ಶುಗರ್ ಕಂಟ್ರೋಲ್‌ನಲ್ಲಿಡಲು ಈ ಹಣ್ಣು ಬೆಸ್ಟ್! – ಈ ಹಣ್ಣನ್ನು ಯಾವಾಗ ಸೇವಿಸಬೇಕು?

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಧುಮೇಹದ ಕಾಯಿಲೆ ಸಾಮಾನ್ಯವಾಗಿದೆ. ಅನೇಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಧುಮೇಹಕ್ಕೂ ಮುನ್ನ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲೇ ಕಾಳಜಿ ವಹಿಸದಿದ್ದರೆ ಶುಗರ್ ಮಟ್ಟವು ಏರಿಕೆಯಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಶುಗರ್ ಸಮಸ್ಯೆ ನಿಮ್ಮನ್ನ ಕಾಡುತ್ತಿದ್ದರೆ ಈ ಹಣ್ಣನ್ನ ಸೇವಿಸೋದು ಉತ್ತಮ.
ಇದನ್ನೂ ಓದಿ:ನನ್ನ ಆಟಕ್ಕೆ ಯಾರೂ ಡಿಸ್ಟರ್ಬ್ ಮಾಡಬೇಡಿ! – ಚೆಂಡಾಟವಾಡಲು ಅಡ್ಡಿಯಾದ ಕುರ್ಚಿಗೆ ಗತಿ ಕಾಣಿಸಿದ ಮರಿಯಾನೆ!
ಇತ್ತೀಚೆಗೆ ಅನೇಕರಲ್ಲಿ ಶುಗರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲೇ ಎಚ್ಚರಿಕೆ ವಹಿಸದಿದ್ರೆ ಅನಾಹುತ ಕಟ್ಟಿಟ್ಟಬುತ್ತಿ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಥವಾ ಬ್ಲಡ್ ಶುಗರ್ ಹೆಚ್ಚಾಗಿದ್ದಾಗ ಅದನ್ನು ನಿಯಂತ್ರಣ ದಲ್ಲಿಯೇ ಉಳಿಸುವ ಆಹಾರವನ್ನು ಸೇವಿಸಬೇಕಾಗುತ್ತದೆ.ಇಲ್ಲವಾದರೆ ಬ್ಲಡ್ ಶುಗರ್ ಹೆಚ್ಚಳವಾಗಿ ಬೇರೆ ಬೇರೆ ರೋಗಗಳಿಗೆ ಕಾರಣವಾಗಬಹುದು. ಶುಗರ್ ಕಂಟ್ರೋಲ್‌ನಲ್ಲಿರಬೇಕಾದ್ರೆ ಚಕೋತಾ ಹಣ್ಣನ್ನ ಆದಷ್ಟು ಸೇವಿಸಿ.
ಚಕೋತಾ ಹಣ್ಣಿನಲ್ಲಿ ವಿಟಮಿನ್ ಸಿ,ಉತ್ಕರ್ಷಣ ನಿರೋಧಕಗಳು ಮತ್ತು ಅಪಾರ ಪ್ರಮಾಣದ ಫೈಬರ್ ಅಡಗಿದೆ. ಕೆಂಪು ಗುಲಾಬಿ ಬಣ್ಣ ಹೊಂದಿರುವ ಚಕೊತಾ ಹೆಚ್ಚಿನ ಪ್ರಮಾಣದ ಲೈಕೋಪೀನ್ ಅನ್ನು ಹೊಂದಿರುತ್ತದೆ. ಇದು ಜೀವಕೋಶಗಳಿಗೆ ನೈಸರ್ಗಿಕ ಅಗತ್ಯ ಪೋಷಕಾಂಶವಾಗಿದೆ. ಚಕೊತಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣು. ಇದರಲ್ಲಿರುವ GI ಸುಮಾರು 25. ಹಾಗಾಗಿ ಈ ಹಣ್ಣು ರಕ್ತದಲ್ಲಿನ ಸಕ್ಕರೆಯನ್ನು ಏರಲು ಬಿಡುವುದಿಲ್ಲ.
ಒಂದು ಅಧ್ಯಯನದ ಪ್ರಕಾರ ಊಟಕ್ಕೆ 15 ನಿಮಿಷ ಮೊದಲು ಚಕೊತಾ ಹಣ್ಣಿನ ತಿರುಳನ್ನು ಸೇವಿಸಿದರೆ ಆಹಾರ ಸೇವನೆ ನಂತರವೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ ಎನ್ನಲಾಗಿದೆ. ಇದು ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದು ಬ್ಲಡ್ ಶುಗರ್ ಕಂಟ್ರೋಲ್ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್, ಕರುಳಿನ ಕ್ಯಾನ್ಸರ್ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ನಿತ್ಯ ಚಕೊತಾ ಹಣ್ಣು ಸೇವಿಸಿದರೆ LDL ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು 15.5% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ಪ್ರತಿ ಊಟಕ್ಕೂ ಮೊದಲು ಈ ಹಣ್ಣನ್ನು ತಿಂದರೆ ಅಥವಾ ಇದರ ಜ್ಯೂಸ್ ಸೇವಿಸಿದರೆ ತೂಕ ಕಳೆದುಕೊಳ್ಳುವ ಪ್ರಕ್ರಿಯೆ ಕೂಡಾ ವೇಗವಾಗಿ ನಡೆಯುತ್ತದೆ.

ನೋಡಿರಿ

