ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಟೀಂಗೆ ಬಂಧನ ಭೀತಿ!

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಟೀಂಗೆ ಬಂಧನ ಭೀತಿ!

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಗೆ ಬಂಧನದ ಭೀತಿ ಎದುರಾಗಿದೆ. ವಂಚನೆ ಆರೋಪದಡಿ ಸೋನಾಕ್ಷಿ ವಿರುದ್ಧ ಉತ್ತರಪ್ರದೇಶದ ಮುರಾದಾಬಾದ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸೋನಾಕ್ಷಿ ಸಿನ್ಹಾ ಅವರಿಗೆ ಹಿನ್ನೆಡೆಯಾಗಿದ್ದು, ನ್ಯಾಯಾಲಯ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದೆ.

ಇದನ್ನೂ ಓದಿ: ಐಸಿಸಿ ಅಂಡರ್-19 ವಿಶ್ವಕಪ್ 2024 ರ ಫೈನಲ್ – ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತದ ಯುವಪಡೆ

2018ರಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಒಂದು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದರು. ಅದಕ್ಕಾಗಿ ಕಾರ್ಯಕ್ರಮದ ಆಯೋಜಕ ಪ್ರಮೋದ್ ಶರ್ಮಾ ಎಂಬುವವರಿಂದ ಹಣ ಪಡೆದಿದ್ದಾರೆ. ಹಣ ಪಡೆದುಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗದ ಕಾರಣ ಆಯೋಜಕರಿಗೆ ಭಾರೀ ನಷ್ಟವಾಗಿದೆ. ಸೊನಾಕ್ಷಿ ಸಿನ್ಹಾ, ಕಾರ್ಯಕ್ರಮಕ್ಕೆ ಹಾಜರಾಗಲು ಪಡೆದ ಹಣವನ್ನು ಸಹ ಹಿಂದಿರುಗಿಸಿರಲಿಲ್ಲ. ಎಂದು ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಮ್ಯಾನೇಜರ್​ ವಿರುದ್ಧ ದೂರು ದಾಖಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಸೊನಾಕ್ಷಿಯ ಮ್ಯಾನೇಜರ್​ಗಳು ಹಾಗೂ ಅವರ ತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 28ಕ್ಕೆ ನಡೆಯಲಿದೆ.

Shwetha M