ಕೊರಗಜ್ಜನ ಕರುಣೆ ಕೋರಿದ ಸುನಿಲ್ ಶೆಟ್ಟಿ – ಮಗ ಆಹಾನ್ ಶೆಟ್ಟಿ ಸಿನಿಮಾ ಯಶಸ್ಸಿಗಾಗಿ ಪ್ರಾರ್ಥನೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಸುನೀಲ್ ಶೆಟ್ಟಿ ಅವರು ಮಂಗಳೂರು ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಗ ಅಹಾನ್ ಶೆಟ್ಟಿ ನಟನೆಯ ಬಾರ್ಡರ್-2 ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: ಶನಿವಾರ ಬಿಗ್ಬಾಸ್ ಪ್ರೀ ಫಿನಾಲೆ ಮಾತ್ರ – ಭಾನುವಾರವೇ ನಡೆಯಲಿದೆ ಬಿಗ್ಬಾಸ್ ಫಿನಾಲೆ
ಮುಲ್ಕಿಯಲ್ಲಿ ಹುಟ್ಟಿ ಬೆಳೆದು ಮುಂಬೈನಲ್ಲಿ ವೃತ್ತಿ ಬದುಕಲ್ಲಿ ಯಶಸ್ಸು ಕಂಡವರು ಸುನೀಲ್ ಶೆಟ್ಟಿ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಮೊದಲಿನಿಂದಲೂ ಕೊರಗಜ್ಜನ ಭಕ್ತರು. ಇದೀಗ ಇವರ ಮಗ ಕೂಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಕರಾವಳಿಯ ಕಾರಣಿಕ ಕ್ಷೇತ್ರ, ಮಂಗಳೂರು ಹೊರವಲಯದ ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಸ್ಥಳಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಭೇಟಿ ನೀಡಿದ್ದಾರೆ.
90ರ ದಶಕದಲ್ಲಿ ತೆರೆಕಂಡ ಅತ್ಯದ್ಭುತ ಚಿತ್ರ ಸುನೀಲ್ ಶೆಟ್ಟಿಯವರ ಬಾರ್ಡರ್. ಈಗ ಅವರ ಮಗ ಬಾರ್ಡರ್-2 ಹೆಸರಲ್ಲಿ ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರ ಯಶಸ್ವಿಯಾಗಲಿ ಎಂದು ಸುನೀಲ್ ಶೆಟ್ಟಿ ಕೊರಗಜ್ಜನ ಬಳಿ ಪ್ರಾರ್ಥಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ಯಾರು ಬಂದರೂ ಕೊರಗಜ್ಜನ ಕ್ಷೇತ್ರಕ್ಕೆ ಬಂದೇ ಬರ್ತಾರೆ. ಯಾರೇ ಬಂದರೂ ಕೊರಗಜ್ಜ ಅವರ ಬಯಕೆಗಳನ್ನು ಈಡೇರಿಸುತ್ತಾರೆ. ನನ್ನ ಮಗ, ಮಗಳು, ಅಳಿಯ ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ನನಗೂ ಇಲ್ಲಿ ಬರಲು ಬಹಳ ಆಸೆ ಇತ್ತು, ಅದು ಇಂದು ನೆರವೇರಿದೆ. ಪುತ್ರ ಅಹಾನ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಬಾರ್ಡರ್-2 ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಯಶಸ್ಸಿಗಾಗಿ ಆಶೀರ್ವಾದ ಬೇಡಲು ಇಲ್ಲಿಗೆ ಬಂದಿದ್ದೇನೆ ಎಂದರು.

ನೋಡಿರಿ

