ನಾಲ್ಕನೇ ಟೆಸ್ಟ್ ಗೆ ಮಹತ್ವದ ಬದಲಾವಣೆ – ರೋಹಿತ್ ಶರ್ಮಾ ಮತ್ತೆ ಓಪನರ್!

ನಾಲ್ಕನೇ ಟೆಸ್ಟ್ ಗೆ ಮಹತ್ವದ ಬದಲಾವಣೆ – ರೋಹಿತ್ ಶರ್ಮಾ ಮತ್ತೆ ಓಪನರ್!

ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಜಿದ್ದಾಜಿದ್ದಿನಿಂದ ನಡೀತಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಒಂದೊಂದು ಪಂದ್ಯಗಳನ್ನ ಗೆದ್ದು ಸರಣಿ ಸಮಬಲ ಸಾಧಿಸಿದ್ದು, ಮೂರನೇ ಪಂದ್ಯ ಡ್ರಾ ಆಗಿದೆ. ಇದೀಗ 4ನೇ ಫೈಟ್​ಗೆ ಉಭಯ ತಂಡಗಳು ರೆಡಿಯಾಗಿದ್ದು ಆಸ್ಟ್ರೇಲಿಯಾ ಟೀಂ ಅನೌನ್ಸ್ ಮಾಡಿದೆ. ಮತ್ತೊಂದೆಡೆ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದೆ. ಇದು ಬಾಕ್ಸಿಂಗ್ ಡೇ ಮ್ಯಾಚ್ ಕೂಡ ಆಗಿರೋದ್ರಿಂದ ನೆಕ್ ಟು ನೆಕ್ ಫೈಟ್ ನಡೆಯೋದಂತೂ ಗ್ಯಾರಂಟಿ.

ಡಿಸೆಂಬರ್ 26. ಕ್ರಿಕೆಟ್ ಜಗತ್ತಿನ ಪಾಲಿಗೆ ಇದೊಂದು ಸ್ಪೆಷಲ್ ಡೇ. ಯಾಕಂದ್ರೆ ಈ ದಿನದಲ್ಲಿ ನಡೆಯೋ ಮ್ಯಾಚ್​ಗಳನ್ನ ಬಾಕ್ಸಿಂಗ್ ಡೇ ಫೈಟ್ ಅಂತಾ ಕರೆಯಲಾಗುತ್ತೆ. ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದೇ ದಿನ ನಾಲ್ಕದೇ ಟೆಸ್ಟ್ ಪಂದ್ಯ ನಡೆಯಲಿದೆ. ಎರಡೂ ತಂಡಗಳಿಗೂ ಸರಣಿಯಲ್ಲಿ ಮುನ್ನಡೆ ಸಾಧಿಸ್ಬೇಕು ಅಂದ್ರೆ ಈ ಪಂದ್ಯವನ್ನ ಗೆಲ್ಲಲೇಬೇಕು. ಮೆಲ್ಬರ್ನ್​ನಲ್ಲಿ ನಡೆಯಲಿರುವ ಪಂದ್ಯಕ್ಕೆ ಸಾಕಷ್ಟು ಬದಲಾವಣೆಗಳನ್ನೂ ಕೂಡ ಮಾಡಿಕೊಳ್ಳಲಾಗುತ್ತೆ.

ಇದನ್ನೂ ಓದಿ : ವಿಂಡೀಸ್ ಮಣಿಸಿ ಸರಣಿ ಗೆದ್ದ ಇಂಡಿಯಾ – ಸ್ಮೃತಿ ಮಂಧಾನ ವಿಶ್ವದಾಖಲೆ, ರಿಚಾ ಘೋಷ್… ವೇಗದ ಅರ್ಧಶತಕ

ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪ್ರವೇಶಿಸಬೇಕು ಅಂದ್ರೆ ಟೀಮ್ ಇಂಡಿಯಾ ಉಳಿದಿರೋ 2 ಮ್ಯಾಚ್​ಗಳನ್ನ ಗೆಲ್ಲಬೇಕು. ಪಂದ್ಯ ಗೆಲ್ಲಬೇಕು ಅಂದ್ರೆ ಬ್ಯಾಟಿಂಗ್​ ಸ್ಟ್ರಾಂಗ್ ಆಗ್ಬೇಕು. ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಜೈಸ್ವಾಲ್ ಶತಕ ಸಿಡಿಸಿ ಮಿಂಚಿದ್ರು. ಬಟ್ 2 ಮತ್ತು 3ನೇ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ರು. ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್, ರವೀಂದ್ರ ಜಡೇಜಾ ಬಿಟ್ಟರೆ ಉಳಿದ ಆಟಗಾರರು ರನ್ ಗಳಿಸೋಕೆ ತಿಣಕಾಡಿದ್ರು. ಸೋ ಇಂಥಾ ಸಿಚುಯೇಷನ್​ನಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಗೆ 4ನೇ ಟೆಸ್ಟ್​ಗೆ ನಲ್ಲಿ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ.

