ಬರ್ತ್‌ಡೇ ಖುಷಿಯಲ್ಲಿ ಬೆತ್ತಲಾದ ಬಾಲಿವುಡ್ ನಟ -ವಿದ್ಯುತ್ ಜಾಮ್ವಾಲ್ ಅವತಾರ ನೋಡಿ ಅಭಿಮಾನಿಗಳು ಶಾಕ್

ಬರ್ತ್‌ಡೇ ಖುಷಿಯಲ್ಲಿ ಬೆತ್ತಲಾದ ಬಾಲಿವುಡ್ ನಟ -ವಿದ್ಯುತ್ ಜಾಮ್ವಾಲ್ ಅವತಾರ ನೋಡಿ ಅಭಿಮಾನಿಗಳು ಶಾಕ್

ಬಾಲಿವುಡ್ ನಟ ವಿದ್ಯುತ್ ಜಾಮ್ವಾಲ್ ಈಗ ಹಾಟ್ ಟಾಪಿಕ್ ಆಗಿದ್ದಾರೆ. ತನ್ನ 43ನೇ ಬರ್ತ್‌ಡೇ ಖುಷಿಯಲ್ಲಿ ವಿದ್ಯುತ್ ಜಾಮ್ವಾಲ್ ಹುಟ್ಟುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಬೆತ್ತಲಾಗಿ ಫೋಟೋಗೆ ಮೈಯೊಡ್ಡಿದ್ದಾರೆ. ಇವರ ಬೆತ್ತಲೆ ಅವತಾರ ನೋಡಿ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

 ಇದನ್ನೂ ಓದಿ: ಅನಿಮಲ್ ಸಿನಿಮಾದ ಆ ದೃಶ್ಯ ನೋಡಿ ಹೆತ್ತವರಿಗೆ ಆಘಾತ – ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯ ಬೇಕಿತ್ತಾ ಎಂದು ನಟಿ ತೃಪ್ತಿಗೆ ಹೆತ್ತವರ ಪ್ರಶ್ನೆ

ಬಾಲಿವುಡ್‌ನ ಖ್ಯಾತ ನಟ ವಿದ್ಯುತ್ ಜಾಮ್ವಾಲ್ 43 ವರ್ಷದ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗೆ ವಿದ್ಯುತ್ ಜಾಮ್ವಾಲ್ ಫುಲ್ ಕರೆಂಟ್ ಹೊಡೆಯುವ ಹಾಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಹುಟ್ಟಿದ ದಿನವೇ ಮೈಮೇಲೆ ಚೂರು ಬಟ್ಟೆ ಹಾಕದೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್ ನಟನ ಬೆತ್ತಲೆ ಫೋಟೋ ನೋಡಿ ಅಭಿಮಾನಿಗಳು ನಿಜವಾಗಲೂ ಶಾಕ್ ಆಗಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಹೆಸರು ಗಳಿಸಿರುವ ವಿದ್ಯುತ್ ಜಾಮ್ವಾಲ್ ಬರ್ತ್‌ಡೇ ಪ್ರಯುಕ್ತ ಬೆತ್ತಲೆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಇವರ ಫೋಟೋ ನೋಡಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಮೆಂಟ್ ಮಾಡಿದ್ದಾರೆ. ವಿದ್ಯುತ್ ಜಾಮ್ವಾಲ್ ಅವರ ಫೋಟೋ ನೋಡಿ ಸೆಲ್ಯೂಟ್ ಎಂದಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡು ಅನಿಸಿಕೆ ತಿಳಿಸಿದ್ದಾರೆ. ‘ವಿದ್ಯುತ್ ಜಾಮ್ವಾಲ್ ಅವರೇ.. ನೀವು ಸರಿಯಾದ ಸಮಯದಲ್ಲಿ ನಿಮ್ಮೊಳಗಿನ ಮೃಗವನ್ನು (ಅನಿಮಲ್) ಹೊರಗೆ ತಂದಿದ್ದೀರಿ. ನೀವು ನಿಜವಾಗಿಯೂ ಗ್ರೀಕ್ ಗಾಡ್ ರೀತಿ ಕಾಣುತ್ತಿದ್ದೀರಿ. ನಿಮಗೆ ಮಿಲಿಯನ್ ಸೆಲ್ಯೂಟ್’ ಎಂದು ರಾಮ್ ಗೋಪಾಲ್ ವರ್ಮಾ ಪೋಸ್ಟ್ ಮಾಡಿದ್ದಾರೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಕಾರಣದಿಂದಲೇ ತಮ್ಮ ಪೋಸ್ಟ್‌ನಲ್ಲಿ ರಾಮ್ ಗೋಪಾಲ್ ಅವರು ‘ಅನಿಮಲ್’ ಎಂಬ ಪದ ಬಳಸಿದ್ದಾರೆ.

ವಿದ್ಯುತ್ ಜಾಮ್ವಾಲ್ ಅವರಿಗೆ ಈಗ 43 ವರ್ಷ ವಯಸ್ಸು. 43ನೇ ಜನ್ಮದಿನವನ್ನು ಅವರು ಹಿಮಾಲಯದಲ್ಲಿ ಆಚರಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿ ಅವರು ಅಲ್ಲಿನ ನದಿಯಲ್ಲಿ ಮುಳುಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ವಿದ್ಯುತ್ ಜಾಮ್ವಾಲ್ ಹಂಚಿಕೊಂಡಿರುವ ಈ ಫೋಟೋಗಳಿಗೆ 13 ಸಾವಿರಕ್ಕೂ ಅಧಿಕ ಕಮೆಂಟ್ಗಳು ಬಂದಿವೆ. 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

Sulekha