ಬಾರ್ಡರ್ ಗೆ ಆಹ್ವಾನ ಗವಾಸ್ಕರ್‌ ಗೆ ಅವಮಾನ – ಟ್ರೋಫಿ ಹೆಸರಿಗೂ ಮರ್ಯಾದೆ ಕೊಟ್ಟಿಲ್ವಾ ಆಸ್ಟ್ರೇಲಿಯಾ?
ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯನಿಗೆ ಅವಮಾನ

ಬಾರ್ಡರ್ ಗೆ ಆಹ್ವಾನ ಗವಾಸ್ಕರ್‌ ಗೆ ಅವಮಾನ – ಟ್ರೋಫಿ ಹೆಸರಿಗೂ ಮರ್ಯಾದೆ ಕೊಟ್ಟಿಲ್ವಾ ಆಸ್ಟ್ರೇಲಿಯಾ?ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯನಿಗೆ ಅವಮಾನ

ಅಲನ್ ಬಾರ್ಡರ್ ಮತ್ತು ಸುನಿಲ್‌ ಗವಾಸ್ಕರ್‌ ಹೆಸರಿನಲ್ಲಿ ಬಾರ್ಡರ್ -ಗವಾಸ್ಕರ್ ಟ್ರೋಫಿ ನೀಡಲಾಗುತ್ತದೆ. ಆದರೆ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಬಾರ್ಡರ್ ಅವರನ್ನು ಆಹ್ವಾನಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಗವಾಸ್ಕರ್ ಸ್ಥಳದಲ್ಲಿಯೇ ಇದ್ದರೂ ಆಹ್ವಾನ ನೀಡಿರಲಿಲ್ಲ. ಈ ವಿಚಾರದ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.

ಇದನ್ನೂ ಓದಿ:32 ಇನ್ನಿಂಗ್ಸ್ ಗಳಲ್ಲಿ 655 ರನ್.. 2024 ಕೊಹ್ಲಿಗೆ UN LUCKY – ಹೊಸ ವರ್ಷ.. ಹೊಸ ಅಧ್ಯಾಯನಾ?

ಆಸ್ಟ್ರೇಲಿಯ ತಂಡ 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವನ್ನು ಸೋಲಿಸಿದೆ. ಪಂದ್ಯವನ್ನು ಗೆದ್ದ ನಂತರ, ಆಸ್ಟ್ರೇಲಿಯಾದ ಮಾಜಿ ಆಟಗಾರ ಅಲನ್ ಬಾರ್ಡರ್ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ಗೆ ಟ್ರೋಫಿಯನ್ನು ಹಸ್ತಾಂತರಿಸಿದರು. ಆದರೆ ಇದೇ ವೇಳೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರಿಗೆ ಅವಮಾನವಾಗುವಂತಹ ಘಟನೆ ನಡೆದಿದೆ. ಇದನ್ನು ಸ್ವತಃ ಸುನಿಲ್ ಗವಾಸ್ಕರ್ ಅವರೇ ಹೇಳಿದ್ದು, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಅಲನ್ ಬಾರ್ಡರ್, ಆಸೀಸ್ ನಾಯಕ ಕಮ್ಮಿನ್ಸ್‌ಗೆ ಟ್ರೋಫಿ ಹಸ್ತಾಂತರಿಸುತ್ತಿದ್ದಾಗ, ಸುನಿಲ್ ಗವಾಸ್ಕರ್ ಬೌಂಡರಿ ಲೈನ್ ಬಳಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಆದರೆ ಗವಾಸ್ಕರ್ ಅವರನ್ನು ಸೌಜನ್ಯಕ್ಕಾದರೂ ವೇದಿಕೆಗೆ ಆಹ್ವಾನಿಸುವ ಕೆಲಸವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮಾಡಲಿಲ್ಲ. ಇದರಿಂದ ಬೇಸರಗೊಂಡಿರುವ ಗವಾಸ್ಕರ್ ಈ ಬಗ್ಗೆ ಮಾತನಾಡಿದ್ದು, ಇದು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಾಗಿದ್ದು, ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯವಾಗಿದೆ.  ನಾನು ಭಾರತೀಯ ಎಂಬ ಕಾರಣಕ್ಕೆ ನನಗೆ ಟ್ರೋಫಿ ನೀಡಲು ಅವಕಾಶ ನೀಡಲಿಲ್ಲ. ನನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿಯನ್ನು ಪ್ರಸ್ತುತಪಡಿಸಲು ನಾನು ಸಂತೋಷಪಡುತ್ತೇನೆ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ.

ಬಹುಮಾನ ವಿತರಣೆ ವೇಳೆ ಎರಡೂ ದೇಶಗಳ ಕ್ರಿಕೆಟ್ ದಂತಕತೆಗಳಾದ ಅಲನ್ ಬಾರ್ಡರ್ ಮತ್ತು ಸುನಿಲ್ ಗವಾಸ್ಕರ್ ಇಬ್ಬರೂ ಇರಬೇಕಾದ್ದು ಆ ಟ್ರೋಫಿಗೆ ನೀಡುವ ಗೌರವ. ಈ ಹಿಂದೆಲ್ಲಾ ಇಬ್ಬರ ಉಪಸ್ಥಿತಿಯಲ್ಲೇ ಟ್ರೋಫಿ ಪ್ರದಾನ ಮಾಡಲಾಗಿತ್ತು. ಆದರೆ, ಭಾರತದ ಕ್ರಿಕೆಟ್ ದಿಗ್ಗಜ ಗವಾಸ್ಕರ್‌ ಅವ್ರನ್ನ ಟ್ರೋಫಿ ವಿತರಣೆ ಸಮಾರಂಭಕ್ಕೆ ಆಹ್ವಾನ ಮಾಡಲಿಲ್ಲ. ಗವಾಸ್ಕರ್ ಅವರನ್ನ ಕಡೆಗಣನೆ ಮಾಡಲಾಗಿದೆ.

suddiyaana

Leave a Reply

Your email address will not be published. Required fields are marked *