ಪ್ರಯಾಣಿಕರ ಆಕ್ರೋಶಕ್ಕೆ ಮಣಿದ BMRCL –  ನಮ್ಮ ಮೆಟ್ರೋ ಟಿಕೆಟ್ ಬೆಲೆ ಇಳಿಕೆ

ಪ್ರಯಾಣಿಕರ ಆಕ್ರೋಶಕ್ಕೆ ಮಣಿದ BMRCL –  ನಮ್ಮ ಮೆಟ್ರೋ ಟಿಕೆಟ್ ಬೆಲೆ ಇಳಿಕೆ

ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಪ್ರಯಾಣಿಕರು ಬಿಎಂಆರ್‌ಸಿಎಲ್‌ ವಿರುದ್ಧ ಆಕ್ರೋಶಗೊಂಡಿದ್ರು. ಕೆಲ ಕಡೆಗಳಲ್ಲಿ ಪ್ರತಿಭಟನೆ ಕೂಡ ನಡೆದಿತ್ತು. ಇದೀಗ ಜನಾಕ್ರೋಶ ಬೆನ್ನಲ್ಲೇ ಬಿಎಂಆರ್‌ಸಿಎಲ್‌ ಟಿಕೆಟ್‌ ದರ ತುಸು ಇಳಿಸಿದೆ.

ಇದನ್ನೂ ಓದಿ: ಮೋದಿ ಬಗ್ಗೆ ಟ್ರಂಪ್ ಹೇಳಿದ್ದೇನು- ಭಾರತಕ್ಕೆ F_35 ಯುದ್ಧ ವಿಮಾನ ಪೂರೈಕೆಗೆ ಒಪ್ಪಿಗೆ

ಮೆಟ್ರೋ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದ ಬೆನ್ನಲ್ಲೇ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಬಿಎಂಆರ್​ಸಿಎಲ್ ಎಂಡಿ ಮಹೇಶ್ವರ್ ರಾವ್, ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಕಡಿಮೆ ಮಾಡಲಾಗುವುದು. ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಆದರೆ, ನಮ್ಮ ಮೆಟ್ರೋ ಪ್ರಯಾಣದ ಕನಿಷ್ಠ ಹಾಗೂ ಗರಿಷ್ಠ ದರದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಇದೀಗ ಬಿಎಂಆರ್​ಸಿಎಲ್, ಶೇ 90 ರಿಂದ 100 ರಷ್ಟು ದರ ಹೆಚ್ಚಳ ಮಾಡಿರುವ ನಿಲ್ದಾಣಗಳ ಮಧ್ಯೆ ದರವನ್ನ ಕೊಂಚ ಇಳಿಕೆ ಮಾಡಿದೆ.

ಯಾವ ನಿಲ್ದಾಣದಿಂದ ಎಲ್ಲಿಗೆ ಎಷ್ಟು ದರ ಇಳಿಕೆ?

  • ಮೆಜೆಸ್ಟಿಕ್​​ನಿಂದ ವೈಟ್​ಫಿಲ್ಡ್​ಗೆ 90 ರೂ. ಇದ್ದ ದರ ಈಗ 80 ರೂ. ಆಗಿದೆ.
  • ಮೆಜೆಸ್ಟಿಕ್​​ನಿಂದ ಚಲ್ಲಘಟ್ಟಕ್ಕೆ 70 ರೂ. ಇದ್ದ ದರ ಈಗ 60 ರೂ. ಆಗಿದೆ
  • ಮೆಜೆಸ್ಟಿಕ್​​ನಿಂದ ವಿಧಾನಸೌಧಕ್ಕೆ 20 ರೂ. ಇದ್ದ ದರ ಈಗ 10 ರೂ. ಆಗಿದೆ
  • ಮೆಜೆಸ್ಟಿಕ್​​ನಿಂದ ಕಬ್ಬನ್​ಪಾರ್ಕ್​ಗೆ ಇದ್ದ 20 ರೂ. ದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
  • ಮೆಜೆಸ್ಟಿಕ್​​ನಿಂದ ಬೈಯಪ್ಪನಹಳ್ಳಿಗೆ 60 ಇದ್ದ ದರ ಈಗ 50 ರೂ. ಆಗಿದೆ.
  • ಮೆಜೆಸ್ಟಿಕ್​​ನಿಂದ ರೇಷ್ಮೆ ಸಂಸ್ಥೆಗೆ ಇದ್ದ 70 ರೂ. ದರ ಈಗ 60 ರೂ. ಆಗಿದೆ.
  • ಜಾಲಹಳ್ಳಿಯಿಂದ ರೇಷ್ಮೆ ಸಂಸ್ಥೆಗೆ 90 ರೂ. ದರದಲ್ಲಿ ಬದಲಾವಣೆ ಇಲ್ಲ.
  • ನಮ್ಮ ಮೆಟ್ರೋ ಕನಿಷ್ಠ, ಗರಿಷ್ಠ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ

Shwetha M

Leave a Reply

Your email address will not be published. Required fields are marked *