ವಿಶ್ವದ ಹಿರಿಯ ನಾಯಿಯ ಗಿನ್ನೆಸ್ ರೆಕಾರ್ಡ್ – ಅಬ್ಬಬ್ಬಾ.. ಈ ಶ್ವಾನದ ವಯಸ್ಸೆಷ್ಟು ಗೊತ್ತಾ?

ವಿಶ್ವದ ಹಿರಿಯ ನಾಯಿಯ ಗಿನ್ನೆಸ್ ರೆಕಾರ್ಡ್ – ಅಬ್ಬಬ್ಬಾ.. ಈ ಶ್ವಾನದ ವಯಸ್ಸೆಷ್ಟು ಗೊತ್ತಾ?

ನಾಯಿಗಳು ಹೆಚ್ಚೆಂದರೆ 10 ರಿಂದ 12 ವರ್ಷಗಳ ಕಾಲ ಬದುಕುತ್ತೆ. ಆದರೆ ಇಲ್ಲೊಂದು ನಾಯಿ ಅತೀ ಹೆಚ್ಚು ಕಾಲ ಬದುಕಿದ ಹಿರಿಯ ನಾಯಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಇದು ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ಗಿನ್ನೆಸ್ ದಾಖಲೆ ಬರೆದಿದೆ.

ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್ ತಳಿಯ ನಾಯಿಗಳು ಹೆಚ್ಚೆಂದರೆ 10 ರಿಂದ 12 ವರ್ಷಗಳ ಕಾಲ ಬದುಕುತ್ತವಂತೆ. ಆದರೆ ಇದೇ ತಳಿಯ ಬಾಬಿ ಎಂಬ ನಾಯಿ 30 ವರ್ಷ ಜೀವಿತಾವಧಿಯನ್ನು  ಪೂರೈಸಿದೆಯಂತೆ. ಹಾಗಾಗಿ ಇದು ವಿಶ್ವದ ಅತ್ಯಂತ ವಯಸ್ಕ ನಾಯಿ ಎಂಬ ಕಾರಣಕ್ಕೆ ಗಿನ್ನೆಸ್ ರೆಕಾರ್ಡ್ಸ್ ಪಟ್ಟಿಗೆ ಸೇರಿದೆ.

ಇದನ್ನೂ ಓದಿ: ಡ್ಯಾನ್ಸ್ ನಲ್ಲೇ ಗಿನ್ನೆಸ್ ದಾಖಲೆ ಬರೆದ 14 ಶ್ವಾನಗಳು! – ನೃತ್ಯ ಹೇಗಿದೆ ನೋಡಿ…

ಬಾಬಿ ಪೋರ್ಚುಗಲ್ ನ ಕಾಂಕ್ವೊರೋಸ್ ನಲ್ಲಿ ಜನಿಸಿದೆ. ಬಾಬಿಯನ್ನು ಸಾಕಲು ಮಾಲೀಕನಿಗೆ ಕಷ್ಟವಾಗಿತ್ತು. ಬಳಿಕ ಅದನ್ನು ಲಿಯೋನಲ್ ಎಂಬುವವರು ತಮ್ಮ ಮನೆಗೆ ಕರೆದುಕೊಂಡು ಬಂದು ಸಾಕುತ್ತಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಪ್ರಕಾರ 2023ರ ಫೆ. 1ಕ್ಕೆ ಬಾಬಿ 30 ವರ್ಷ 266 ದಿನಗಳ ಜೀವಿತಾವಧಿಯನ್ನು ಪೂರ್ಣಗೊಳಿಸಿದೆ. ಸದ್ಯ ಇದು ಪೋರ್ಚುಗಲ್‌ನಲ್ಲಿರುವ ಕೋಸ್ಟ್ ಕುಟುಂಬದಲ್ಲಿದೆ.

ಈ ಹಿಂದೆ ಆಸ್ಟ್ರೇಲಿಯನ್ ಕ್ಯಾಟಲ್ ಡಾಗ್ ಬ್ಲ್ಯೂ (1910-1939) 29 ವರ್ಷ 5 ತಿಂಗಳ ಕಾಲ ಬದುಕಿ ದಾಖಲೆ ನಿರ್ಮಿಸಿತ್ತು. ಇದೀಗ ಕ್ಯಾಟಲ್ ಡಾಗ್ ಬ್ಲ್ಯೂ ನ ದಾಖಲೆಯನ್ನು ಬಾಬಿ ಮುರಿದು ವಿಶ್ವದ ಹಿರಿಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

suddiyaana