ಹೊಸ ಕರೆನ್ಸಿ ನೋಟು ಹೊತ್ತೊಯ್ಯುತ್ತಿದ್ದ ವಿಮಾನ ಪತನ.. 15 ಮಂದಿ ಬಲಿ! – ನೋಟುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದ ಜನ!

ಹೊಸ ಕರೆನ್ಸಿ ನೋಟು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವೊಂದು ಪತನಗೊಂಡು 15 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಬೊಲಿವಿಯಾದ ಲಾ ಪಾಜ್ ಬಳಿ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಉಸಿರಾಡುವುದು ಕಷ್ಟ.. ಕಷ್ಟ! – ಬೆಂಗಳೂರು, ಬೆಳಗಾವಿಯ ವಾಯುಗುಣಮಟ್ಟ ಕಳಪೆ!
ಬೊಲಿವಿಯಾ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಸರಕು ವಿಮಾನವು ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ಪಕ್ಕದ ಪ್ರಮುಖ ಹೆದ್ದಾರಿಗೆ ಅಪ್ಪಳಿಸಿದೆ. ವಿಮಾನ ರಸ್ತೆಗೆ ಬಿದ್ದ ರಭಸಕ್ಕೆ ಅಲ್ಲಿ ಸಂಚರಿಸುತ್ತಿದ್ದ 12ಕ್ಕೂ ಹೆಚ್ಚು ವಾಹನಗಳು ನಜ್ಜುಗುಜ್ಜಾಗಿವೆ. ಈ ಅವಘಡದಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹರ್ಕ್ಯುಲಸ್ ಸಿ-130 ಸರಕು ವಿಮಾನವು ಹೊಸದಾಗಿ ಮುದ್ರಿಸಲಾದ ಬೊಲಿವಿಯನ್ ಕರೆನ್ಸಿಯನ್ನು ಸಾಗಿಸುತ್ತಿತ್ತು. ತಾಂತ್ರಿಕ ದೋಷದಿಂದ ರನ್‌ವೇಯಿಂದ ಹೊರಕ್ಕೆ ಜಾರಿ ಪಕ್ಕದ ಹೆದ್ದಾರಿಗೆ ಅಪ್ಪಳಿಸಿದೆ ಎಂದು ರಕ್ಷಣಾ ಸಚಿವ ಮಾರ್ಸೆಲೊ ಸಲಿನಾಸ್ ಖಚಿತಪಡಿಸಿದ್ದಾರೆ.
ವಿಮಾನವು ಸೆಂಟ್ರಲ್ ಬ್ಯಾಂಕಿನಿಂದ ನೋಟುಗಳನ್ನು ಸಾಗಿಸುತ್ತಿರುವಾಗ ಅಪಘಾತದ ಸ್ಥಳದಲ್ಲಿ ಚದುರಿದ ನೋಟುಗಳನ್ನು ಸಂಗ್ರಹಿಸಲು ಜನರು ಬರುತ್ತಿರುವುದನ್ನು ವಿಡಿಯೋವೊಂದು ತೋರಿಸಿದೆ. ಆ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಅಲ್ಲಿಂದ ಹೊರ ಕಳುಸಿಹಲು ಪ್ರಯತ್ನಿಸಿದ್ದಾರೆ.
ಇನ್ನು ಬೊಲಿವಿಯಾ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಡೇವಿಡ್ ಎಸ್ಪಿನೋಜಾ ಹೊಸ ನೋಟುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ಸಾಗಿಸಲಾಗುತ್ತಿದ್ದ ನೋಟುಗಳು ಇನ್ನೂ ಅಧಿಕೃತವಾಗಿ ಚಲಾವಣೆಗೆ ಬಂದಿಲ್ಲ. ಈ ನೋಟುಗಳಿಗೆ ಇನ್ನೂ ಸರಣಿ ಸಂಖ್ಯೆಗಳನ್ನು ನಿಗದಿಪಡಿಸಿಲ್ಲ. ಆದ್ದರಿಂದ, ಈ ಬಿಲ್‌ಗಳಿಗೆ ಯಾವುದೇ ಕಾನೂನುಬದ್ಧ ಟೆಂಡರ್ ಸ್ಥಾನಮಾನವಿಲ್ಲ ಎಂದು ತಿಳಿಸಿದ್ದಾರೆ.

ನೋಡಿರಿ

