ಬಾಲಿವುಡ್ ನಟ ಬಾಬ್ಬಿ ಡಿಯೋಲ್ ಫುಲ್ ಬ್ಯುಸಿ – ಅನಿಮಲ್ ಸಿನಿಮಾದಿಂದಾಗಿ ಹೆಚ್ಚಿದ ಬೇಡಿಕೆ

ಬಾಲಿವುಡ್ ನಟ ಬಾಬ್ಬಿ ಡಿಯೋಲ್ ಫುಲ್ ಬ್ಯುಸಿ – ಅನಿಮಲ್ ಸಿನಿಮಾದಿಂದಾಗಿ ಹೆಚ್ಚಿದ ಬೇಡಿಕೆ

ಬಾಲಿವುಡ್ ನಟ ಬಾಬಿ ಡಿಯೋಲ್‌ ಒಂದ್ ಟೈಮ್‌ನಲ್ಲಿ ಹೀರೋ ಆಗಿ ಮಿಂಚುತ್ತಿದ್ದರು. ನಂತರ ಕೆಲ ಕಾಲ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಸಿನಿಮಾ ಆಫರ್ ಸಿಗದೆ ಮರೆಯಾಗಿದ್ದ ಬಾಬ್ಬಿ ಡಿಯೋಲ್ ಅನಿಮಲ್ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಖಡಕ್ ವಿಲನ್ ಆಗಿ ಅಬ್ಬರಿಸಿದ ಬಾಬ್ಬಿಗೆ ಈಗ ಬೇಡಿಕೆ ಜಾಸ್ತಿ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಗಿಲ್ ಗೆ ಹೊಸ ಗರ್ಲ್ ಫ್ರೆಂಡ್?  – ಸಾರಾ ಬಿಟ್ಟು ಯಾರಿವಳು?

ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಖಡಕ್ ವಿಲನ್ ಆಗಿ ನಟಿಸಿದ್ದರು. ರಣ್‌ಬೀರ್ ಮತ್ತು ಬಾಬಿ ಜುಗಲ್‌ಬಂದಿ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈಗ ಹಿಂದಿ ಮಾತ್ರವಲ್ಲ ಬೇರೆ ಬೇರೆ ಭಾಷೆಗಳಿಂದ ನಟನಿಗೆ ನಟಿಸಲು ಕರೆ ಬರುತ್ತಿದೆ. ಸೂರ್ಯ ನಟನೆಯ ‘ಕಂಗುವ’ ಸಿನಿಮಾದಲ್ಲಿ ಬಾಬಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆಶ್ರಮ್ ಸೀಸನ್ 4, ಬಾಲಯ್ಯ ನಟನೆಯ 109ನೇ ಚಿತ್ರದಲ್ಲಿ ಬಾಬಿ ಅಬ್ಬರಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಕೂಡ ಅಧಿಕೃತ ಮಾಹಿತಿ ನೀಡಿದೆ. ಶಾರುಖ್ ಖಾನ್ ಪುತ್ರ ಆರ್ಯನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಬಾಬಿ ಡಿಯೋಲ್ ನಟಿಸಲಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಸಿನಿಮಾದ ಭಾಗವಾಗಿದ್ದಾರೆ. ಬಹುಕೋಟಿ ವೆಚ್ಚದ ‘ರಾಮಾಯಣ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀರೋಗಳಿಗಿಂತ ಬಾಬಿ ಡಿಯೋಲ್ ಕಾಲ್‌ಶೀಟ್ ಸಿಗುವುದು ಈಗ ಕಷ್ಟವಾಗಿದೆ.

Sulekha

Leave a Reply

Your email address will not be published. Required fields are marked *