ಬಿಜೆಪಿ ಆರೋಪಕ್ಕೆ ಬಾಲಿವುಡ್ ನಟಿ ಪೂಜಾ ತಿರುಗೇಟು
ಬಿಜೆಪಿಗೆ ತಲೆನೋವಾಯಿತಾ ಭಾರತ್ ಜೋಡೋ ಯಾತ್ರೆ?

ಹೈದರಾಬಾದ್: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಬಾಲಿವುಡ್ ನಟಿ ಪೂಜಾ ಭಟ್ ಭಾಗವಹಿಸಿರುವುದಕ್ಕೆ ಬಿಜೆಪಿ ನಾಯಕರು ಟೀಕಾ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ಪೂಜಾ ಖಡಕ್ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ಗುಜರಾತ್ ಚುನಾವಣೆ – ಸ್ಟಾರ್ ಪ್ರಚಾರಕ ಪಟ್ಟಿಯಿಂದ ಶಶಿ ತರೂರ್ ಔಟ್
ಹೈದರಬಾದ್ ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ಪೂಜಾ ಭಟ್ ಸೇರಿ ಹಲವು ಸಿನಿ ತಾರೆಯರು ಸುಮಾರು 15 ಕಿಮೀ ವರೆಗೆ ಹೆಜ್ಜೆ ಹಾಕಿದ್ದರು. ಕಲಾವಿದರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ನಿಂದ ಹಣ ನೀಡಲಾಗುತ್ತಿದೆ ಎಂದು ಬಿಜೆಪಿ ನಾಯಕ ನಿತೇಶ್ ರಾಣೆ ಆರೋಪಿಸಿದ್ದರು.
ಅವರ ಹೇಳಿಕೆಗೆ ಪೂಜಾ ಭಟ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಎಲ್ಲ ವಿಷಯಗಳನ್ನೂ ಯೋಚಿಸಲು ಅರ್ಹರಾಗಿದ್ದಾರೆ. ತಮ್ಮ ಅಭಿಪ್ರಾಯಗಳಿಗೆ ಪೂರ್ಣ ಗೌರವ ಹೊಂದಲೂ ಅರ್ಹರಿದ್ದಾರೆ. ಹಾಗಾಗಿ ನಾವು ಸಹ ಇತರರೊಂದಿಗೆ ಬದುಕುವ ಮುನ್ನ ತನ್ನೊಂದಿಗೆ ಬದುಕುವುದನ್ನು ಕಲಿಯಬೇಕು. ಯಾರೊಂದಿಗೂ ರಾಜಿಮಾಡಿಕೊಳ್ಳದ ವಿಷಯವೆಂದರೆ ಅದು ಆತ್ಮಸಾಕ್ಷಿ, ಮೊದಲು ನಾವು ನಮ್ಮ ಆತ್ಮಸಾಕ್ಷಿಗೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.
“They’re certainly entitled to think that, and they’re entitled to full respect for their opinions… but before I can live with other folks I’ve got to live with myself. The one thing that doesn’t abide by majority rule is a person’s conscience.”
Harper Lee pic.twitter.com/F1hbBfGf87— Pooja Bhatt (@PoojaB1972) November 22, 2022
ಹೈದರಾಬಾದ್ನಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡ ಪೂಜಾ ಭಟ್, ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ, ರಿಯಾ ಸೇನ್, ರಶ್ಮಿ ದೇಸಾಯಿ, ಆಕಾಂಕ್ಷಾ ಪುರಿ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಹೆಜ್ಜೆ ಹಾಕಿದ್ದಾರೆ.
ಬಿಜೆಪಿ ನಾಯಕ ನಿತೇಶ್ ರಾಣೆ ಅವರು ವಾಟ್ಸಾಪ್ ನಿಂದ ಬಂದ ಸಂದೇಶವನ್ನು ಹಂಚಿಕೊಡಿದ್ದು, ಕಾಂಗ್ರೆಸ್ನಿಂದ ಹಣ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
1/2 Proof? Clearly shows how desperately bjp is trying to discredit the yatra. Such bogus WhatsApp images are being shown as proofs. No name, no numbers. It is bjp which masters the art of arm- twisting celebrities to portray artificial support for them not congress. https://t.co/5TnBTaNsaL
— Sachin Sawant सचिन सावंत (@sachin_inc) November 22, 2022