ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ರೀಲ್ಸ್ ಟೀಚರ್ ಶವ – ಶಿಕ್ಷಕಿಯ ಬರ್ಬರ ಹತ್ಯೆಗೆ ಕಾರಣವೇನು?

ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ರೀಲ್ಸ್ ಟೀಚರ್ ಶವ – ಶಿಕ್ಷಕಿಯ ಬರ್ಬರ ಹತ್ಯೆಗೆ ಕಾರಣವೇನು?

ಸೋಮವಾರ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಜನರಿಗೆ ಆಘಾತ ಕಾದಿತ್ತು. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಯೊಬ್ಬರು ಬರ್ಬರವಾಗಿ ಕೊಲೆಯಾಗಿ ಹೋಗಿದ್ದರು. ಈ ಶಿಕ್ಷಕಿಯನ್ನು ರೀಲ್ಸ್ ಟೀಚರ್ ಎಂದು ಕೆಲವರು ಕರೆಯುತ್ತಿದ್ದರಂತೆ. ಯಾಕೆಂದರೆ, ಇವರು ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದರು. ಆಗಾಗ್ಗೆ ರೀಲ್ಸ್ ಮಾಡುತ್ತಿದ್ದರು.

ಇದನ್ನೂ ಓದಿ: ಚಾಲಕನಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ದಂಡ – ಮೋಟಾರು ವಾಹನ ಕಾಯ್ದೆಯಲ್ಲೇನಿದೆ..?

ಜನವರಿ 20. ಅಂದು ಶಾಲೆಗೆ ಹೋಗಿದ್ದ ಶಿಕ್ಷಕಿ ಮರಳಿ ಮನೆಗೆ ಬರಲಿಲ್ಲ. ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರದಂದು ಶಾಲೆಗೆ ಹೋಗಿದ್ದ ದೀಪಿಕಾ ಸಂಜೆಯಾದರೂ ಮನೆನಗೆ ಬಾರದೇ ಹೋದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮತ್ತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯ ಮೃತದೇಹ ಪತ್ತೆಯಾಗಿದೆ. ದೀಪಿಕಾ ಕೊಲೆಯಾಗಿರಬಹುದಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ತಾಲ್ಲೂಲು ಆಸ್ಪತ್ರೆಗೆ ಕಳಿಸಲಾಗಿದೆ.

28-ವರ್ಷ ವಯಸ್ಸಿನ ದೀಪಿಕಾ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿ. ಇವರಿಗೆ ಅವರಿಗೆ 8-ವರ್ಷ ವಯಸ್ಸಿನ ಮಗ ಇದ್ದಾನೆ. ಶಿಕ್ಷಕಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕ್ರಿಯಾಶೀಲರಾಗಿದ್ದರು ಎಂಬುದು ತಿಳಿದುಬಂದಿದೆ.

Sulekha