ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಕತ್ರಿನಾ ಕೈಫ್ – ಸಂತಾನ ಭಾಗ್ಯಕ್ಕಾಗಿ ಸರ್ಪ ಸಂಸ್ಕಾರ ಪೂಜೆ?

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಕತ್ರಿನಾ ಕೈಫ್ – ಸಂತಾನ ಭಾಗ್ಯಕ್ಕಾಗಿ ಸರ್ಪ ಸಂಸ್ಕಾರ ಪೂಜೆ?

ಬಾಲಿವುಡ್‌ ಬ್ಯೂಟಿ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದಾರೆ. ಸಂತಾನ ಭಾಗ್ಯಕ್ಕಾಗಿ ಬಾಲಿವುಡ್‌ ಜೋಡಿ ವಿಶೇಷ ಪೂಜೆ ಮಾಡಿಸಿದ್ದಾರೆ.

ಇದನ್ನೂ ಓದಿ: ಡ್ಯಾನ್ಸ್‌ ಬಾರ್ ನಲ್ಲಿ ಮೀಟಿಂಗ್‌.. ಡೇಟಿಂಗ್!‌ -ಸ್ಟೀವ್ ಸ್ಮಿತ್ ಲೇಡಿ ಲಕ್‌ಗೆ ನ್ಯೂಯಾರ್ಕ್‌ನಲ್ಲಿ ಪ್ರಪೋಸ್‌

ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಪ್ರೀತಿಸಿ ಮದುವೆಯಾಗಿ 3 ವರ್ಷಗಳೇ ಕಳೆದಿದೆ. ಇತ್ತೀಚೆಗೆ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಅನ್ನೋ ಗಾಸಿಪ್‌ ಹರಿದಾಡಿತ್ತು.. ಆದ್ರೆ ಇದು ಸುಳ್ಳಾಗಿದೆ. ಇದೀಗ ಕತ್ರಿನಾ ಕೈಫ್ ಅವರು ಸಂತಾನ ಭಾಗ್ಯಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ನಿನ್ನೆ ರಾತ್ರಿಯೇ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿ, ತಲೆಗೆ ದುಪ್ಪಟ್ಟ ಹಾಕಿದ್ದ ಕತ್ರಿನಾ ಕೈಫ್ ದೇವರ ದರ್ಶನ ಪಡೆದಿದ್ದಾರೆ.

ಇಂದು ಕತ್ರಿನಾ ಕೈಫ್‌ ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸರ್ಪಸಂಸ್ಕಾರ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. VIP ಊಟದ ಹಾಲ್​ನಲ್ಲಿ ಕತ್ರಿನಾ ಕೈಫ್ ಕುಟುಂಬ ದೇವರ ಪ್ರಸಾದವನ್ನು ಸ್ವೀಕರಿಸಿದೆ. ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ಪರಿಹಾರದಿಂದ ಸಂತಾನ ಭಾಗ್ಯ ಸಿಗುವ ನಂಬಿಕೆ ಇದೆ. ಮಕ್ಕಳ ಭಾಗ್ಯಕ್ಕಾಗಿ ಪ್ರಾರ್ಥಿಸುವ 9 ದೋಷ ಪರಿಹಾರದಲ್ಲಿ ನಾಗದೋಷ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಕತ್ರಿನಾ ಕೈಫ್‌ ಅವರು ಖುದ್ದು ಕುಕ್ಕೆ ಶ್ರೀ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Shwetha M

Leave a Reply

Your email address will not be published. Required fields are marked *