ಸಿಡಿದ ಸಿದ್ದು.. ಬೊಮ್ಮಾಯಿ ಗುದ್ದು.. ಸದನದಲ್ಲಿ ಸಮರ..
ಬೆಳಗಾವಿಯಲ್ಲಿ ನಡೀತಿರೋ ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಇಂದು ವಿಧಾನಸಭೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಪ್ರಶ್ನೋತ್ತರ ಕಲಾಪದ ವೇಳೆ ರಾಜ್ಯದಲ್ಲಿ ಬಸ್ ಸಂಚಾರದ ಬಗ್ಗೆ ಚರ್ಚೆ ನಡೀತಿತ್ತು. ಈ ವೇಳೆ ಸಾರಿಗೆ ಸಚಿವ ಶ್ರೀರಾಮುಲು ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ಮುಂದಾದ್ರು. ಇದೇ ಸಂದರ್ಭದಲ್ಲಿ ಕುಣಿಗಲ್ನ ಕಾಂಗ್ರೆಸ್ ಶಾಸಕ ರಂಗನಾಥ್ ಗಲಾಟೆ ಮಾಡುತ್ತಾ ಸದನದ ಬಾವಿಗಿಳಿದ್ರು. ಆಗ ಸಚಿವ ಗೋವಿಂದ ಕಾರಜೋಳ, ಗೆಟ್ ಲಾಸ್ಟ್ ..ಹೋಗಿ ನಿನ್ನೆ ಸೀಟ್ನಲ್ಲಿ ಕುಳಿತುಕೋ. ಸಚಿವನಾಗಿದ್ದಾಗ ನೀನು ಏನೂ ಕೆಲಸ ಮಾಡಿಲ್ಲ ಅಂತಾ ಏಕವಚನದಲ್ಲೇ ಗದರಿದ್ರು. ಈ ವೇಳೆ ರೊಚ್ಚಿಗೆದ್ದ ಸಿದ್ದರಾಮಯ್ಯ ಶಾಸಕರಿಗೆ ವಿರುದ್ಧ ಈ ರೀತಿ ಗದರೋದು ಸರಿ ಅಲ್ಲ. ಬೊಮ್ಮಾಯಿಯವರೇ ನೀವು ಕೂಡ ಒಬ್ಬ ಶಾಸಕರು. ನಿಮಗೆ ಈಗ ಬಗ್ಗೆ ಗೊತ್ತಿರಬೇಕು ಅಂದ್ರು. ಈ ವೇಳೆ ಸಿಎಂ, ನೀವು ಮೈಕ್ ಕಿತ್ತಿದ್ದನ್ನ, ಮೇಜಿನ ಮೇಲೆ ಹತ್ತಿದ್ದನ್ನ ನೋಡಿದ್ದೇವೆ ಅಂತಾ ಸಿದ್ದರಾಮಯ್ಯಗೆ ಕೌಂಟರ್ ಕೊಟ್ರು. ಈ ವೇಳೆ ಮತ್ತಷ್ಟು ಕಾಂಗ್ರೆಸಿಗರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದ್ರು. ಈ ವೇಳೆ ಗಲಾಟೆ ಮಾಡಿದವರನ್ನ, ಬಾವಿಗೆ ಇಳಿದವರನ್ನ ಅಮಾನತು ಮಾಡುವಂತೆ ಮಾಧುಸ್ವಾಮಿ ಆಗ್ರಹಿಸಿದ್ರು. ಎರಡೂ ಬಾರಿ ಕಲಾಪ ಕೂಡ ಮುಂದೂಡಿಕೆಯಾಯ್ತು. ಮಧ್ಯಾಹ್ನದ ಬಳಿಕ ಆಕ್ಷೇಪಾರ್ಹ ಪದಗಳನ್ನ ಬಳಸದಂತೆ. ಗೌರವಯುತವಾಗಿ ಮಾತನಾಡುವಂತೆ ಎರಡೂ ಪಕ್ಷಗಳು ರಾಜಿ ಸಂಧಾನ ಮಾಡಿಕೊಂಡ್ರು.