ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಡೈವೋರ್ಸ್? -‘ನಾವು ಬೇರೆ ಆಗಿದ್ದೇವೆ’ ಎಂದು ರಾಜ್‌ಕುಂದ್ರಾ ಪೋಸ್ಟ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಡೈವೋರ್ಸ್? -‘ನಾವು ಬೇರೆ ಆಗಿದ್ದೇವೆ’ ಎಂದು ರಾಜ್‌ಕುಂದ್ರಾ ಪೋಸ್ಟ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ಕುಂದ್ರಾ ದಂಪತಿ ಬೇರೆ ಬೇರೆಯಾಗಿದ್ದಾರಾ?. ದಂಪತಿ ನಡುವೆ ಡೈವೋರ್ಸ್ ಆಗಿದೆಯಾ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮಾಡಿರುವ ಟ್ವೀಟ್. ಆದರೆ, ಈ ಬಗ್ಗೆ ಶಿಲ್ಪಾ ಶೆಟ್ಟಿ ಮೌನವಾಗಿದ್ದಾರೆ. ಇದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಶಿಕ್ಷೆಗೀಡಾದ ವಿನಯ್ ಗೌಡ – ಇನ್ನೂ ಜೋರಾಯ್ತು ಅರಚಾಟ, ಸಿಟ್ಟು, ಕಲಹ

ಈ ಮಧ್ಯೆ ರಾಜ್ ಕುಂದ್ರಾ ಮಾಡಿರೋ ಟ್ವೀಟ್ ಗಮನ ಸೆಳೆದಿದೆ. ‘ನಾವು ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ದಯವಿಟ್ಟು ನಮಗೆ ಸಮಯ ನೀಡಿ’ ಎಂದು ಕೋರಿದ್ದಾರೆ ರಾಜ್ ಕುಂದ್ರಾ.  ರಾಜ್‌ಕುಂದ್ರಾ ಮಾಡಿರುವ ಈ ಟ್ವೀಟ್ ಈಗ ಸಖತ್ ಸುದ್ದಿಯಾಗಿದೆ.

ಮೊನ್ನೆಯಷ್ಟೇ ಯುಟಿ 69 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪತ್ನಿ ಶಿಲ್ಪಾಶೆಟ್ಟಿ ಜೊತೆ ರಾಜ್‌ಕುಂದ್ರಾ ಭಾಗಿಯಾಗಿದ್ದರು. ಅಲ್ಲದೇ ಗಣೇಶೋತ್ಸವ ವೇಳೆ ಮನೆಯಲ್ಲಿ ಪತ್ನಿ ಶಿಲ್ಪಾ ಶೆಟ್ಟಿ ಜೊತೆಯೇ ಡಾನ್ಸ್ ಮಾಡಿ ಸಂಭ್ರಮಿಸಿದ್ದರು. ಅದ್ದೂರಿಯಾಗಿ ಗಣಪತಿ ಹಬ್ಬವನ್ನು ಆಚರಿಸಲಾಗಿತ್ತು. ಆದರೆ, ಇದೀಗ ದಿಢೀರ್ ಅಂತ ಇಂಥದ್ದೊಂದು ಪೋಸ್ಟ್ ಮಾಡಿದ್ದಾರೆ. ಇನ್ನು ಅಶ್ಲೀಲ ಸಿನಿಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದ ಮೇಲೆ ಎರಡು ವರ್ಷಗಳಿಗೂ ಹೆಚ್ಚು ಕಾಲ ನಟಿ ಶಿಲ್ಪಾ ಶೆಟ್ಟಿ ಪತಿ, ನಿರ್ಮಾಪಕ ರಾಜ್ ಕುಂದ್ರ ಫೇಸ್ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರು. ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದ ನಂತರ ಅವರು ಸಾರ್ವಜನಿಕವಾಗಿ ಯಾವತ್ತೂ ಮುಖ ತೋರಿಸಿರಲಿಲ್ಲ. ಸದಾ ಫೇಸ್ ಮಾಸ್ಕ್ ಹಾಕಿಕೊಂಡೇ ಮನೆಯಾಚೆ ಕಾಲಿಡುತ್ತಿದ್ದರು. ನಿನ್ನೆಯಷ್ಟೇ ಅವರು ತಮ್ಮ ಮುಖವನ್ನು ಕ್ಯಾಮೆರಾಗೆ ತೋರಿಸಿದ್ದಾರೆ.

ರಾಜ್ ಕುಂದ್ರಾ ಅವರು 2021ರಲ್ಲಿ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಅವರು ಜೈಲು ಕೂಡ ಸೇರಿದ್ದರು. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅವರು ಜೈಲಿಗೆ ಹೋದಾಗಲೇ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ಬೇರೆ ಬೇರೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಜೊತೆ ಚೆನ್ನಾಗಿಯೇ ಇದ್ದರು.

ಈ ಮಧ್ಯೆ ರಾಜ್ ಕುಂದ್ರಾ ಮಾಡಿರೋ ಟ್ವೀಟ್ ಗಮನ ಸೆಳೆದಿದೆ. ‘ನಾವು ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ದಯವಿಟ್ಟು ನಮಗೆ ಸಮಯ ನೀಡಿ’ ಎಂದು ಕೋರಿದ್ದಾರೆ ರಾಜ್ ಕುಂದ್ರಾ. ‘ಬೇರೆ ಆಗಿದ್ದೀರಿ ಎಂದರೆ ಏನು ಅರ್ಥ? ವಿಚ್ಛೇದನವೇ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಆಲ್ಕೋಹಾಲ್ ಕುಡಿದು ಮಾಡಿರುವ ಟ್ವೀಟ್ ಎಂದು ಹೇಳಿದ್ದಾರೆ.

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ 2009ರಲ್ಲಿ ಮದುವೆ ಆದರು. ವಿಯಾನ್ ಹಾಗೂ ಸಮಿಶಾ ಹೆಸರಿನ ಮಕ್ಕಳು ಇವರಿಗೆ ಇದ್ದಾರೆ. ರಾಜ್ ಕುಂದ್ರಾ ಬಯೋಪಿಕ್ ‘ಯುಟಿ 69’ ರಿಲೀಸ್ ಆಗುತ್ತಿದೆ. ಇದರ ಪ್ರಮೋಷನ್ ಗಿಮಿಕ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸಮಾರಂಭದಲ್ಲಿ ಮೊದಲ ಬಾರಿಗೆ ಮುಖ ತೋರಿಸಿದ್ದಾರೆ. ಕಾರ್ಯಕ್ರಮಕ್ಕೆ ಫೇಸ್ ಮಾಸ್ಕ್ ಹಾಕಿಕೊಂಡು ಬಂದಿದ್ದರೂ, ಆನಂತರ ಅದನ್ನು ಕಳಚಿಟ್ಟರು. ತಮ್ಮ ನೋವಿನ ದಿನಗಳನ್ನು ಭಾವುಕರಾಗಿಯೇ ಹಂಚಿಕೊಂಡರು.

Sulekha