ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ – ಸಾವಿನ ಸಂಖ್ಯೆ 34ಕ್ಕೆ ಏರಿಕೆ

ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ – ಸಾವಿನ ಸಂಖ್ಯೆ 34ಕ್ಕೆ ಏರಿಕೆ

ನ್ಯೂಯಾರ್ಕ್: ಅಮೆರಿಕದಲ್ಲಿ ಬೀಸುತ್ತಿರುವ ಮಾರಣಾಂತಿಕ ಶೀತಗಾಳಿ  ‘ಬಾಂಬ್ ಸೈಕ್ಲೋನ್’ನಿಂದ ಸುಮಾರು 34 ಮಂದಿ ಮೃತಪಟ್ಟಿದ್ದಾರೆ.  ಕೆಲವು ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ.

ಹಿಮಪಾತದಿಂದ ನ್ಯೂಯಾರ್ಕ್​ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಜನ ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದಿಂದ ಅಮೆರಿಕದ ಜನರು ಕಂಗಾಲಾಗಿದ್ದಾರೆ. ಅಮೆರಿಕದಾದ್ಯಂತ ಅಪಘಾತ, ಮರಗಳು ಧರೆಗುರುಳಿ, ಚಂಡಮಾರುತದಿಂದಾಗಿ 34 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ‘ಯುದ್ದ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧ’ – ಪುಟಿನ್ 

ಈ ಪರಿಸ್ಥಿತಿ ಬಗ್ಗೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾತನಾಡಿ, ಬಫಲೋ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರವರೆಗೆ ಮುಚ್ಚಲಾಗುವುದು ಎಂದು ಹೇಳಿದ್ದಾರೆ.

6 ನ್ಯೂ ಇಂಗ್ಲೆಂಡ್ ರಾಜ್ಯಗಳಾದ್ಯಂತ 2,73,000ಕ್ಕೂ ಹೆಚ್ಚು ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಹಲವಾರು ಪೂರ್ವ ರಾಜ್ಯಗಳಾದ್ಯಂತ 2,00,000ಕ್ಕೂ ಹೆಚ್ಚು ಜನರು ಕ್ರಿಸ್​ಮಸ್ ದಿನ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು ಎಂದು ತಿಳಿಸಿದ್ದಾರೆ.

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರದವರೆಗೆ ಮುಚ್ಚಲ್ಪಟ್ಟಿದೆ. ದೇಶದ ರಸ್ತೆಗಳು ಹಾಗೂ ರಸ್ತೆ ಪಕ್ಕ ನಿಲ್ಲಿಸಿರುವ ವಾಹನಗಳು ಮಂಜಿನಲ್ಲಿ ಮುಚ್ಚಿಹೋಗಿವೆ. ವಾಷಿಂಗ್ಟನ್​ನಿಂದ ಫ್ಲೋರಿಡಾದವರೆಗೆ ಹಲವು ರಾಜ್ಯಗಳಿಗೆ ತೀವ್ರ ಚಳಿ ಚಂಡಮಾರುತ, ಹಿಮಪಾತ, ಹಾಗೂ ಚಳಿಗಾಲದ ಹವಾಮಾನಕ್ಕೆ ಸಂಬಂಧಿಸಿದ ಇತರೆ ಎಚ್ಚರಿಕೆ ನೀಡಲಾಗಿದೆ.

suddiyaana