ಕೇಪ್‌ ವರ್ಡೆ ದ್ವೀಪದಲ್ಲಿ ಮಗುಚಿದ ದೋಣಿ – 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಸಾಧ್ಯತೆ

ಕೇಪ್‌ ವರ್ಡೆ ದ್ವೀಪದಲ್ಲಿ ಮಗುಚಿದ ದೋಣಿ – 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಸಾಧ್ಯತೆ

ಆಫ್ರಿಕಾ: ಅಟ್ಲಾಂಟಿಕ್‌ ಮಹಾಸಾಗರದ ಕೇಪ್‌ ವರ್ಡೆ ದ್ವೀಪದಲ್ಲಿ ಸೆನೆಗಲ್‌ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿದೆ. ಈ ಅವಘಡದಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸೆನೆಗಲ್‌ ನಿಂದ ಜುಲೈ 10 ರಂದು 101 ಪ್ರಯಾಣಿಕರನ್ನು ಹೊತ್ತೊಯ್ದು ಹೊರಟಿತ್ತು. ಮಂಗಳವಾರ (ಆ. 17) ರಂದು ಕೇಪ್‌ ವರ್ಡೆ ದ್ವೀಪದಲ್ಲಿ ಮಗುಚಿದೆ. ಇಲ್ಲಿಯವರೆಗೆ 38 ಜನರನ್ನು ರಕ್ಷಿಸಲಾಗಿದೆ. ರಕ್ಷಿತ ವಲಸಿಗರನ್ನು ಸೆನೆಗಲ್‌ಗೆ ಕರತರಲಾಗುವುದು’ ಎಂದು ಸನಗಲ್‌ನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರ ನರ್ತನಕ್ಕೆ 71 ಬಲಿ – 7.5 ಸಾವಿರ ಕೋಟಿ ರೂ. ನಷ್ಟ!

‘ಅಟ್ಲಾಂಟಿಕ್ ಸಮುದ್ರದ ಈ ಮಾರ್ಗವು ವಿಶ್ವದಲ್ಲಿಯೇ ಅತಿ ಅಪಾಯಕಾರಿಯಾದ ಮಾರ್ಗವಾಗಿದೆ. ಆಫ್ರಿಕನ್ ವಲಸಿಗರು ಕ್ಯಾನರಿ ದ್ವೀಪಗಳ ಮೂಲಕ ಸ್ಪೇನ್‌ಗೆ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಕಳ್ಳಸಾಗಣೆದಾರರು ಹೆಚ್ಚಾಗಿ ಈ ಮಾರ್ಗವನ್ನು ಬಳಸುತ್ತಿದ್ದು, ವಲಸೆ ಕಾರ್ಮಿಕರಿಗೆ ಸುರಕ್ಷಿತ ಮಾರ್ಗವೊಂದು ಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಐಓಎಮ್ (ಇಂಟರ್‌ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್) ವಕ್ತಾರ ಸಫಾ ಮಸೆಹ್ಲಿ ತಿಳಿಸಿದರು.

‘2022ರಲ್ಲಿ ಕ್ಯಾನರಿ ದ್ವೀಪ ಮಾರ್ಗದಲ್ಲಿ ಸುಮಾರು 559 ವಲಸಿಗರು ಸಾವನ್ನಪ್ಪಿದ್ದಾರೆ. ಈ ವರ್ಷದ ಮೊದಲಾರ್ಧದಲ್ಲಿ ಸುಮಾರು 126 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಕಾಣೆಯಾಗಿದ್ದಾರೆ. 15 ದೋಣಿಗಳು (ಹಡಗು) ಮುಳುಗಿರುವುದು ದಾಖಲಾಗಿದೆ’ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಿಂದ ಸ್ಟೇಟ್‌ಗೆ ಮೂರು ದೋಣಿಗಳಲ್ಲಿ ತೆರಳುತ್ತಿದ್ದ ಸುಮಾರು 300 ಮಂಡಿ ವಲಸಿಗರು ನಾಪತ್ತೆಯಾಗಿದ್ದರು.

suddiyaana