ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ತಾರೆಯರು! – ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ನಟಿಸಲು ಯಾರಿಗೆಲ್ಲಾ ಸಿಕ್ತು ಅವಕಾಶ?

ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ತಾರೆಯರು! – ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ನಟಿಸಲು ಯಾರಿಗೆಲ್ಲಾ ಸಿಕ್ತು ಅವಕಾಶ?

ಸ್ಯಾಂಡಲ್‌ವುಡ್‌ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಈ ಸಿನಿಮಾದ ಬಗ್ಗೆ ಯಶ್‌, ಚಿತ್ರತಂಡ ಯಾವುದೇ ಮಾಹಿತಿ ನೀಡದಿದ್ದರೂ, ಸಾಕಷ್ಟು ವಿಚಾರಗಳು ರಿವೀಲ್‌ ಆಗುತ್ತಲೇ ಇರುತ್ತವೆ. ಇದೀಗ ಈ ಸಿನಿಮಾದ ಕುರಿತು ಮತ್ತೊಂದು ವಿಚಾರ ಹೊರಬಿದ್ದಿದೆ. ಟಾಕ್ಸಿಕ್‌ನಲ್ಲಿ ಬಾಲಿವುಡ್‌ನ ದಂಡೇ ಇರಲಿದೆಯಂತೆ.

ಇದನ್ನೂ ಓದಿ: ಆರೆಂಜ್ ಆರ್ಮಿಗೆ ಸೋಲುಣಿಸುತ್ತಾ ಆರ್‌ಸಿಬಿ? – ಆರ್‌ಸಿಬಿ ಫೇಲ್ಯೂರ್‌ಗೆ ಆ ಇಬ್ಬರೇ ಕಾರಣನಾ..?

ಹೌದು, ಇತ್ತೀಚೆಗೆ ಕನ್ನಡ ನಟ- ನಟಿಯರು ಬಾಲಿವುಡ್‌ನತ್ತ ಮುಖಮಾಡುತ್ತಿದ್ದಾರೆ. ಆದರೆ ಯಶ್‌ ಮಾತ್ರ ಬಾಲಿವುಡ್‌ ಮಂದಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುತ್ತಿದ್ದಾರೆ. ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್ ದಂಡೇ ಇರಲಿದೆ. ಕನ್ನಡಕ್ಕೆ ಪ್ರತಿಭಾವಂತ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಈ ಸಿನಿಮಾ ಮೂಲಕ ಯಶ್ ಕರೆಯಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಈ ಚಿತ್ರದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಇವರ ಜೊತೆಗೆ ಹಿಂದಿಯ ಫೇಮಸ್ ನಟ ನವಾಜುದ್ದೀನ್ ಸಿದ್ದಿಕ್, ಖ್ಯಾತ ನಟಿ ಕಿಯಾರಾ ಅಡ್ವಾಣಿ, ಮಲಯಾಳಂ ನಟ ಶೈನ್ ಟಾಮ್ ಚಾಕೊ ಕೂಡ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಪಟ್ಟಿ ಅಧಿಕೃತವಾಗಿ ಸಿನಿಮಾ ತಂಡ ಹೇಳಿಲ್ಲವಾದರೂ, ಆಪ್ತರ ಪ್ರಕಾರ ನಿಜ ಎಂದು ಹೇಳಲಾಗುತ್ತಿದೆ.

ಗೋವಾ, ಶ್ರೀಲಂಕಾ, ಲಂಡನ್ ಹೀಗೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬಗ್ಗೆ ಸಾಕಷ್ಟು ಹೆಸರುಗಳು ಕೇಳಿ ಬಂದವು. ಈಗಾಗಲೇ ಗೋವಾದಲ್ಲಿ ಯಶ್ ಶೂಟಿಂಗ್ ಶುರು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಶ್ ಆಪ್ತರ ಪ್ರಕಾರ ಇನ್ನೂ ಸಿನಿಮಾದ ಶೂಟಿಂಗ್ ನಡೆದಿಲ್ಲವಂತೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 15ರಿಂದ ಬೆಂಗಳೂರಿನಿಂದಲೇ ಮೊದಲ ಹಂತದ ಚಿತ್ರೀಕರಣ ಶುರುವಾಗಬೇಕಿತ್ತು. ಅದೂ ಆಗಿಲ್ಲ.

ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಶೂಟಿಂಗ್ ಗಾಗಿ ಬೃಹತ್ ಸೆಟ್ ಹಾಕಲಾಗಿದೆ. ಇನ್ನೂ ಕೆಲಸಗಳು ನಡೆಯುತ್ತಾ ಇವೆ. ಜೊತೆಗೆ ಹೆಸರಾಂತ ಕಲಾವಿದರ ಡೇಟ್ ಹೊಂದಾಣಿಕೆ ಕಾರ್ಯ ನಡೆಯುತ್ತಿದೆ. ಹಾಗಾಗಿ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಿಂದ ಚಿತ್ರೀಕರಣ ಶುರು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Shwetha M