ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗವೇ ಕಾರಣ – ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ಬಹಿರಂಗ..!

ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ದುರಂತ ಅಂತ್ಯಕ್ಕೆ ಕಾರಣ ಕೊನೆಗೂ ಬಯಲಾಗಿದೆ. 31 ಕೃಷ್ಣಮೃಗಗಳು ಸಾವನ್ನಪ್ಪಿರುವುದಕ್ಕೆ ಕಾರಣ ಏನು ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ:31 ಕೃಷ್ಣ ಮೃಗಗಳ ಸಾವಿನ ರಹಸ್ಯ ಬಹಿರಂಗ – ಹೆಮರೇಜಿಕ್ ಸೆಪ್ಟಿಸಿಮಿಯಾ ಬ್ಯಾಕ್ಟೀರಿಯಾ ಸೋಂಕು ಕಾರಣ
ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಮೃತಪಟ್ಟ ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕಿದೆ. ಲ್ಯಾಬ್ ವರದಿ ಬಂದಿದ್ದು, 31 ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗವೇ ಕಾರಣ ಎನ್ನುವುದು ದೃಢವಾಗಿದೆ. ಹಿಮೋರಿಜಿಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾದಿಂದ ಮೃತಪಟ್ಟಿವೆ ಎಂದು ದಕ್ಷಿಣ ಪ್ರಾದೇಶಿಕ ರೋಗಪತ್ತೆ ಪ್ರಯೋಗಾಲಯ ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯಕೀಯ ಜೀವಶಾಸ್ತ್ರ ರೋಗ ಪತ್ತೆ ಬ್ಯಾಕ್ಟೀರಿಯಾಲಜಿ ಮತ್ತು ಮೈಕಾಲಜಿ ಬೆಂಗಳೂರು ವರದಿ ನೀಡಿದೆ. ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಗಳು ಇದ್ದವು. ಇವುಗಳ ಪೈಕಿ 31ಕೃಷ್ಣ ಮೃಗಗಳು ನಾಲ್ಕು ದಿನದ ಅಂತರದಲ್ಲಿ ಸಾವನ್ನಪ್ಪಿದ್ದವು. ಇನ್ನೂಳಿದ 7 ಕೃಷ್ಣಮೃಗಗಳನ್ನ ನಿರಂತರವಾಗಿ ಚಿಕಿತ್ಸೆ ನೀಡಿ ಹಗಲಿರುಳು ಶ್ರಮಿಸಿ ಬದುಕಿಸಿಕೊಳ್ಳುವ ಕೆಲಸವನ್ನ ಅರಣ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಮಾಡಿದ್ದಾರೆ. ನಾಲ್ಕು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ ಲ್ಯಾಬ್ಗೆ ರವಾನಿಸಲಾಗಿತ್ತು. ಇದರಲ್ಲಿ ಪರೀಕ್ಷೆ ವೇಳೆ ಗಳಲೆ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಅನ್ನೋದು ಗೊತ್ತಾಗಿದೆ.
ಗಳಲೆ ರೋಗ ಅಂದರೆ, ಇದೊಂದು ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದ್ದು, ಇದಕ್ಕೆ ಹಿಮೋರಿಜನ್ ಸೆಪ್ಟಿಸಿಮಿಯಾ ಎಂದು ಕರೆಯುತ್ತಾರೆ. ಇದು ಸಸ್ಯಹಾರಿ ಪ್ರಾಣಿಗಳ ದೇಹದಲ್ಲಿರುತ್ತೆ. ವಾತಾವರಣದಲ್ಲಿ ಏರುಪೇರಾದಾಗ ಇದರ ಶಕ್ತಿ ಹೆಚ್ಚಾಗಿ ಕಿಡ್ನಿ, ಲಂಗ್ಸ್, ಹೃದಯ ಭಾಗ ಸೇರಿದಂತೆ ದೇಹದ ಎಲ್ಲಾ ಅಂಗಾಗಳನ್ನ ಹಾನಿ ಮಾಡುತ್ತೆ. ಈ ಬ್ಯಾಕ್ಟೀರಿಯಾ ಆ್ಯಕ್ಟೀವ್ ಆದ ಒಂದೇ ದಿನದಲ್ಲಿ ಪ್ರಾಣಿಗಳು ಸಾವನ್ನಪ್ಪುತ್ತವೆ. ಇದು ಗಾಳಿಯಿಂದಲೂ ರೋಗ ಹರಡುವ ಸಾಧ್ಯತೆ ಇದ್ದು, ಹೊರಗಿನಿಂದಲೂ ಪ್ರಾಣಿಗಳ ದೇಹ ಸೇರಿಕೊಂಡು ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿರಬಹುದು ಅನ್ನೋದು ಕೂಡ ಸಂಶಯ ಇದೆ. ಈ ರೋಗಕ್ಕೆ ಕನ್ನಡದಲ್ಲಿ ಗಳಲೆ ರೋಗ ಎಂದು ಕರೆಯುತ್ತಾರೆ. ಇದೇ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಅಂತಾ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ನೋಡಿರಿ

