ರಾಷ್ಟ್ರ ರಾಜಧಾನಿಯನ್ನ ಬೆಚ್ಚಿ ಬೀಳಿಸಿದ ಯೋಧನ ಪುತ್ರಿ ಸಾ*ವು- ಕೊ*ಲೆನಾ? ಆತ್ಮ*ಹತ್ಯೆನಾ?
ದೆಹಲಿ ಸಿಎಂಗೂ ತಲೆನೋವು ತಂದಿದ್ದೇಕೆ?

ರಾಷ್ಟ್ರ ರಾಜಧಾನಿಯನ್ನ ಬೆಚ್ಚಿ ಬೀಳಿಸಿದ ಯೋಧನ ಪುತ್ರಿ ಸಾ*ವು- ಕೊ*ಲೆನಾ? ಆತ್ಮ*ಹತ್ಯೆನಾ?ದೆಹಲಿ ಸಿಎಂಗೂ ತಲೆನೋವು ತಂದಿದ್ದೇಕೆ?

ದೆಹಲಿ ವಿವಿಯಿಂದ ನಾಪತ್ತೆಯಾಗಿದ್ದ 19 ವರ್ಷದ ವಿದ್ಯಾರ್ಥಿನಿ ಸ್ನೇಹ ದೇಬನಾಥ್ ಶವ ದೆಹಲಿ ಫ್ಲೈಒವರ್ ಕೆಳಗೆ ಸಿಕ್ಕಿದೆ.  ತ್ರಿಪುರ ಮೂಲದ ಸ್ನೇಹ ದೇಬನಾಥ್ ಜುಲೈ 7ರಿಂದ ಕಾಣೆಯಾಗಿದ್ದಳು. ಆಕೆ ನಾಪತ್ತೆಯಾದ ನಂತರ ಆಕೆಯ ಕೋಣೆಯಲ್ಲಿ ಆಕೆಯೇ ಬರೆದಿದ್ದಾಳೆ ಎನ್ನಲಾದ ಪತ್ರವೊಂದು ಸಿಕ್ಕಿದೆ.

ಸ್ನೇಹ ದೇಬನಾಥ್ ದಕ್ಷಿಣ ತ್ರಿಪುರ ಜಿಲ್ಲೆಯ ಸಬ್ರೂಮ್ ಮೂಲದವಳಾಗಿದ್ದರಿಂದ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾ ಈ ಬಗ್ಗೆ ಆದಷ್ಟು ಬೇಗ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದರು. ಜುಲೈ 7 ರಂದು ಸ್ನೇಹ ಕೊನೆಯ ಬಾರಿಗೆ ತನ್ನ ಕುಟುಂಬದವರೊಂದಿಗೆ ಮಾತನಾಡಿದ್ದರು ಈ ವೇಳೆ ಆಕೆ. ತಾನು ಸ್ನೇಹಿತೆ ಪಿಟೂನಿಯ ಜೊತೆ ಸರಾಯ್ ರೋಹಿಲ್ಲ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಳು. ಬೆಳಗ್ಗೆ 5:56 ಕ್ಕೆ ಸ್ನೇಹ ಕೊನೆಯ ಬಾರಿಗೆ ಕರೆ ಮಾಡಿದ್ದಳು, ನಂತರ ಬೆಳಗ್ಗೆ 8:45 ರ ಸುಮಾರಿಗೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು  ಆದರೆ ಸ್ನೇಹಿತೆ ಪಿಟೂನಿಯ ಆ ದಿನ ಸ್ನೇಹಳನ್ನು ನೋಡಿಲ್ಲ ಎಂದು ಹೇಳಿದ್ದಳು.

ಇತ್ತ ನಾಪತ್ತೆಯಾದ ಸ್ನೇಹಾಳನ್ನು ದೆಹಲಿಯ ಸಿಗ್ನೇಚರ್ ಬ್ರಿಡ್ಜ್ ಬಳಿ ಇಳಿಸಿದ್ದಾಗಿ ಆಕೆಗೆ ಕ್ಯಾಬ್ ಸರ್ವೀಸ್ ನೀಡಿದ್ದ ಚಾಲಕ ದೃಢಪಡಿಸಿದ್ದ.  ನಂತ್ರ ಗ್ನೇಚರ್ ಬ್ರಿಡ್ಜ್ ನಿಂದ ಸ್ನೇಹ ಎಲ್ಲಿಗೆ ಹೋದಳು ಎಂದು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಜುಲೈ 9 ರಂದು ದೆಹಲಿ ಪೊಲೀಸ್ ಅಪರಾಧ ವಿಭಾಗ, ಎನ್‌ಡಿಆರ್‌ಎಫ್ ಸಹಾಯದಿಂದ ಸಿಗ್ನೇಚರ್ ಬ್ರಿಡ್ಜ್ ಪ್ರದೇಶದಲ್ಲಿ ಮತ್ತು ಏಳು ಕಿಲೋಮೀಟರ್   ಶೋಧ ನಡೆಸಿದರೂ ಯಾವುದೇ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಆಕೆಯ ಶವ ಯಮುನಾ ನದಿಯಲ್ಲಿ ಪತ್ತೆಯಾಗಿದೆ.

ಸೈನಿಕರೊಬ್ಬರ ಪುತ್ರಿಯಾಗಿದ್ದ ಸ್ನೇಹ ದೇಬನಾಥ್ ದೆಹಲಿಯ ಯುನಿವರ್ಸಿಟಿಗೆ ಸೇರಿದ ಆತ್ಮರಾಮ್ ಸನಾತನ ಧರ್ಮ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಓದುತ್ತಿದ್ದಳು. ಆಕೆ ಕಾಣೆಯಾದಾಗಿನಿಂದಲೂ ಆಕೆಯ ತಂದೆ ಪ್ರೀತೀಶ್ ದೇಬನಾಥ್ ದೆಹಲಿ ಪೊಲೀಸರಿಗೆ ಮಗಳನ್ನು ಹುಡುಕಿ ಕೊಡುವಂತೆ ನಿರಂತರವಾಗಿ ಒತ್ತಡ ಹೇರಿದ್ದರು. ಈಗ ಮಗಳು ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರನ್ನ ದುಖಃಕ್ಕೆ ದೂಡಿದೆ.  ಈ ಸಾವಿನ ಹಿಂದೆ ಹಲವು ಅನುಮಾನಗಳು ಮನೆ ಮಾಡಿದೆ.

Kishor KV