ಬಾಲಿವುಡ್ ನಟಿ ರೇಖಾ ಲೇಡಿ ಸೆಕ್ರಟರಿ ಜೊತೆ ಸಂಬಂಧ ಹೊಂದಿದ್ದರು! – ಬಯೋಗ್ರಫಿಯಲ್ಲಿದೆ ಇನ್ನೂ ಕೆಲ ರೋಚಕ ರಹಸ್ಯ..!
ಬಾಲಿವುಡ್‌ನ ಖ್ಯಾತ ನಟಿ ರೇಖಾ ಅವರ ಬಯೋಗ್ರಫಿ ಸಿದ್ದವಾಗಿದೆ. ‘ರೇಖಾ- ದಿ ಅನ್ಟೋಲ್ಡ್ ಸ್ಟೋರಿ’ ಹೆಸರಿನಲ್ಲಿ ಸಿದ್ಧವಾಗಿರುವ ಈ ಪುಸ್ತಕದಲ್ಲಿ ನಟಿಯ ಬದುಕಿನ ರಹಸ್ಯವೊಂದು ಬಯಲಾಗಿದೆ. ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ರೇಖಾ, ಯಾರ ಜೊತೆ ಸಂಬಂಧ ಹೊಂದಿದ್ದರು?. ಇದೇ ಕಾರಣಕ್ಕೆ ರೇಖಾ ಪತಿ ಆತ್ಮಹತ್ಯೆ ಮಾಡಿಕೊಂಡರಾ..? ಹೀಗೆ ನಟಿ ರೇಖಾ ಬಗ್ಗೆ ಗೊತ್ತಿರದ ಹತ್ತು ಹಲವು ಸಂಗತಿಗಳು ಈಗ ಬಯಲಾಗಿದೆ.
ಇದನ್ನೂ ಓದಿ: ಸಿನಿಮಾ ಆಗಲಿದೆ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ದುರಂತ ಕಥೆ – ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ
ನಟಿ ರೇಖಾ ಬಾಲಿವುಡ್‌ನ ಬಾದ್ ಶಾ ನಟ ಅಮಿತಾಬ್ ಬಚ್ಚನ್ ಜೊತೆ ಸಂಬಂಧ ಹೊಂದಿದ್ದರು ಎಂಬ ವಿಚಾರ ಅನೇಕ ಬಾರಿ ಚರ್ಚೆಯ ವಿಚಾರವಾಗಿತ್ತು. ಆದರೆ ಈಗ ರೇಖಾ ಅಭಿಮಾನಿಗಳಿಗೆ ಶಾಕ್ ನೀಡುವ ವಿಚಾರವೊಂದು ಬಯಲಾಗಿದೆ. ಲೇಖಕ ಯಾಸರ್ ಉಸ್ಮಾನ್ ಬರೆದ ಬಾಲಿವುಡ್ ನಟಿ ರೇಖಾ ಅವರ ಬಯೋಗ್ರಫಿಯಲ್ಲಿ ತನ್ನ ಸೆಕ್ರೆಟರಿಯಾಗಿದ್ದ ಫರ್ಹಜಾನ್ ಜೊತೆಗೆ ರೇಖಾ ಸಂಬಂಧ ಹೊಂದಿದ್ದರು ಎಂಬ ವಿಚಾರ ಬಯಲಾಗಿದೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗಿದೆ. ರೇಖಾ ಕದ್ದುಮುಚ್ಚಿ ತನ್ನ ಲೇಡಿ ಸೆಕ್ರೆಟರಿ ಫರ್ಜಾನಾ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಎಂದು ಬಯೋಗ್ರಫಿಯಲ್ಲಿ ಬರೆಯಲಾಗಿದೆ. ಫರ್ಜಾನಾ ಅವರು ರೇಖಾ ಅವರ ಗೆಳತಿ, ಸಪೋರ್ಟರ್ ಆಗಿದ್ದರು. ಅವರಿಲ್ಲದೆ ರೇಖಾ ಬದುಕುತ್ತಿರಲಿಲ್ಲ. ಫರ್ಜಾನಾಳನ್ನು ರೇಖಾ ತುಂಬಾನೇ ನಂಬಿದ್ದರು. ಇವರಿಬ್ಬರೂ ಲವರ್ ಎಂದು ಹೇಳಲಾಗುತ್ತಿದೆ. ರೇಖಾ ಬೆಡ್ ರೂಮ್‌ಗೆ ಫರ್ಜಾನಾಗೆ ಮಾತ್ರ ಎಂಟ್ರಿ ಇತ್ತು’ ಎಂದು ಬಯೋಗ್ರಫಿಯಲ್ಲಿ ಬರೆದುಕೊಳ್ಳಲಾಗಿದೆ. ‘ರೇಖಾಳ ಜೀವನದಲ್ಲಿ ಮತ್ತು ಮನೆಯ ಆಗು ಹೋಗುಗಳನ್ನು ಫರ್ಜಾನಾ ನಿಯಂತ್ರಿಸುತ್ತಿದ್ದರು ಮತ್ತು ಮೇಲ್ವಿಚಾರಣೆ ಮಾಡುತ್ತಿದ್ದರು. ರೇಖಾ ಅವರ ಪ್ರತಿ ಫೋನ್ ಕರೆಯನ್ನು ಪರಿಶೀಲಿಸುತ್ತಿದ್ದರು’ ಎಂದು ಪುಸ್ತಕದಲ್ಲಿ ಬರೆಯಲಾಗಿದೆ ಎನ್ನಲಾಗಿದೆ.
ರೇಖಾ ಅವರು ಮುಕೇಶ್ ಅಗರ್ವಾಲ್ ಅವರನ್ನು 1990ರಲ್ಲಿ ಮದುವೆ ಆದರು. ಮುಕೇಶ್ ಅವರು ಉದ್ಯಮಿ ಆಗಿದ್ದರು. ಆದರೆ, ಮದುವೆ ಆಗಿ ಏಳೇ ತಿಂಗಳಿಗೆ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ರೇಖಾ ಲಂಡನ್‌ನಲ್ಲಿ ಇದ್ದರು. ಮುಕೇಶ್ ಸಾವಿಗೆ ರೇಖಾ ಕಾರಣ ಎಂದು ಎಲ್ಲರೂ ದೂರಿದರು. ಆದರೆ, ಅವರ ಆತ್ಮಹತ್ಯೆ ಪತ್ರದಲ್ಲಿ ಯಾರ ಹೆಸರೂ ಇರಲಿಲ್ಲ. ರೇಖಾ ಅವರು ಫರ್ಜಾನ್ ಅವರನ್ನು ಸಹೋದರಿ ಎಂದು ಭಾವಿಸಿದ್ದರು. ಆದರೆ, ಅವರ ಬಯೋಗ್ರಫಿಯಲ್ಲಿ ಇವರ ಸಂಬಂಧದ ಬಗ್ಗೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಇನ್ನು ಲೇಖಕ ಯಾಸರ್ ಉಸ್ಮಾನ್ ಬರೆದ ಬಯೋಗ್ರಫಿಗೆ ‘ರೇಖಾ: ದಿ ಅನ್ಟೋಲ್ಡ್’ ಸ್ಟೋರಿ ಎನ್ನುವ ಶೀರ್ಷಿಕೆ ಇಡಲಾಗಿದೆ.