ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ಸಾವು
ಲಿಬಿಯಾದ ಕರಾವಳಿಯಲ್ಲಿ ಭೀಕರ ದೋಣಿ ಅಪಘಾತ ಸಂಭವಿಸಿದೆ. ಸಮುದ್ರದಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಈ ಬಗ್ಗೆ ಮಾಹಿತಿ ನೀಡಿದ್ದು, ಲಿಬಿಯಾದ ವಾಯುವ್ಯ ಕರಾವಳಿಯಲ್ಲಿರುವ ಜುವಾರಾದಿಂದ ಹೊರಟ ವಲಸಿಗರ ದೋಣಿ ಅಲೆಗಳ ಹೊಡೆತಕ್ಕೆ ಸಿಲುಕಿ ಮಳುಗಡೆಯಾಗಿದೆ. ಈ ಅವಘಡದಲ್ಲಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ? – ಆಸ್ಪತ್ರೆಗೆ ದಾಖಲು!
ನೈಜೀರಿಯಾ, ಗ್ಯಾಂಬಿಯಾ ಮತ್ತು ಇತರ ಆಫ್ರಿಕನ್ ದೇಶಗಳಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ – ಸುಮಾರು 86 ವಲಸಿಗರು ಹಡಗಿನಲ್ಲಿದ್ದರು ಎಂದು ಹೇಳಲಾಗಿದೆ. 25 ಜನರನ್ನು ರಕ್ಷಿಸಲಾಗಿದೆ. ಬದುಕುಳಿದವರೆಲ್ಲ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಲಿಬಿಯಾ ಮತ್ತು ಟುನೀಶಿಯಾ ಇಟಲಿಯ ಮೂಲಕ ಯುರೋಪ್ ತಲುಪುವ ಭರವಸೆಯಲ್ಲಿ ಅಪಾಯಕಾರಿ ಸಮುದ್ರ ಪ್ರಯಾಣವನ್ನು ಬೆಳೆಸಿ ಪ್ರಾಣವನ್ನು ಅಪಾಯಕ್ಕೆ ತಂದೊಡ್ಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.