ಸಿಲಿಕಾನ್‌ ಸಿಟಿ ಮಂದಿಗೆ ಶಾಕ್‌ ಕೊಟ್ಟ ಬಿಎಂಆರ್‌ಸಿಎಲ್‌! – ಫೆ.9ರಿಂದ ಮೆಟ್ರೋ ದರ ಏರಿಕೆ?

ಸಿಲಿಕಾನ್‌ ಸಿಟಿ ಮಂದಿಗೆ ಶಾಕ್‌ ಕೊಟ್ಟ ಬಿಎಂಆರ್‌ಸಿಎಲ್‌! – ಫೆ.9ರಿಂದ ಮೆಟ್ರೋ ದರ ಏರಿಕೆ?

ಸಿಲಿಕಾನ್‌ ಸಿಟಿ ಮಂದಿಗೆ ಬಿಎಂಆರ್‌ಸಿಎಲ್‌ ಶಾಕ್‌ ಕೊಟ್ಟಿದೆ. ಮತ್ತೆ ನಮ್ಮ ಮೆಟ್ರೋ ದರ ಏರಿಕೆ ಮಾಡಲು ನಿರ್ಧರಿಸಿದೆ. ಇದೀಗ ನಮ್ಮ ಮೆಟ್ರೋ ದರ ಏರಿಕೆ ಮಾಡಲು ಸರ್ಕಾರ ಕೂಡ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌! – ಪಿಂಕ್ ಲೈನ್ ಮೆಟ್ರೋಗೆ ಬಂತು ಇನ್ನೊಂದು ರೈಲು

ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ101.5ರಷ್ಟು ಏರಿಸಲಾಗಿತ್ತು. ಇದಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ದಿನಗಳಲ್ಲೇ ದರವನ್ನು ಶೇ.71.5ಕ್ಕೆ ಇಳಿಸಲಾಗಿತ್ತು. ಆ ಘಟನೆ ಇನ್ನೂ ಪ್ರಯಾಣಿಕರ ಮನಸ್ಸಿಂದ ಮಾಸುವ ಮೊದಲೇ ಮತ್ತೆ ದರ ಏರಿಕೆಯ ಚರ್ಚೆ ಆರಂಭವಾಗಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ನಮ್ಮ ಮೆಟ್ರೋ ದರ ಏರಿಕೆಗೆ ಮತ್ತೆ ಬಿಎಂಆರ್‌ಸಿಎಲ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಬೋರ್ಡ್ ಸಭೆಯಲ್ಲಿ ಶೇ 5ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿತ್ತು. ಇದೀಗ ಮೆಟ್ರೋ ದರ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ ಎನ್ನಲಾಗುತ್ತಿದೆ.

ಬಿಎಂಆರ್‌ಸಿಎಲ್ ಬೋರ್ಡ್ ಮೀಟಿಂಗ್‌ನಲ್ಲಿ ಶೇ.5 ರಷ್ಟು ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಫೆಬ್ರವರಿ 9ರಿಂದ ಮತ್ತೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ ಇದೆ. ಈ ವರ್ಷ ದರ ಏರಿಕೆ ಮಾಡದಿದ್ದರೆ ಮುಂದಿನ ವರ್ಷ 10%ರಷ್ಟು ದರ ಏರಿಕೆ ಮಾಡಬೇಕಾಗುತ್ತದೆ ಎಂದು ನಮ್ಮ ಮೆಟ್ರೋ ಹೇಳುತ್ತಿದೆ.

Shwetha M