆ ಮಾಡುವುದರಿಂದ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ದೀರ್ಘಕಾಲ ಇಟ್ಟ ಹಾಲು ಕೆಡಬಹುದು. ಯಾವುದೇ ಕಾರಣಕ್ಕೂ ಬಾಟಲಿಯಲ್ಲಿಟ್ಟ ಹಾಲನ್ನು ಮತ್ತೆ ಕುಡಿಸಬೇಡಿ.. ಆದಷ್ಟು ಪ್ರೆಶ್ ಆಗಿ ಕುದಿಸಿ ಆರಿಸಿದ ಹಾಲವನ್ನು ಮಾತ್ರ ಬಾಟಲಿಗೆ ಹಾಕಿ ಮಗುವಿಗೆ ಕುಡಿಸಿ.. ಆದ್ರೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಲು ಕುಡಿಸಾಗ ಜಾಸ್ತಿ ಬಿಸಿಯಿರುವ ಹಾಲು ತುಂಬಿಸಲೇಬೇಡಿ.. ಹಾಗೇನಾದ್ರೂ ಮಾಡಿದ್ರೆ ಮಗುವಿನ ಹೊಟ್ಟೆಗೆ ಪ್ಲಾಸ್ಟಿಕ್ನ ಅಂಶಗಳೂ ಸೇರಿಕೊಂಡು ಆರೋಗ್ಯ ಸಮಸ್ಯೆ ಎದುರಾಗಬಹುದು.. ಅದರ ಬಗ್ಗೆ ನಿಮಗೆ ಎಚ್ಚರವಿರಲಿ..

Shwetha M