ಮುಟ್ಟಿನ ನೋವು ತಡೆಯಲಾರದೆ ನೋವು ನಿವಾರಕ ಮಾತ್ರೆ ಸೇವನೆ – ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಬಾಲಕಿ ಸಾವು

ಮುಟ್ಟಿನ ನೋವು ತಡೆಯಲಾರದೆ ನೋವು ನಿವಾರಕ ಮಾತ್ರೆ ಸೇವನೆ – ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಬಾಲಕಿ ಸಾವು

ಋತುಸ್ರಾವದ ಸಮಯದಲ್ಲಿ ಹೊಟ್ಟೆಯ ನೋವು, ಸೆಳೆತ ಮಹಿಳೆಯರನ್ನು ಬೆಂಬಿಡದಂತೆ ಕಾಡುತ್ತೆ. ಈ ನೋವು ತಡೆಯಲಾರದೆ ಅನೇಕರು ನೋವು ನಿವಾರಕ ಮಾತ್ರೆ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಇದು ದೇಹಕ್ಕೆ ಒಳ್ಳೆಯದ್ದಲ್ಲ ಎಂದು ಮನೆಯವರು ಹೇಳಿದ್ರೂ ಇಂದಿನ ದುಡಿಯುವ ಯುಗದಲ್ಲಿ ಹೊಟ್ಟೆ ನೋವಿನಿಂದಾಗಿ ದುಡಿಯದೇ ಮನೆಯಲ್ಲೇ ಕುಳಿತು ರೆಸ್ಟ್ ಮಾಡುವುದು ಅಸಾಧ್ಯ. ತಕ್ಷಣಕ್ಕೆ ನೋವಿನಿಂದ ಮಾತ್ರೆ ಕಡಿಮೆ ಮಾಡಿದ್ರೂ ಕಾಲ ಕ್ರಮೇಣ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ನೀವೂ ಕೂಡ ಈ ಅಭ್ಯಾಸ ಹೊಂದಿದ್ರೆ ಈಗ್ಲೇ ಬಿಟ್ಟುಬಿಡಿ. ಇಲ್ಲೊಬ್ಬಳು ಬಾಲಕಿ ನೋವು ನಿವಾರಕ ಮಾತ್ರೆ ಸೇವಿಸಿ ಸಾವಿನ ಕದ ತಟ್ಟಿದ್ದಾಳೆ.

ಇದನ್ನೂ ಓದಿ: ಶಾಲೆಗೆ ಹೊರಟ ಬಾಲಕಿ ವಾಪಸ್‌ ಬರಲೇ ಇಲ್ಲ! – ಹೃದಯಾಘಾತದಿಂದ 7 ನೇ ತರಗತಿ ವಿದ್ಯಾರ್ಥಿನಿ ಸಾವು

ಹೌದು, ಮುಟ್ಟಿನ ನೋವು ತಡೆಯಲಾರದೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಲೈಲಾ(16) ಎಂದು ಗುರುತಿಸಲಾಗಿದೆ.

ಮೃತಪಟ್ಟ ಬಾಲಕಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದಳು. ಅವರ ಸಲಹೆಯಂತೆ ಋತು ಸ್ರಾವದ ಮೊದಲ ದಿನದಿಂದ ಲೈಲಾ ಮಾತ್ರೆ ಸೇವಿಸಲು ಪ್ರಾರಂಭಿಸಿದ್ದಾಳೆ. ಇದರ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ

ಸಾಮಾನ್ಯವಾಗಿ ಮಾತ್ರೆ ತೆಗೆದುಕೊಂಡಾಗ ಮೂರರಿಂದ ನಾಲ್ಕು ದಿನಗಳಲ್ಲಿ ನೋವು ಕಡಿಮೆಯಾಗುತ್ತಿತ್ತು. ಆದರೆ ಒಂದು ದಿನ ಈಕೆಯ ಮುಟ್ಟಿನ ನೋವು ಉಲ್ಬಣಗೊಂಡಿದೆ. ಪರಿಣಾಮ ಡಿಸೆಂಬರ್​​​ 05ರ ವೇಳೆಗೆ ಆಕೆಯ ಸ್ಥಿತಿ ಹದಗೆಟ್ಟಿತು. ಸ್ನಾನಗೃಹದಲ್ಲಿ ಕುಸಿದು ಬಿದ್ದಾಳೆ. ಬಳಿಕ ಬಾಲಕಿಯ ಕಾಲುಗಳಲ್ಲಿಯೂ ತೊಂದರೆ ಕಾಣಿಸಿಕೊಂಡಿದೆ. ಕುಟುಂಬವು ಅವಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಲೈಲಾ ವಿಪರೀತ ವಾಂತಿ ಭೇದಿ ಹಾಗೂ ತಲೆನೋವಿನಿಂದ ಕೂಡ ಬಳಲುತ್ತಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ತೀವ್ರ ಒದ್ದಾಟವನ್ನು ಕಂಡು ಸಿಟಿ ಸ್ಕ್ಯಾನ್ ಮಾಡಿಸಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ಸಹ ಚಿಕಿತ್ಸೆ ಫಲಕಾರಿಯಾಗದೆ, ಮೆದುಳು ನಿಷ್ಕ್ರಿಯಗೊಂಡು ಬಾಲಕಿ ಸಾವನ್ನಪ್ಪಿದ್ದಾಳೆ.

ಕುಟುಂಬವು ಲೈಲಾ ಅವರ ಅಂಗಗಳನ್ನು ದಾನ ಮಾಡಿದೆ. ಕ್ರಿಸ್‌ಮಸ್‌ಗೆ ಕೆಲವು ದಿನಗಳ ಮೊದಲು ಲಾಯ್ಲಾ ಅವರ ಅಂಗಗಳು ಐದು ಜೀವಗಳನ್ನು ಉಳಿಸಿವೆ ಎಂದು ವೈದ್ಯರು ಬಾಲಕಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

Shwetha M