ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮುಂದೆ ನಿಲ್ದಾಣಗಳಲ್ಲಿ ಪಾರ್ಕಿಂಗ್ ಫ್ರೀ!

ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಸುತ್ತಲೇ ಇದೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಇದೆ. ಇನ್ಮುಂದೆ ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ನೀಡಲಾಗುತ್ತಿದೆ.
ಇದನ್ನೂ ಓದಿ: ಕತ್ತರಿಸಿ ಕ್ಲೀನ್ ಮಾಡಿದ್ರೂ ಸಾಯದ ಮೀನು! – ತಟ್ಟೆಯಲ್ಲೇ ಒದ್ದಾಡುತ್ತಿದೆ ಬಂಗುಡೆ!
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮೆಟ್ರೋ ನಿಲ್ದಾಣಗಳಿಗೆ ಲಾಸ್ಟ್–ಮೈಲ್ ಸಂಪರ್ಕವಾಗಿ ಸೈಕ್ಲಿಂಗ್‌ನ್ನು ಉತ್ತೇಜಿಸುವ ಉದ್ದೇಶದಿಂದ ನಗರದಲ್ಲಿನ ಒಂಬತ್ತು ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ಒದಗಿಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಇತ್ತೀಚೆಗೆ ಆಹ್ವಾನಿಸಿರುವ ಟೆಂಡರ್ ಮೂಲಕ ಪ್ರಕಟಿಸಲಾಗಿದೆ. ಫೆಬ್ರವರಿ 9ರವರೆಗೆ ಟೆಂಡರ್ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಬಳಿಕ ಸಂಸ್ಥೆಯನ್ನು ಅಂತಿಮಗೊಳಿಸಲಾಗುವುದು. ಪ್ರಸ್ತುತ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್‌ಗೆ ಗಂಟೆಗೆ ಒಂದು ರೂ. ಮತ್ತು ದಿನಕ್ಕೆ ಗರಿಷ್ಠ 10 ರೂ. ಶುಲ್ಕ ವಿಧಿಸಲಾಗುತ್ತಿದೆ. ನಿಗಮದ ಈ ಯೋಜನೆಗೆ ಸೈಕಲಿಸ್ಟ್ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯಾವೆಲ್ಲಾ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಜಾರಿ
- ಪರ್ಪಲ್ ಲೈನ್ – ಮೈಸೂರು ರಸ್ತೆ, ಬ್ಯಾಪನಹಳ್ಳಿ
- ಗ್ರೀನ್ ಲೈನ್ – ಮಡವಾರ, ಪೀಣ್ಯ ಇಂಡಸ್ಟ್ರಿ, ಜೆಪಿ ನಗರ
- ಯೆಲ್ಲೋ ಲೈನ್ – ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ, ರಾಗಿಗುಡ್ಡ, ಜಯದೇವ ಆಸ್ಪತ್ರೆ

ನೋಡಿರಿ

