ಹಲ್ಲಿನ ವಸಡಿನಲ್ಲಿ ರಕ್ತ ಬರ್ತಿದ್ಯಾ? – ಈ ಮನೆಮದ್ದು ಟ್ರೈ ಮಾಡಿ!

ನಿಮ್ಮ ಹಲ್ಲಿನ ವಸಡಿನಲ್ಲಿ ರಕ್ತ ಬರ್ತಿದ್ಯಾ? ಏನ್ ಮಾಡಿದ್ರೂ ಕಡಿಮೆ ಆಗ್ತಿಲ್ವಾ? ಹಾಗಾದ್ರೆ ಎಚ್ಚರ.. ನಿಮ್ಮ ಹಲ್ಲು ಡೇಂಜರ್ ಝೋನ್‌ನಲ್ಲಿದೆ ಎಂದರ್ಥ. ಅಷ್ಟಕ್ಕೂ ಹಲ್ಲಿನ ವಸಡಿನಲ್ಲಿ ರಕ್ತ ಬರೋದ್ಯಾಕೆ? ಕಾರಣ ಏನು? ಇದು ಕಡಿಮೆ ಆಗ್ಬೇಕು ಅಂದ್ರೆ ಏನ್ ಮಾಡ್ಬೇಕು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Pizza ತಿನ್ನೋ ಮುನ್ನ ಎಚ್ಚರ! – Pizzaದಿಂದಲೇ ಈ ಸಮಸ್ಯೆ ಬರುತ್ತೆ?
ಅಂದ್ಹಾಗೆ, ಅಂದ್ಹಾಗೆ, ಬ್ರಷ್ ಮಾಡುವಾಗ, ಆಗಾಗ ಹಲ್ಲಿನ ವಸಡುಗಳಲ್ಲಿ ರಕ್ತ ಬರೋದಿಕ್ಕೆ ವಸಡಿನ ಕಾಯಿಲೆ ಅಂತ ಕರೆಯಲಾಗುತ್ತೆ, ವಸಡು ಮತ್ತು ಬೋನ್ ನಡುವೆ ಇನ್ಫೆಕ್ಷನ್ ಆದಾಗ ಹೀಗೆ ಆಗುತ್ತೆ. ಇದಲ್ಲದೇ, ಸರಿಯಾಗಿ ಬ್ರಶ್ ಮಾಡದಿದ್ದರೆ ಮತ್ತು ದಿನಕ್ಕೆ ಎರಡು ಬಾರಿ ಬ್ರಶ್ ಮಾಡದೇ ಇದ್ರೆ, ಡಯಾಬಿಟಿಸ್, ಹೆರಿಡಿಟಿಯಿಂದ, ಧೂಮಪಾನ ಮಾಡುವುಡು, ಪಾನ್ ತಿನ್ನುವುದರಿಂದಲೂ ವಸಡಿನ ಸೋಂಕು ಕಂಡು ಬರುತ್ತದೆ. ವಸಡು ಇನ್ಫೆಕ್ಷನ್‌ನ ಆರಂಭಿಕ ಹಂತದಲ್ಲಿ ಸಣ್ಣ ಪ್ರಮಾಣದಲ್ಲಿ ನೋವಿನ ಅನುಭವವಾಗುತ್ತದೆ. ಬಳಿಕ ವಸಡು ಊದಿಕೊಳ್ಳುವುದು, ವಸಡಿನ ಭಾಗದಲ್ಲಿ ರಕ್ತ ಬರೋದು, ವಸಡಿನ ಭಾಗ ಕೆಂಪಾಗಲು ಶುರುವಾಗುತ್ತೆ. ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಾವು ನಿರ್ಲಕ್ಷ್ಯ ಮಾಡ್ಬಾರ್ದು. ಯಾಕಂದ್ರೆ ಆರಂಭದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡಿಲ್ಲ ಅಂದ್ರೆ, ಇನ್ಫೆಕ್ಷನ್ ಹಲ್ಲಿನ ಎಲುಬು ತನಕ ಹೋಗಿ ಬೋನ್ ಇನ್‌ಫೆಕ್ಷನ್ ಕೂಡ ಆಗಬಹುದು. ಇದ್ರಿಂದಾಗಿ ಎಲುಬಿನ ಶಕ್ತಿ ಕ್ಷೀಣಿಸುತ್ತೆ. ಕಾಲ ಕಳೆದಂತೆ ಹಲ್ಲುಉದುರಿ ಹೋಗುವ ಸಾಧ್ಯತೆ ಇದೆ.
ಇನ್ನು ವಸಡಿನ ಸಮಸ್ಯೆ ಕಂಡುಬಂದಾಗ ಅದಕ್ಕೆ ನಿರ್ದಿಷ್ಟವಾದ ಚಿಕಿತ್ಸಾ ವಿಧಾನ ಇದೆ. ಸಣ್ಣ ಮಟ್ಟದಲ್ಲಿ ವಸಡಿನ ಸಮಸ್ಯೆ ಕಂಡು ಬಂದ್ರೆ, ಹಲ್ಲು ಕ್ಲೀನ್ ಮಾಡಿ ಬಳಿಕ ಎರಡು ಹೊತ್ತು ಬ್ರಶ್ ಮಾಡುವುದನ್ನು ಮುಂದುವರಿಸಬೇಕು. ಮೌತ್ ವಾಶ್ ಬಳಸಿದ್ರೆ ಇನ್ಫೆಕ್ಷನ್ ಕಡಿಮೆಯಾಗುತ್ತೆ. ಆದ್ರೆ ಇಷ್ಟು ಮಾಡಿಯೂ ಕಡಿಮೆ ಆಗಿಲ್ಲ ಅಂದ್ರೆ, ನೀವು ಆದಷ್ಟು ಬೇಗ ವೈದ್ಯ ಹತ್ರ ಹೋದೋಗು ಬೆಸ್ಟ್.. ಇಲ್ಲ ಅಂದ್ರೆ ಮುಂದೆ ಸರ್ಜರಿ ಮಾಡಿಸಿಕೊಳ್ಳುವಂತಹ ಸಿಚುವೇಷನ್ ಕೂಡ ಎದುರಾಗ್ಬೋದು. ಸೋ ಆದಷ್ಟು ನೀವು ಎರಡು ಬಾರಿ ಬ್ರಶ್ ಮಾಡಿ. ಗುಟ್ಕಾ ತಿನ್ನೋದನ್ನ ನಿಲ್ಸಿ, ಸ್ಮೋಕಿಂಗ್ ಮಾಡ್ಬೇಡಿ. ಆಗಾಗ ಮೌತ್ ವಾಶ್ ಮಾಡ್ತಾ ಇದ್ರೆ, ನಿಮ್ಮ ವಸಡು ಇನ್ಪೆಕ್ಷನ್‌ಗೆ ತುತ್ತಾಗಲ್ಲ.

ನೋಡಿರಿ

