ಬಿಎಂಟಿಸಿ ಬಸ್ ಬಾಡಿಗೆಗೆ ಲಭ್ಯ! – ಯಾವ ಬಸ್‌ಗೆ ಎಷ್ಟು ದರ ಗೊತ್ತಾ?

ಬಿಎಂಟಿಸಿ ಬಸ್ ಬಾಡಿಗೆಗೆ ಲಭ್ಯ! – ಯಾವ ಬಸ್‌ಗೆ ಎಷ್ಟು ದರ ಗೊತ್ತಾ?

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಗುಡ್‌ನ್ಯೂಸ್‌ ಒಂದಿದೆ. ಇನ್ನುಮುಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್​ಗಳು ಕೆಎಸ್‌ಆರ್‌ಟಿಸಿ ಬಸ್‌ಗಳಂತೆ ಇನ್ನು ಮುಂದೆ ಶಾಲಾ ಪ್ರವಾಸ, ಪ್ರವಾಸ ಹಾಗೂ ಮದುವೆ ಸಮಾರಂಭ ಸೇರಿದಂತೆ ಇತ್ಯಾದಿಗಳ ಬಾಡಿಗೆಗೂ ದೊರೆಯಲಿದೆ.

ಹೌದು, ಇಷ್ಟುದಿನ ಕೆಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಪ್ರವಾಸ, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿತ್ತು, ಇನ್ನುಮುಂದೆ ಬಿಎಂಟಿಸಿ ಬಸ್‍ಗಳನ್ನು ಬಾಡಿಗೆಗೆ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಸಾಂದರ್ಭಿಕ ಒಪ್ಪಂದದ ಆಧಾರದ ಮೇರೆಗೆ ವಿವಿಧ ಮಾದರಿಗಳ ಬಸ್ಸುಗಳನ್ನು ಪರಿಚಯಿಸಿ ಉತ್ತಮ ದರಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಾಡಿಗೆಗೆ ನೀಡಲು ನಿರ್ಧರಿಸಲಾಗಿದೆ. ಬಿಎಂಟಿಸಿಯ ವಿವಿಧ ಮಾದರಿಯ ಬಸ್‍ಗಳ ದರಗಳ ಪಟ್ಟಿ ಈ ಕೆಳಗಿದೆ.

ಇದನ್ನೂ ಓದಿ : ಇದು ವಾಷಿಂಗ್ ಮೆಷಿನ್ ಅಲ್ಲ.. ಕೋಳಿ ಗೂಡು..! – ಡೋರ್‌ ಓಪನ್‌ ಮಾಡಿದ್ರೆ ಬರುತ್ತೆ ಕೋಳಿಗಳು!

ಸಾಮಾನ್ಯ ಬಸ್, 40 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 50 ರೂ.ನಂತೆ 7,500 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀ, ಪ್ರತಿ ಕಿ.ಮೀ ದರ 48 ರೂ.ನಂತೆ 9,600 ರೂ. ನಿಗದಿಪಡಿಸಲಾಗಿದೆ.

24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀ, ಪ್ರತಿ ಕಿ.ಮೀ ದರ 44 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ, ಪ್ರತಿ ಕಿ.ಮೀಗೆ ದರ 44 ರೂ.ನಂತೆ 13,200 ರೂ. ಗೊತ್ತುಪಡಿಸಲಾಗಿದೆ.

ಮಿನಿ ಬಸ್, 31 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ ಪ್ರತಿ ಕಿ.ಮೀಗೆ 47 ರೂ.ನಂತೆ 7,050 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ (ಕನಿಷ್ಠ 200 ಕಿ.ಮೀಗೆ) ಪ್ರತಿ ಕಿ.ಮೀಗೆ 45 ರೂ.ನಂತೆ 9,000 ರೂ. ನಿಗದಿಪಡಿಸಲಾಗಿದೆ.

24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ, ಪ್ರತಿ ಕಿ.ಮೀ ದರ 42 ರೂಪಾಯಿಯಂತೆ 10,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ ಪ್ರತಿ ಕಿ.ಮೀ 42 ರೂ.ನಂತೆ 12,600 ರೂ. ನಿಗದಿ ಮಾಡಲಾಗಿದೆ.

ಬಿ.ಎಸ್- 6 ಬಸ್ 41 ಆಸನಗಳಿಗೆ 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 60 ರೂ.ನಂತೆ 9,000 ರೂ. ಹಾಗೂ 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀಗೆ ಪ್ರತಿ ಕಿ.ಮೀಗೆ 55 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ.

24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ ಪ್ರತಿ ಕಿ.ಮೀಗೆ 50 ರೂ.ನಂತೆ 12,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀಗೆ ಪ್ರತಿ ಕಿ.ಮೀ ದರ 50 ರೂ.ನಂತೆ 15,000 ರೂ. ಗೊತ್ತುಪಡಿಸಲಾಗಿದೆ.

Shwetha M