ಬಾಲಿವುಡ್ ಬಾಯಿಜಾನ್ Birthday – ಸಲ್ಲುಗೆ ಕಿಚ್ಚ ಸುದೀಪ್ ವಿಶ್, ಸಲ್ಮಾನ್ ಖಾನ್‌ಗೆ ಬಾಬಿ ಡಿಯೋಲ್ ಕಿಸ್

ಬಾಲಿವುಡ್ ಬಾಯಿಜಾನ್ Birthday – ಸಲ್ಲುಗೆ ಕಿಚ್ಚ ಸುದೀಪ್ ವಿಶ್, ಸಲ್ಮಾನ್ ಖಾನ್‌ಗೆ ಬಾಬಿ ಡಿಯೋಲ್ ಕಿಸ್

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ 58ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 27ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ಬಾಯಿಜಾನ್‌ಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಸಲ್ಮಾನ್ ಹುಟ್ಟು ಹಬ್ಬಕ್ಕೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಆನೆಯ ಮದ ಇಳಿಸಿದ ಕಿಚ್ಚ ಸುದೀಪ್ – ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಕೊನೇ ತನಕ ಆತಂಕದಲ್ಲೇ ಇದ್ದ ವಿನಯ್..!

ಬಾಲಿವುಡ್ ನಟ ಸಲ್ಲುಮಿಯಾ ಹುಟ್ಟುಹಬ್ಬಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀಪ್ ಬರೆದುಕೊಂಡಿದ್ದು, ನಿಮ್ಮೊಂದಿಗೆ ಕಳೆದ ಕ್ಷಣಗಳು ಯಾವತ್ತಿಗೂ ಹಸಿರಾಗಿರುತ್ತವೆ. ನಿಮ್ಮಂತಹ ಅದ್ಭುತ ಮನುಷ್ಯ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಕಿಚ್ಚ ಸುದೀಪ್ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ನಿರ್ದೇಶನದ ಬಗ್ಗೆ ವಿಚಾರವೊಂದು ಹೇಳಿದ್ದರು. ಸಲ್ಮಾನ್ ಖಾನ್ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡುವುದಾಗಿ ಹೇಳಿದ್ದರು. ಸಲ್ಲುಗಾಗಿಯೇ ಕಿಚ್ಚ ಭಿನ್ನ ಕಥೆ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್‌ಗೆ ಕಥೆ ಹೇಳಿ, ಸಿನಿಮಾ ಮಾಡುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ಮತ್ತೆ ನಿರ್ದೇಶನದ ಕ್ಯಾಪ್ ಧರಿಸುವ ಸೂಚನೆ ನೀಡಿದ್ದಾರೆ. ಇನ್ನು ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಫಿಲ್ಮ್ಂ ಪ್ರೆಸೆಂಟ್ ಮಾಡಿದೆ. ಈ ಮೂಲಕ ಸುದೀಪ್ ಗೆ ಸಲ್ಮಾನ್ ಸಾಥ್ ನೀಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಸುದೀಪ್ ಈಗಾಗಲೇ ಒಟ್ಟಿಗೆ ನಟಿಸಿದ್ದಾರೆ. ತೆರೆಮರೆಯಲ್ಲಿ ಕೂಡ ಒಳ್ಳೆಯ ಬಾಂಧವ್ಯವಿದೆ. ಈ ಸ್ನೇಹಕ್ಕೆ ಸಾಕ್ಷಿಯಾಗಿ ಕಿಚ್ಚನ ಸಿನಿಮಾಗೆ ಸಲ್ಲು ಸಾಥ್ ನೀಡಿದ್ದಾರೆ.

ಸೊಸೆ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಸಲ್ಮಾನ್ ಖಾನ್

ಮುದ್ದಿನ ಸೊಸೆ ಆಯತ್ ಜೊತೆ ಸಲ್ಮಾನ್ ಖಾನ್ ಜನ್ಮದಿನ ಆಚರಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಅವರ ಸೊಸೆ ಆಯತ್ ಜೊತೆಯಲ್ಲೇ ಜನ್ಮದಿನ ಆಚರಿಸಿಕೊಂಡಿದ್ದು ಕೂಡಾ ವಿಶೇಷ. ಈ ಸಂದರ್ಭದಲ್ಲಿ ನಟ ಬಾಬಿ ಡಿಯೋಲ್, ಅರ್ಬಾಜ್ ಖಾನ್, ಅರ್ಹಾನ್ ಖಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಮನೆಯಲ್ಲಿ ಹುಟ್ಟುಹಬ್ಬದ ಸೆಲೆಬ್ರೇಷನ್ ಜೋರಾಗಿತ್ತು. ತಂಗಿ ಮಗಳ ಜೊತೆ ಸೇರಿ ಸಲ್ಲುಮಿಯಾ ಕೇಕ್ ಕಟ್ ಮಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಬಾಬಿ ಡಿಯೋಲ್ ಸಲ್ಲುಗೆ ಸಿಹಿ ಮುತ್ತು ನೀಡಿ ಶುಭಾಶಯ ಕೋರಿದರು.

Sulekha