3 ವರ್ಷದ ಮಗುವಿನ ಮೇಲೆ ಹರಿದ ಬಿಎಂಟಿಸಿ ಬಸ್ – ದೊಡ್ಡಮ್ಮನ ಕಣ್ಣೆದುರೇ ನಡೆದು ಹೋಯ್ತು ದುರಂತ ಘಟನೆ

3 ವರ್ಷದ ಮಗುವಿನ ಮೇಲೆ ಹರಿದ ಬಿಎಂಟಿಸಿ ಬಸ್ – ದೊಡ್ಡಮ್ಮನ ಕಣ್ಣೆದುರೇ ನಡೆದು ಹೋಯ್ತು ದುರಂತ ಘಟನೆ

ವಾರದ ಹಿಂದಷ್ಟೇ ಬಿಎಂಟಿಸಿ ಬಸ್‌ಗೆ ಬಲಿಯಾಗಿದ್ದ. ಈ ಘಟನೆ ಮಾಸುವ ಮುನ್ನವೇ ಬಿಎಂಟಿಸಿ ಬಸ್ ಮತ್ತೊಂದು ಬಲಿ ಪಡೆದಿದೆ. ಈ ಬಾರಿ ಕಿಲ್ಲರ್ ಬಿಎಂಟಿಸಿ ಬಸ್‌ಗೆ ಬಲಿಯಾಗಿದ್ದು ಮೂರು ವರ್ಷದ ಕಂದ. ಮೂರು ವರ್ಷದ ಮಗುವಿನ ಮೇಲೆ ಬಿಎಂಟಿಸಿ ಬಸ್ ಹರಿದು, ಮಗು ಸ್ಥಳದಲ್ಲೇ ಉಸಿರುಚೆಲ್ಲಿದೆ.

ಇದನ್ನೂ ಓದಿ: ಫ್ರಿಡ್ಜ್ ಬಳಕದಾರರೇ ಈ ತಪ್ಪುಗಳನ್ನ ಮಾಡಬೇಡಿ – ಕಂಪ್ರೆಸರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಸಾವು!

ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. ಮೂರು ವರ್ಷದ ಕಂದ ಅಯಾನ್ ಮೃತಪಟ್ಟ ದುರ್ದೈವಿ. ಭಾನುವಾರ ಸಂಜೆ ಮಗು ದೊಡ್ಡಮ್ಮನ ಜೊತೆ ಬೈಕ್‌ನಲ್ಲಿ ಹೋಗುತ್ತಿರುವಾಗ ದುರಂತ ಸಂಭವಿಸಿದೆ. ಹಿಂಬಂದಿಯಿಂದ ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಗು ಕೆಳಗಡೆ ಬಿದ್ದಿದೆ. ಮಗು ಕೆಳಗಡೆ ಬೀಳುತ್ತಿದ್ದಂತೆ ಬಿಎಂಟಿಸ್ ಬಸ್ಸಿನ ಚಕ್ರ ಮಗುವಿನ ಮೇಲೆ ಹರಿದಿದೆ. ಮಗು ಸ್ಥಳದಲ್ಲೇ ಮೃತ ಪಟ್ಟಿದೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಬಿಎಂಟಿಸಿ ಬಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಗುವಿನ ದೊಡ್ಡಮ್ಮ ರುಸ್ಮಾ ಈ ಭೀಕರ ದುರಂತದ ಬಗ್ಗೆ ಮಾತನಾಡಿದ್ದಾರೆ. ಮಗು ದೊಡ್ಡಮ್ಮ ದೊಡ್ಡಮ್ಮ ಅಂತಾ ನನ್ನನ್ನೇ ಹಚ್ಚಿಕೊಂಡಿತ್ತು. ಅದಕ್ಕೆ ನನ್ನ ತಂಗಿ ತನ್ನ ಮಗು ಅಯಾನ್‌ನನ್ನು ನನ್ನ ಬಳಿ ಬಿಟ್ಟು ಹೋಗಿದ್ದಳು. ನಿನ್ನೆ ತಂಗಿಗೆ ಹುಷಾರಿಲ್ಲ ಎಂದು ಮಗುವನ್ನ ಕರೆದುಕೊಂಡು ಹೋಗುತ್ತಿದ್ದೆ. ಮಗು ಸ್ಲಿಪ್ ಆಗಿ ಕೆಳಗೆ ಬಿದ್ದು ಅಳ್ತಿತ್ತು. ಆಗ ಬಸ್ ನವರು ನೋಡಿ ಸ್ಟಾಪ್ ಮಾಡಲಿಲ್ಲ. ನಿಲ್ಲಿಸಿ ನಿಲ್ಲಿಸಿ ಅಂದರು ಕೂಡ ಬಸ್ ನವರು ಸ್ಟಾಪ್ ಮಾಡಲಿಲ್ಲ. ಮೂವ್ ಮಾಡಿಬಿಟ್ರು. ನನ್ನ ಮಗು ಹೋಯ್ತು. ಬಸ್ ನವರು ನಿಲ್ಲಿಸಿದ್ರೆ ಮಗು ಜೀವ ಉಳಿಯುತ್ತಿತ್ತು ಎಂದು ಕಣ್ಣೀರಿಟ್ಟರು.

Sulekha