ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ.. ತಡವಾಗಿ ಈ ಇ-ಮೇಲ್ ಪರಿಶೀಲಿಸಿದ ಅಧಿಕಾರಿಗಳು! – ಆಮೇಲೆ ಆಗಿದ್ದೇನು ಗೊತ್ತಾ?

ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಇ ಮೇಲ್ಗಳು ಬರುತ್ತಿರುವ ಬಗ್ಗೆ ಪದೇ ಪದೆ ದೂರುಗಳು ಕೇಳಿಬುರುತ್ತಲೇ ಇದೆ. ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ ಬೆಂಗಳೂರಿನ ರಾಜಭವನಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದರು. ಇದೀಗ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಿಡಿಗೇಡಿಗಳು ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿದ್ದು, ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಯುದ್ಧ ಪೀಡಿತ ಗಾಜಾದಲ್ಲಿ 5 ಕಿ.ಮೀ ನಡೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡಿ. 26ರಂದು ಬಾಂಬ್ ಬೆದರಿಕೆಯ ಈ ಮೇಲ್ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡಿ. 26ರ ರಾತ್ರಿ 11.59ಕ್ಕೆ xonocikonoci10@beeble.com ಹೆಸರಿನ ಈ ಮೇಲ್ ನಿಂದ ಇಮೇಲ್ ಬಂದಿದೆ. ಈ ಸಂದೇಶವನ್ನು ಡಿ. 27ರ ಮಧ್ಯಾಹ್ನ 11.20ರ ವೇಳೆಗೆ ವಿಮಾನ ನಿಲ್ದಾಣ ಪ್ರಾಧಿಕಾರದವರು ಗಮನಿಸಿದ್ದಾರೆ. ಸಂದೇಶದಲ್ಲಿ ಒಂದು ವಿಮಾನದಲ್ಲಿ ಸ್ಫೋಟಕಗಳಿವೆ. ಮಾತ್ರವಲ್ಲದೆ ನಿಲ್ದಾಣದ ಒಳಗೂ ಗುಪ್ತ ಸ್ಥಳದಲ್ಲಿ ಸ್ಫೋಟಕ ಇರಿಸ ಲಾಗಿದೆ. ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಿಸಲಿದೆ. ನಾನು ನಿಮ್ಮೆಲ್ಲರನ್ನೂ ಕೊಲ್ಲುತ್ತೇನೆ. ನಾವು ‘ಫ್ಯೂನಿಂಗ್’ ಹೆಸರಿನ ಉಗ್ರಗಾಮಿ ತಂಡದವರು ಎಂದು ಮೇಲ್ ತಿಳಿಸಲಾಗಿದೆ.
ಮೇಲ್ ಗಮನಿಸುತ್ತಿದ್ದಂತೆ ನಿಲ್ದಾಣದ ಭದ್ರತೆಯನ್ನು ಬಲಪಡಿಸಲಾಗಿದೆ. ಜತೆಗೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಿಂದ ತಪಾಸಣೆಯನ್ನೂ ನಡೆಸಲಾಗಿದೆ. ಆದರೆ ಯಾವುದೇ ಅನುಮಾ ನಾಸ್ಪದ ವಸ್ತುಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿಲ್ಲ. ಬಜಪೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ನಿಲ್ದಾಣದ ಸುತ್ತ ಭದ್ರತೆ ಬಿಗುಗೊಳಿಸಲಾಗಿದೆ. ಮಂಗಳೂರು ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳಿಗೆ ಈ ರೀತಿಯ ಈ ಮೇಲ್ ಸಂದೇಶ ರವಾನೆಯಾಗಿದೆ.