ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಮದುವೆ – ಚಡ್ಡಿ, ಬನಿಯನ್ ಧರಿಸಿ ಮದುವೆಗೆ ಬಂದ ಇರಾ ಗಂಡ ನೂಪುರ್

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಮದುವೆ – ಚಡ್ಡಿ, ಬನಿಯನ್ ಧರಿಸಿ ಮದುವೆಗೆ ಬಂದ ಇರಾ ಗಂಡ ನೂಪುರ್

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗಿದೆ. ಇರಾ ಖಾನ್  ಮತ್ತು ನೂಪುರ್ ಮದುವೆೆಗೆ ಬಾಲಿವುಡ್ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಜೊತೆಗೆ ಅಂಬಾನಿ ಕುಟುಂಬ ಕೂಡಾ ಮದುವೆಯಲ್ಲಿ ಹಾಜರಾಗಿದ್ದಾರೆ. ಇನ್ನು ಮದುವೆಯಲ್ಲಿ ನಟ ಆಮೀರ್ ಖಾನ್ ಅಳಿಯ ಧರಿಸಿದ್ದ ಚಡ್ಡಿ ಬನಿಯನ್ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಅಸ್ಪಸ್ಥ- ಬಿಗ್‌ಬಾಸ್ ಮನೆಯಿಂದ ತಕ್ಷಣವೇ ಆಸ್ಪತ್ರೆಗೆ ಶಿಫ್ಟ್

ಸಾಮಾನ್ಯವಾಗಿ ಮದುವೆಯಲ್ಲಿ ಲಕ್ಷಾಂತರ ಬೆಲೆ ಬಾಳು ಸೂಟ್ ಧರಿಸೋದು ವಾಡಿಕೆ. ಆದರೆ, ಮದುವೆಯ ಸಂದರ್ಭದಲ್ಲಿ ನೂಪುರ್ ಚಡ್ಡಿ ಮತ್ತು ಬನಿಯನ್ ಧರಿಸಿದ್ದಾರೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಆಮೀರ್ ಖಾನ್ ಮಗಳು ಇರಾ ಮತ್ತು ನೂಪುರ್ ಶಿಖಾರೆ ಮದುವೆ ನಡೆದಿದೆ. ಈ ಜೋಡಿ ಮರಾಠಿ ಪದ್ಧತಿಯಂತೆ ಮದುವೆಯಾಗಿದ್ದಾರೆ.

ವಿವಾಹಕ್ಕೆ ಇರಾ ಲೆಹೆಂಗಾ ಹಾಕಿ ಅದ್ದೂರಿಯಾಗಿ ಸಜ್ಜಾಗಿದ್ದರು. ಆಮೀರ್ ಖಾನ್ ಸೇರಿದಂತೆ ಎಲ್ಲರೂ ಮಿರಿಮಿರಿ ಮಿಂಚುತ್ತಿದ್ದರು. ಆದರೆ, ಮದುವೆ ವರ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿದ್ದು ಬಹಳ ವಿಚಿತ್ರವಾಗಿತ್ತು.  ಅಷ್ಟೇ ಅಲ್ಲ, ಮದುವೆ ಮೆರವಣಿಗೆಗೆ ಕೂಡಾ ನೂಪುರ್ ಇದೇ ಚಡ್ಡಿ ಬನಿಯನ್ನಲ್ಲಿ 8 ಕಿಲೋಮೀಟರ್ ಓಡಿಕೊಂಡು ಬಂದಿದ್ದಾರೆ. ಈ ಹಿಂದೆ ಇದೇ ನೂಪುರ್ ಬೆತ್ತಲೆಯಾಗಿ ಓಡಿ ಫೋಟೋಶೂಟ್ ಮಾಡಿಸಿ ಸುದ್ದಿಯಾಗಿದ್ದರು.

ಕಳೆದ ಒಂದು ವಾರದಿಂದ ವಿವಾಹ ಪೂರ್ವ ಶಾಸ್ತ್ರಗಳು ಆರಂಭ ಆಗಿದ್ದವು. ಮೊದಲು ರಿಜಿಸ್ಟರ್ ಮ್ಯಾರೇಜ್ ಆದ ಈ ಜೋಡಿ, ಆ ಬಳಿಕ ಸಾಂಪ್ರದಾಯಿಕವಾಗಿ ವಿವಾಹ ಆದರು. ಈ ಮೂಲಕ ಪತಿ-ಪತ್ನಿಯರಾದರು. ಹಲವು ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದಾರೆ. ಮದುವೆ ವೇಳೆ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಮಗಳ ವಿವಾಹದಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಆಮಿರ್ ಖಾನ್ ಕಿಸ್ ಮಾಡಿದ್ದಾರೆ.

ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇರಾ ಖಿನ್ನತೆಗೆ ಒಳಗಾದಾಗ ನೂಪುರ್ ಅವರ ಬೆಂಬಲಕ್ಕೆ ನಿಂತಿದ್ದರು.ಮದುವೆಯ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.

Sulekha