ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಗುಡ್‌ನ್ಯೂಸ್ – ತಾಯಿಯಾಗುತ್ತಿರುವ ಬಗ್ಗೆ ಖುಷಿ ಹಂಚಿಕೊಂಡ ಸುಂದರಿ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಗುಡ್‌ನ್ಯೂಸ್ – ತಾಯಿಯಾಗುತ್ತಿರುವ ಬಗ್ಗೆ ಖುಷಿ ಹಂಚಿಕೊಂಡ ಸುಂದರಿ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ತಾನು ಪ್ರೆಗ್ನೆಂಟ್ ಎಂಬ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಭೂಮಿಕಾಗೆ ಗೌತಮ್ ದಾಂಪತ್ಯದಲ್ಲಿ ಬಿರುಕು – ‘ಅಮೃತಧಾರೆ’ ಧಾರಾವಾಹಿಯಲ್ಲಿ ಇದೆಂಥಾ ಟ್ವಿಸ್ಟ್?

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ತಾಯಿ ಆಗುತ್ತಿದ್ದಾರೆ. ಈ ಖುಷಿ ಸುದ್ದಿಯನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಪರಿಣೀತಿ ಮತ್ತು ಅವರ ಪತಿ ರಾಘವ್ ಚಡ್ಡಾ ತಾವು ಮೊದಲ ಮಗುವಿಗೆ ಪೋಷಕರಾಗುತ್ತಿದ್ದೇವೆ ಎಂಬ ಸಿಹಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಂತೋಷದ ಸುದ್ದಿ ಕೇಳಿ ಬಾಲಿವುಡ್ ಸ್ಟಾರ್ಸ್ ಹಾಗೂ ಫ್ಯಾನ್ಸ್ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ಶುಭ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಸುಂದರ ಫೋಟೋ ಹಂಚಿಕೊಳ್ಳುವ ಮೂಲಕ ನಾವು ಪಾಲಕರಾಗ್ತಿದ್ದೇವೆ ಎಂಬುದನ್ನು ಇಬ್ಬರು ತಿಳಿಸಿದ್ದಾರೆ. ಆ ಫೋಟೋದಲ್ಲಿ ಮಗುವಿನ ಪುಟ್ಟ ಪಾದವಿದೆ. ಅದ್ರ ಕೆಳಗೆ 1+1=3 ಎಂದು ಬರೆಯಲಾಗಿದೆ. ಫೋಟೋ ಹಂಚಿಕೊಂಡ ಪರಿಣೀತಿ ಹಾಗೂ ರಾಘವ್ ಚಡ್ಡಾ, ನಮ್ಮ ಪುಟ್ಟ ಪ್ರಪಂಚ ಬರ್ತಿದೆ ಎಂದು ಶೀರ್ಷಿಕೆ ಹಾಕಿದ್ದಾರೆ. ಅಲ್ದೆ ಇಬ್ಬರು ಕೈ ಕೈ ಹಿಡಿದು ರಸ್ತೆಯಲ್ಲಿ ಹೋಗ್ತಿರುವ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. ಸೋನಮ್ ಕಪೂರ್, ನೇಹಾ ಧೂಪಿಯಾ, ರಾಕುಲ್ ಪ್ರೀತ್, ಭೂಮಿ ಪೆಡ್ನೇಕರ್ ಅವರಂತಹ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಕಪಿಲ್ ಶರ್ಮಾ ಶೋನಲ್ಲಿ ರಾಘವ್ ಚಡ್ಡಾ ಈ ಬಗ್ಗೆ ಸುಳಿವು ನೀಡಿದ್ದರು. ಪರಿಣೀತಿ ಗರ್ಭಿಣಿ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿ ಬರ್ತಾ ಇತ್ತು. ಕಪಿಲ್ ಶರ್ಮಾ ಶೋನಲ್ಲಿ, ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುವುದಾಗಿ ರಾಘವ್ ಭರವಸೆ ನೀಡಿದ್ದರು. ಈಗ ಪರಿಣೀತಿ ಗರ್ಭಿಣಿ ಎನ್ನುವ ಸುದ್ದಿಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

ಬಾಲಿವುಡ್ ಚೆಲುವೆ ಪರಿಣೀತಿ ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು 2023 ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ ಸುಮಾರು ಎರಡು ವರ್ಷಗಳ ನಂತ್ರ, ದಂಪತಿ ತಮ್ಮ ಜೀವನದ ಅತ್ಯಂತ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Sulekha