ಅಸಲಿಗೆ ಟೀಂ ಇಂಡಿಯಾ ಪರ ಟಾಪ್ ಆರ್ಡರ್ ಬ್ಯಾಟರ್​ಗಳೇ ಪದೇಪದೆ ಕೈಕೊಡ್ತಿದ್ದಾರೆ. ಅದ್ರಲ್ಲೂ ಶುಭ್ಮನ್ ಗಿಲ್ ಇತ್ತೀಚೆಗೆ ಒಂದೇ ಒಂದು ಪಂದ್ಯದಲ್ಲೂ ಬ್ಯಾಟ್ ಬೀಸಿ ಆಡ್ತಿಲ್ಲ. ಹೀಗಾಗಿ ಮುಂದಿನ ಟೆಸ್ಟ್ ಪಂದ್ಯಕ್ಕೆ ಗಿಲ್ ಅವರನ್ನು ಕೈಬಿಡಲು ಮ್ಯಾನೇಜ್​ಮೆಂಟ್ ತೀರ್ಮಾನ ಮಾಡಿದೆ. ಸದ್ಯ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಗಿಲ್​ರನ್ನ ಡ್ರಾಪ್ ಮಾಡಿ ಆ ಸ್ಥಾನಕ್ಕೆ ಕೆಎಲ್ ರಾಹುಲ್​ರನ್ನ ಕಣಕ್ಕಿಳಿಸೋ ಯೋಜನೆ ನಡೀತಿದೆ. ಹಾಗೇ  ಕ್ಯಾಪ್ಟನ್ ರೋಹಿತ್ ಶರ್ಮಾರನ್ನ ಮತ್ತೆ ಓಪನಿಂಗ್ ಸ್ಲಾಟ್​ಗೆ ಇಳಿಸಿದ್ರೆ ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಹೀಗೆ ಬ್ಯಾಟಿಂಗ್ ಕ್ರಮಾಂಕಗಳನ್ನ ಚೇಂಜ್ ಮಾಡೋದ್ರ ಜೊತೆಗೆ ಗಿಲ್​ಗೆ ಗೇಟ್​ಪಾಸ್ ಕೊಟ್ಟು ಪ್ಲೇಯಿಂಗ್ 11ನಲ್ಲಿ ಮತ್ತೊಬ್ಬರಿಗೆ ಚಾನ್ಸ್ ನೀಡಲಾಗುತ್ತೆ. ಗಿಲ್ ಬದಲಿಗೆ ಸರ್ಫರಾಜ್ ಖಾನ್ ಅಥವಾ ಧ್ರುವ್ ಜುರೆಲ್ ಆಡುವ 11 ರಲ್ಲಿ ಪ್ರವೇಶಿಸಬಹುದು. ಕಳೆದ ಎರಡು ಪಂದ್ಯಗಳಲ್ಲಿ ರೋಹಿತ್​ 6ನೇ ಸ್ಥಾನದಲ್ಲಿ ಕಣಕ್ಕಿಳಿದು ಕೆಟ್ಟ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ರೋಹಿತ್​ರನ್ನ ಮತ್ತೆ ಓಪನರ್ ಸ್ಲಾಟ್​ಗೆ ಕಳಿಸಲಾಗುತ್ತೆ. ಉಳಿದಂತೆ ಬ್ಯಾಟಿಂಗ್ ಆರ್ಡರ್​ನಲ್ಲಿ ಯಾವುದೇ ಬದಲಾವಣೆಗಳು ಇರೋದಿಲ್ಲ. ಬೌಲಿಂಗ್ ವಿಭಾಗದಲ್ಲಿ ಸಹ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಲಿದ್ದಾರೆ. ಹಾಗೆ ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಆಲ್​ರೌಂಡರ್​​ಗಳಾಗಿ ಕಣಕ್ಕಿಳಿಯಲಿದ್ದಾರೆ. ಸೋ ಫೈನಲ್ಲಾಗಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸರ್ಫರಾಜ್ ಖಾನ್ ಅಥವಾ ಧ್ರುವ ಜುರೆಲ್, ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆ.

Shantha Kumari